ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ಅಮೀನಗಡ ಪಟ್ಟಣ ಪಂಚಾಯತ ಕಚೇರಿಯಲ್ಲಿ ನಾಗರಿಕರಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಮಾಸ್ಕ್ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಪಪಂ ಸದಸ್ಯ ವಿಜಯಕುಮಾರ ಕನ್ನೂರ, 2020-21 ನೇ ಸಾಲಿನ ಎಸ್ ಎಫ್ ಸಿ ಹಾಗೂ ಪಟ್ಟಣ ಪಂಚಾಯಿತಿ ನಿಧಿಯ ಅಡಿಯಲ್ಲಿ ತಪಾಸಣೆ ಕೈಗೊಳ್ಳಲಾಗುತ್ತಿದೆ ಎಂದರು.
ಕೊರೊನಾ ಕಾಲಘಟ್ಟದಲ್ಲಿ ಹಲವು ಬಡ ಜನತೆ ವೈದ್ಯರ ಬಳಿ ತೆರಳಲು ಹಿಂಜರಿದ ಕಾರಣ ಕೆಲ ಹೃದಯ ಹಾಗೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಅಂತವರಿಗೆ ಅನುಕೂಲವಾಗಲೆಂದು ಇಂತಹ ಶಿಬಿರ ಅಯೋಜಿಸಲಾಗಿದೆ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಗುರುರಾಜ ಚೌಕಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಪಟ್ಟಣ ಪಂಚಾಯಿತಿ ಎಲ್ಲ ಸದಸ್ಯರ ಕಾಳಜಿಯಿಂದ ಜನರ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ಕೆ ಪಪಂ ಮುಂದಾಗಿದೆ ಎಂದರು.
ಪಪಂ ಅಧ್ಯಕ್ಷ ಸಂಗಪ್ಪ ತಳವಾರ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಶಂಕ್ರಮ್ಮ ಗೌಡರ, ಸದಸ್ಯರಾದ ಶಾಂತವ್ವ ಯಂಕಂಚಿ, ಮನೋಹರ ರಕ್ಕಸಗಿ, ಸಂಗಮೇಶ ಗೌಡರ, ಪರಶುರಾಮ ಪುರ್ತಗೇರಿ, ಹುಸೇನ ಪಟೇಲ್, ಜೆ ಎಚ್ ಐ ಸಂತೋಷ ವ್ಯಾಪಾರಿಮಠ, ಜೆ.ಡಿ.ಹೆಬ್ಳೀಕರ, ಐ.ಎಲ್.ಗುಡ್ಡದ ಇತರರು ಇದ್ದರು.