This is the title of the web page
This is the title of the web page

Live Stream

January 2025
S M T W T F S
 1234
567891011
12131415161718
19202122232425
262728293031  

| Latest Version 9.4.1 |

National News

ಗುಡ್ ನ್ಯೂಸ್: ಎಜುಕೇಷನಲ್ ಕನ್ಸಲ್‌ಟಂಟ್‌ ಇಂಡಿಯಾ’ದಿಂದ 100 ಪಿಜಿಟಿ ಶಿಕ್ಷಕರ ನೇಮಕ

ಗುಡ್ ನ್ಯೂಸ್: ಎಜುಕೇಷನಲ್ ಕನ್ಸಲ್‌ಟಂಟ್‌ ಇಂಡಿಯಾ’ದಿಂದ 100 ಪಿಜಿಟಿ ಶಿಕ್ಷಕರ ನೇಮಕ

ಎಜುಕೇಷನಲ್ ಕನ್ಸಲ್‌ಟಂಟ್‌ ಇಂಡಿಯಾ ಲಿಮಿಟೆಡ್‌ ಕಂಪ್ಯೂಟರ್ ಸೈನ್ಸ್‌ / ಐಸಿಟಿ, ಭೌತಶಾಸ್ತ್ರ, ಕೆಮಿಸ್ಟ್ರಿ, ಗಣಿತ ವಿಷಯಗಳಲ್ಲಿ ಪೋಸ್ಟ್‌ ಗ್ರಾಜುಯೇಟ್‌ ಟೀಚರ್‌ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್‌ ಬಿಡುಗಡೆ ಮಾಡಿದ್ದು, ಈ ಹುದ್ದೆಗಳಲ್ಲಿ ಆಸಕ್ತಿ ಇರುವವರು ಕೆಳಗಿನ ಮಾಹಿತಿಗಳನ್ನು ತಿಳಿದು ಅರ್ಜಿ ಸಲ್ಲಿಸಿ.

ಶೈಕ್ಷಣಿಕ ಅರ್ಹತೆಗಳು : ಬಿ.ಇಡಿ ಶಿಕ್ಷಣದ ಜತೆಗೆ ಹುದ್ದೆಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಾಸ್‌ ಮಾಡಿರಬೇಕು.

ವಯಸ್ಸಿನ ಅರ್ಹತೆ : ಅರ್ಜಿ ಸಲ್ಲಿಸಲು ಬಯಸುವವರಿಗೆ ಗರಿಷ್ಠ 55 ವರ್ಷ ವಯಸ್ಸು ಮೀರಿರಬಾರದು.

ಪಿಜಿಟಿ ಶಿಕ್ಷಕರ ಹುದ್ದೆಗಳಿಗೆ ಆಯ್ಕೆಯಾದವರಿಗೆ ಮಾಸಿಕ ವೇತನ ವಿವರ ಕೆಳಗಿನಂತಿದೆ.
ಕಂಪ್ಯೂಟರ್ ಸೈನ್ಸ್‌ / ಐಸಿಟಿ ವಿಷಯ : Rs.1,40,000.
ಭೌತಶಾಸ್ತ್ರ ವಿಷಯ : Rs.1,40,000.
ಕೆಮಿಸ್ಟ್ರಿ ವಿಷಯ : Rs.1,40,000.
ಗಣಿತ ವಿಷಯ : Rs.1,40,000.

ಪಿಜಿಟಿ ಶಿಕ್ಷಕರ ಹುದ್ದೆಗಳ ವಿವರ
ಕಂಪ್ಯೂಟರ್ ಸೈನ್ಸ್‌ / ಐಸಿಟಿ ವಿಷಯ : 28
ಭೌತಶಾಸ್ತ್ರ ವಿಷಯ : 18
ಕೆಮಿಸ್ಟ್ರಿ ವಿಷಯ : 19
ಗಣಿತ ವಿಷಯ : 35

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ: 16-01-2024
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 15-02-2024 ರ ರಾತ್ರಿ 11-00 ಗಂಟೆವರೆಗೆ.

ಅಭ್ಯರ್ಥಿಗಳು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಡೈರೆಕ್ಟ್‌ ಲಿಂಕ್‌ ಹಾಗೂ ಹುದ್ದೆಗಳ ಕುರಿತು ಹೆಚ್ಚಿನ ಮಾಹಿತಿಗಳನ್ನು ತಿಳಿಯಲು ಅಧಿಸೂಚನೆ ಲಿಂಕ್‌ ಅನ್ನು ಕೆಳಗಿನಂತೆ ನೀಡಲಾಗಿದೆ.

ಆಯ್ಕೆ ವಿಧಾನ : ಕಾರ್ಯಾನುಭವ, ವಿದ್ಯಾರ್ಹತೆ ಅಂಕಗಳು, ಸಂದರ್ಶನ ಅಂಕಗಳ ಆಧಾರದಲ್ಲಿ ಶಾರ್ಟ್‌ ಲಿಸ್ಟ್‌ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್‌, ಎಸ್‌ಎಸ್‌ಎಲ್‌ಸಿ ಅಂಕಪಟ್ಟಿ, ವಿದ್ಯಾರ್ಹತೆ ದಾಖಲೆಗಳು, ಕಾರ್ಯಾನುಭವದ ದಾಖಲೆಗಳು ಅಗತ್ಯವಾಗಿ ಬೇಕು.

Nimma Suddi
";