ಕಲಬುರಗಿ : ಜಿಲ್ಲೆಗೆ ಭರ್ಜರಿ ಬೆಳೆ ಬರ ಪರಿಹಾರ ಬಿಡುಗಡೆಯಾಗಿದ್ದು, ಒಟ್ಟು 330.53 ಕೋಟಿ ರೂ ಬಿಡುಗಡೆಯಾಗಿ, ರೈತರ ಖಾತೆಗೆ ಡಿಬಿಟಿಯಾಗಿದೆ.
ಜಿಲ್ಲೆಗೆ ಒಟ್ಟು 330 ಕೋಟಿ ಬರ ಪರಿಹಾರ ಬಿಡುಗಡೆಯಾಗಿದೆ. ಇದರಲ್ಲಿ ರಾಜ್ಯ ಸರಕಾರ ಪ್ರತಿ ರೈತರಿಗೆ 2000 ರೂ.ಯಂತೆ ಒಟ್ಟು 56.02 ಕೋಟಿ ರೂ. ನೀಡಿದೆ.
ಜಿಲ್ಲೆಯಲ್ಲಿ ಬರೋಬ್ಬರಿ 2.76 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆಹಾನಿ ಪ್ರದೇಶವಾಗಿತ್ತು. ಇದರಲ್ಲಿ ಮಳೆಯಾಶ್ರಿತ ಪ್ರದೇಶ 2.50 ಲಕ್ಷ ಹೆಕ್ಟೇರ್ ಪ್ರದೇಶ ಬೆಳೆ ಹಾನಿಯಾಗಿದ್ದರೆ, 26,187 ಹೆಕ್ಟೇರ್ ಭೂ ಪ್ರದೇಶ ನೀರಾವರಿ ಹಾನಿಯಾಗಿತ್ತು.
ಜಿಲ್ಲೆಯಲ್ಲಿ ಒಟ್ಟು 2.82 ಲಕ್ಷ ರೈತರು ಬರ ಪರಿಹಾರವನ್ನು ಪಡೆಯಲಿದ್ದಾರೆ. ಆಳಂದದಲ್ಲಿ ಹೆಚ್ಚು ಅತಿ ಹೆಚ್ಚು 49,906 ರೈತರ ಬೆಳೆ ನಷ್ಟವಾಗಿತ್ತು. ಅತಿ ಕಡಿಮೆ ಶಹಾಬಾದ್‌ನಲ್ಲಿ 6826 ರೈತರ ಬೆಳೆ ಹಾನಿಯಾಗಿತ್ತು. ಪ್ರತಿ ಹೆಕ್ಟೇರ್ ಬೆಳೆಗೆ 8500 ರೂ. ಬೆಳೆ ಬರ ಪರಿಹಾರ ನೀಡಬೇಕೆಂದು ಸರಕಾರ ನಿರ್ಧರಿಸಿತ್ತು. ಇದರಂತೆ ರೈತರಿಗೆ ಈಗ ಬರ ಪರಿಹಾರ ನೀಡಲಾಗಿದೆ.
ರೈತರಿಗೆ ಕಳೆದ ವರ್ಷ ಬರ ಬಂದಿದ್ದರಿಂದ ನಷ್ಟಗೊಂಡಿದ್ದರು. ಕಳೆದ ವರ್ಷದ ಬೆಳೆ ಹಾನಿ ಪರಿಹಾರ ಈಗ ಬಂದಿದ್ದರಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಇನ್ನೇನು ಈಗಿನಿಂದಲೇ ಮುಂಗಾರು ತಯಾರಿ ನಡೆಸಿರುವ ಅನ್ನದಾತರಿಗೆ ಈ ಪರಿಹಾರ ಹಣ ಸಾಕಷ್ಟು ಅನುಕೂಲ ಆಗಲಿದೆ. ರೈತರಿಗೆ ಬಿತ್ತನೆ ಬೀಜ, ಗೊಬ್ಬರ ಖರೀದಿ ಸೇರಿ ಇತರೆ ಖರ್ಚುಗಳಿಗೆ ಪರಿಹಾರ ಹಣ ಸಂಜೀವಿನಿಯಾದಂತಾಗಿದೆ.
ಜಿಲ್ಲೆಯಲ್ಲಿ ಒಟ್ಟು 2.76 ಲಕ್ಷ ಹೆಕ್ಟೇರ್ ಭೂ ಪ್ರದೇಶ ಬರದಿಂದ ಹಾನಿಯಾಗಿತ್ತು. ಒಟ್ಟು 330 ಕೋಟಿ ಬರ ಪರಿಹಾರ ಬಿಡುಗಡೆಯಾಗಿದ್ದು, ಎಲ್ಲ ರೈತರ ಖಾತೆಗೆ ಡಿಬಿಟಿ ಮಾಡಲಾಗಿದೆ. ಒಟ್ಟು 2.82 ಲಕ್ಷ ರೈತರು ಬರ ಪರಿಹಾರ ಪಡೆದುಕೊಂಡಿದ್ದಾರೆ.
ಜತೆಗೆ ಕೇಂದ್ರದ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ನಿಯಮಗಳ ಪ್ರಕಾರ ಒಟ್ಟು 274.51 ಕೋಟಿ ರೂ. ಬರ ಪರಿಹಾರ ಬಿಡುಗಡೆಯಾಗಿತ್ತು. ಇದರಿಂದ ರಾಜ್ಯ ಮತ್ತು ಕೇಂದ್ರದ್ದು ಸೇರಿ ಪ್ರತಿ ಹೆಕ್ಟೇರ್‌ಗೆ 8500 ರೂ. ಪರಿಹಾರದಂತೆ ಒಟ್ಟು 330 ಕೋಟಿ ರೂ. ರೈತರ ಖಾತೆಗೆ ಡಿಬಿಟಿ ಮಾಡಲಾಗಿದೆ.