This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಡಿಸಿಸಿ ಬ್ಯಾಂಕ್ ಚುನಾವಣಿ:ಬಿರುಸಿನ ಮತದಾನ

ಡಿಸಿಸಿ ಬ್ಯಾಂಕ್ ಚುನಾವಣಿ:ಬಿರುಸಿನ ಮತದಾನ

ಬಾಗಲಕೋಟೆ:ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಸ್ಥಾನಕ್ಕೆ ಬಿರುಸಿನ ಮತದಾನ ನಡೆದಿದೆ.
ನಿರ್ದೇಶಕರ 13 ಸ್ಥಾನಗಳಲ್ಲಿ ಈಗಾಗಲೆ 2 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು ಉಳಿದ 11 ಸ್ಥಾನಗಳಿಗೆ ನಗರದ ಕಾಳಿದಾಸ ಕಾಲೇಜ್ ಮೈದಾನದಲ್ಲಿ ಬಿರುಸಿನ ಮತದಾನ ನಡೆದಿದ್ದು ಸಂಜೆ 4ರ ವರೆಗೂ ಮುಂದುವರೆಯಲಿದೆ.
ನಿರ್ದೇಶಕ ಸ್ಥಾನಕ್ಕೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ, ಶಾಸಕರಾದ ಸಿದ್ದು ಸವದಿ, ಆನಂದ ನ್ಯಾಮಗೌಡ, ಹನಮಂತ ನಿರಾಣಿ, ಮಾಜಿ ಶಾಸಕರಾದ ವಿಜಯಾನಂದ ಕಾಶಪ್ಪನವರ, ಎಚ್.ವೈ.ಮೇಟಿ ಸೇರಿದಂತೆ ಹಲವು ಘಟಾನುಘಟಿಗಳ ಭವಿಷ್ಯ ಸಂಜೆ ನಿರ್ಧಾರವಾಗಲಿದೆ.
ಮತದಾನದ ಸ್ಥಳವಾದ ಕಾಳಿದಾಸ ಕಾಲೇಜ್ ನಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪಕ್ಕದಲ್ಲಿನ ಅಂಜುಮನ್ ಸಂಸ್ಥೆಯ ಮೈದಾನದಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿತ್ತು. ಮತದಾನದ ಡೆಲಿಗೇಶನ್ ಹಕ್ಕು ಹೊಂದಿದವರನ್ನು ಚುನಾವಣರ ಅಭ್ಯರ್ಥಿಗಳು ಬಲು ಎಚ್ಚರಿಕೆಯಿಂದ ಕರೆದು ತರುತ್ತಿರುವುದು ಕಂಡು ಬಂದಿತು. ಕೇಂದ್ರಕ್ಕೆ ಮತದಾರರು ತೆರಳುವ ಮಾರ್ಗದಲ್ಲಿ ತಮಗೆ ಮತ ಹಾಕುವಂತೆ ವಿನಂತಿಸುತ್ತಿದ್ದರು. ಅಭ್ಯರ್ಥಿಗಳೆಲ್ಲ ಗೆಲುವು ನಮ್ಮದೇ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು.

";