ವಿಜಯಪುರ: ಲೋಕಸ‘ೆಗೆ ಕರ್ನಾಟಕದಲ್ಲಿ ನಡೆದ ಎರಡನೇ ಹಂತದ 14 ಲೋಕಸ‘ಾ ಕ್ಷೇತ್ರಗಳ ಚುನಾವಣೆಗೆ ಎಲ್ಲೆಡೆ ಮತೋತ್ಸವ ಕಂಡುಬಂದಿದೆ. ಸಂಜೆ 5 ಗಂಟೆ ವೇಳೆಗೆ 14 ಲೋಕಸಭಾ ಕ್ಷೇತ್ರಗಳಲ್ಲಿ 66.40ರಷ್ಟು ಮತದಾನವಾಗಿದೆ.
ಬಿರು ಬಿಸಿಲಿನ ನಡುವೆಯೂ ಬಾಗಲಕೋಟೆ ಜಿಲ್ಲೆಯಲ್ಲಿ ಸಂಜೆ 5 ಗಂಟೆ ವೇಳೆಗೆ ಶೇ.66ರಷ್ಟು ಮತದಾನವಾಗಿದ್ದರೆ, ವಿಜಯಪುರ ಜಿಲ್ಲೆಯಲ್ಲಿ ಶೇ.61.18ರಷ್ಟು ಮತದಾನವಾಗಿದೆ. ಉತ್ತರ ಕನ್ನಡದಲ್ಲಿ ಶೇ.70.61ರಷ್ಟು, ದಾವಣಗೆರೆಯಲ್ಲಿ ಶೇ.70.84ರಷ್ಟು, ‘ಾರವಾಡ 67, ಹಾವೇರಿ 72, ಬೆಳಗಾವಿ 67, ಕೊಪ್ಪಳ 66, ಚಿಕ್ಕೋಡಿ 73ರಷ್ಟು, ಶಿವಮೊಗ್ಗ 72.32ರಷ್ಟು ಮತದಾನವಾಗಿದೆ.
ಎಲ್ಲ ಕ್ಷೇತ್ರದಲ್ಲೂ ಮತದಾನ ಪ್ರಮಾಣದಲ್ಲಿ ಸಾಕಷ್ಟು ಹೆಚ್ಚಳ ಕಂಡಿದೆ. ಇನ್ನೂ ಸಂಜೆ 6 ಗಂಟೆಯವರೆಗೂ ಮತದಾನಕ್ಕೆ ಅವಕಾಶ ಇರುವುದರಿಂದ ಸಂಜೆ ಬಿಸಿಲಿನ ಪ್ರಮಾಣ ತಗ್ಗಲಿದ್ದುಘಿ, ಇನ್ನಷ್ಟು ಮತದಾರರು ಮತಗಟ್ಟೆಗೆ ಬಂದು ಮತದಾನ ಮಾಡಲಿದ್ದಾರೆ. ಇದು ಯಾವ ಪಕ್ಷಕ್ಕೆಘಿ, ಯಾವ ಅ‘್ಯರ್ಥಿಗೆ ಲಾ‘ವಾಗಲಿದೆ ಎಂಬ ಲೆಕ್ಕಾಚಾರವೂ ರಾಜಕೀಯ ವಲಯದಲ್ಲಿ ಜೋರಾಗಿಯೇ ನಡೆದಿದೆ.
14 ಮತಕ್ಷೇತ್ರಗಳಲ್ಲಿ ಸಣ್ಣ-ಪುಟ್ಟ ಘಟನೆಗಳನ್ನು ಹೊರತುಪಡಿಸಿ ಶಾಂತಿಯುತ ಮತದಾನ ನಡೆದಿದೆ. ಸಂಸದ ಪ್ರಲ್ಹಾದ ಜೋಶಿ ಹುಬ್ಬಳ್ಳಿಯಲ್ಲಿಘಿ, ರಮೇಶ ಜಿಗಜಿಣಗಿ, ರಾಜು ಆಲಗೂರ ವಿಜಯಪುರದಲ್ಲಿಘಿ, ಪಿ.ಸಿ.ಗದ್ದಿಗೌಡರ ಬಾದಾಮಿಯಲ್ಲಿ ಮತದಾನ ಮಾಡಿದ್ದಾರೆ.