ನಿಮ್ಮ ಸುದ್ದಿ ಬಾಗಲಕೋಟೆ
ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವ ಎಸ್.ಸುರೇಶಕುಮಾರ ಜ.೧೫ ಹಾಗೂ ೧೬ರಂದು ಬಾಗಲಕೋಟೆ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
ಜ.೧೫ರಂದು ಸಂಜೆ ಹೊಸಪೇಟ್ ಮಾರ್ಗವಾಗಿ ಇಳಕಲ್ ಮೂಲಕ ಆಲಮಟ್ಟಿಗೆ ಪ್ರಯಾಣ ಬೆಳೆಸಲಿದ್ದಾರೆ. ಜ.೧೬ರಂದು ಬಬಲೇಶ್ವರ ಮಾರ್ಗವಾಗಿ ಜಿಲ್ಲೆಯ ಸಾವಳಗಿಗೆ ಬೆಳಗ್ಗೆ ೯.೩೦ಕ್ಕೆ ಆಗಮಿಸಲಿರುವ ಸಚಿವರು ಅಲ್ಲಿನ ನವೀಕರಿಸಿದ ಸಮೂಹ ಸಂಪನ್ಮೂಲ ಕೇಂದ್ರವನ್ನು ಉದ್ಘಾಟಿಸಲಿದ್ದಾರೆ.
೧೦.೩೦ಕ್ಕೆ ಜಮಖಂಡಿಯ ಪಿ.ಬಿ.ಹೈಸ್ಕೂಲ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಡಾ.ಗುರುದೇವ ರಾನಡೆ ಹೆಸರಿನ ಸಾಂಸ್ಕೃತಿಕ ಭವನ ವೀಕ್ಷಿಸಲಿದ್ದಾರೆ. ೧೧.೩೦ಕ್ಕೆ ಇನ್ಪೋಸಿಸ್ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಜಮಖಂಡಿ ತಾಲೂಕನ್ನು ಸಂಪೂರ್ಣ ಗಣಕೀಕೃತ ತಾಲೂಕನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸರಕಾರಿ ಶಾಲೆಗಳಿಗೆ ೪೦೦ ಕಂಪ್ಯೂಟರ್ ಹಾಗೂ ೧೦೦ ಶಾಲೆಗಳಿಗೆ ಗ್ರಂಥಾಲಯ ಪುಸ್ತಕ ವಿತರಣೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನ ೨.೩೦ಕ್ಕೆ ಚಿಮ್ಮಡದ ಸರಕಾರಿ ಪಪೂ ಕಾಲೇಜ್ ಉದ್ಘಾಟನೆ, ೪ಕ್ಕೆ ಮುಧೋಳದಲ್ಲಿ ೧೦೦ ಸರಕಾರಿ ಶಾಲೆಗಳಿಗೆ ಕಂಪ್ಯೂಟರ್ ವಿತರಣೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಂಜೆ ೪.೩೦ಕ್ಕೆ ಇಳಕಲ್ ಮಾರ್ಗವಾಗಿ ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.