This is the title of the web page
This is the title of the web page

Live Stream

December 2024
S M T W T F S
1234567
891011121314
15161718192021
22232425262728
293031  

| Latest Version 9.4.1 |

Health & Fitness

ಚರ್ಮದ ಸೌಂದರ್ಯ ಹೆಚ್ಚಿಸುವ ಅದ್ಭುತ ಪಾನೀಯ ಕಾಂಜಿಯ ಬಗ್ಗೆ ಕೂಡಲೇ ಅರಿತುಕೊಳ್ಳಿ

ಚರ್ಮದ ಸೌಂದರ್ಯ ಹೆಚ್ಚಿಸುವ ಅದ್ಭುತ ಪಾನೀಯ ಕಾಂಜಿಯ ಬಗ್ಗೆ ಕೂಡಲೇ ಅರಿತುಕೊಳ್ಳಿ

ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಕಪ್ಪು ಕ್ಯಾರೆಟ್ ಅಥವಾ ಬೀಟ್‌ರೂಟ್‌ಗಳನ್ನು ಬಳಸಿ ತಯಾರಿಸಲಾದ ಕಾಂಜಿ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತಿದ್ದು, ಕಾಂಜಿ ಉತ್ತರ ಪ್ರದೇಶ, ಪಂಜಾಬ್ ಮತ್ತು ರಾಜಸ್ಥಾನದಲ್ಲಿ ವಾಸಿಸುವ ಜನರು ಹೆಚ್ಚಾಗಿ ಸೇವಿಸುತ್ತಾರೆ.

ಕಾಂಜಿ ಮುಖ್ಯವಾಗಿ ಪ್ರಿಬಯಾಟಿಕ್ ಪಾನೀಯವಾಗಿದ್ದು ಇದು ಹಲವು ವರ್ಷಗಳಿಂದ ಆಹಾರದ ಪ್ರಮುಖ ಭಾಗವಾಗಿದ್ದು, ಕೊಂಬುಚಾ ಸೇವನೆಯು ಪ್ರಸಿದ್ಧಿ ಪಡೆಯುವುದಕ್ಕೂ ಮುಂಚೆಯೇ ಇದು ಅಸ್ತಿತ್ವದಲ್ಲಿತ್ತು. ಕಾಂಜಿ ತಯಾರಿಸಲು ಬಳಸಲಾಗುವ ಕಪ್ಪು ಕ್ಯಾರೆಟ್‌ಗಳು ತಮ್ಮ ಬಣ್ಣವನ್ನು ಆಂಥೋಸಯಾನಿನ್‌ನಿಂದ ಪಡೆಯುತ್ತವೆ. ಕಪ್ಪು ಕ್ಯಾರೆಟ್‌ನ ರುಚಿಯು ಸಾಮಾನ್ಯ ಕಿತ್ತಳೆ ಬಣ್ಣದ ಕ್ಯಾರೆಟ್‌ಗಿಂತ ಭಿನ್ನವಾಗಿರುತ್ತದೆ. ಚಳಿಗಾಲದಲ್ಲಿ ಮಾತ್ರ ಈ ಕ್ಯಾರೆಟ್ ಲಭ್ಯವಿರುತ್ತದೆ.

ಬೀಟ್​ರೂಟ್​ಗಳೊಂದಿಗೆ ಈ ಕ್ಯಾರೆಟ್​ಗಳನ್ನು ಬಳಸಿ, ಕಾಂಜಿಯನ್ನು ತಯಾರಿಸಲಾಗುತ್ತದೆ.ಕಾಂಜಿಯನ್ನು ನಿಯಮಿತವಾಗಿ ಸೇವಿಸಿದರೆ ಚರ್ಮಕ್ಕೆ ಸಾಕಷ್ಟು ಪ್ರಯೋಜನಗಳು ಉಂಟಾಗುತ್ತದೆ. ಈ ಪಾನೀಯವನ್ನು ಪ್ರತಿದಿನ ಸೇವಿಸುವುದರಿಂದ ತ್ವಚೆಗೆ ಹಲವು ರೀತಿಯ ಪ್ರಯೋಜನಗಳು ಉಂಟಾಗುತ್ತದೆ. ಕಾಂಜಿಯು ಬೀಟ್‌ರೂಟ್ ಅನ್ನು ಒಳಗೊಂಡಿರುತ್ತದೆ. ಆಂಟಿಆಕ್ಸಿಡೆಂಟ್‌ಗಳು ಮತ್ತು ವಿಟಮಿನ್ ಸಿ ಅಂಶ ಅಧಿಕವಾಗಿದೆ. ಇದು ಚರ್ಮದಲ್ಲಿ ಸ್ವತಂತ್ರ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸುಕ್ಕುಗಳು, ಕಪ್ಪು ಕಲೆಗಳು ಮತ್ತು ವಯಸ್ಸಾದ ಚಿಹ್ನೆಗಳನ್ನು ಕಡಿಮೆ ಮಾಡುತ್ತದೆ.

ಕಾಂಜಿಯಲ್ಲಿ ಬೆಟಾಲೈನ್‌ ಅಧಿಕವಾಗಿದೆ. ಇದು ಚರ್ಮಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದು ಹೊಳೆಯುವ ಮತ್ತು ಉತ್ತಮ ಮೈಬಣ್ಣವನ್ನು ಉಂಟುಮಾಡುತ್ತಿದ್ದು, ಕಾಂಜಿ ಉರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು ಅದು ದೇಹದಲ್ಲಿ ಮೊಡವೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

Nimma Suddi
";