This is the title of the web page
This is the title of the web page

Live Stream

July 2025
S M T W T F S
 12345
6789101112
13141516171819
20212223242526
2728293031  

| Latest Version 9.4.1 |

Politics News

ದೇವರಾಜ ನಾಮಪತ್ರ ಸಲ್ಲಿಕೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ 2ನೇ ಹಂತದಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆ ಕಾರ್ಯ ಭರದಿಂದ ಸಾಗಿತು.

ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಬುಧವಾರ ಬಹುತೇಕ ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದರು.

ಡಿ.11 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿತ್ತು. ಹೀಗಿದ್ದರೂ ಬುಧವಾರವೇ ಎಲ್ಲರೂ ನಾಮಪತ್ರ ಸಲ್ಲಿಕೆಗೆ ನಾ ಮುಂದು, ತಾ ಮುಂದು ಎನ್ನುತ್ತಿರುವುದು ಕಂಡು ಬಂದಿತು.

ಕಾಂಗ್ರೆಸ್ ಜಿಲ್ಲಾಧ್ಯಕ್ಷರ ತವರೂರಾದ ಸೂಳೇಬಾವಿಯಲ್ಲಿ ಗ್ರಾಪಂನ 26 ಸ್ಥಾನಗಳಿಗೆ 76 ನಾಮಪತ್ರ ಸಲ್ಲಿಕೆ ಆಗಿವೆ. ಐಹೊಳೆಯ 15 ಸ್ಥಾನಗಳಿಗೆ 56 ನಾಮಪತ್ರ ಸಲ್ಲಿಕೆ ಆಗಿವೆ.

ಸೂಳೇಬಾವಿಯಲ್ಲಿ ಕಾಂಗ್ರೆಸ್ ಯುವ ಮುಖಂಡ ದೇವರಾಜ ಕಮತಗಿ ವಾರ್ಡ್ ನಂ.3 ರಿಂದ ನಾಮಪತ್ರ ಸಲ್ಲಿಸಿದರು. ಇಲ್ಲಿ 4 ಸ್ಥಾನಗಳಿಗೆ 17 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿದ್ದಾರೆ.

ಡಿ.17 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ಡಿ.19 ರಂದು ನಾಮಪತ್ರ ವಾಪಸ್ ಪಡೆಯಲು ಅಂತಿಮ ದಿನವಾಗಿದ್ದು ಅಂದು ಸಂಜೆ ಸ್ಪಷ್ಟ ಚಿತ್ರಣ ದೊರೆಯಲಿದೆ.

Nimma Suddi
";