ನಿಮ್ಮ ಸುದ್ದಿ ಬಾಗಲಕೋಟೆ
ಸ್ವಕ್ಷೇತ್ರ ಬಾದಾಮಿ ಪ್ರವಾಸದ ವೇಳೆ ಅಕ್ಕಪಕ್ಕದಲ್ಲಿದ್ದವರ ಮೇಲೆ ಮಾಜಿ ಸಿಎಂ ಸಿದ್ದರಾಮಯ್ಯ ಗರಂ ಆದ ಘಟನೆ ಶುಕ್ರವಾರ ನಡೆದಿದೆ.
ಜಿಲ್ಲೆಯ ಬಾದಾಮಿ ಬನಶಂಕರಿದೇವಿ ದರ್ಶನ ಪಡೆದು ಹೊರ ಬಂದ ಸಿದ್ದರಾಮಯ್ಯ ಅವರಿಗೆ ಅಭಿಮಾನಿಯೊಬ್ಬರು ನಮ್ಮ ಊರಿಗೂ ಬರಬೇಕು ಎಂದು ಆಗ್ರಹಿಸಿದರು. ಈಗ ಆಗೋದಿಲ್ಲ, ಸಂಜೆ ೬ಕ್ಕೆ ಬೆಂಗಳೂರಿಗೆ ತೆರಳಬೇಕು ಎಂದು ಹೇಳಿದರು.
ಇದಕ್ಕೆ ಸಮಾಧಾನಗೊಳ್ಳದ ಅಭಿಮಾನಿಗಳು ಬರಲೇಬೇಕು ಎಂದು ಹಠ ಹಿಡಿದರು. ಮದ್ಯೆ ಪ್ರವೇಶಿಸಿದ ಸಿದ್ದು ಆಪ್ತರು ಆಯಿತು, ಆನ್ ದ ವೇ ಬರುತ್ತಾರೆ ಎಂದರು. ಇದರಿಂದ ಕೆಂಡಾಮAಡಲವಾದ ಸಿದ್ದರಾಮಯ್ಯ ಹೇ ಇದೆಲ್ಲ ನೀವೇ ಎತ್ತಿ ಕಟ್ಟುವವರು. ಈ ಬರುವುದು ಆಗುವುದಿಲ್ಲ. ಆನ್ ದ ವೇ ನೂ ಇಲ್ಲ, ಏನೂ ಇಲ್ಲ ಎಂದರು.
ಸುಮ್ಮನಿರಿ ಟಿವಿಯುವರು ಎಲ್ಲರೂ ಇದ್ದಾರೆ ಎಂದು ಆಪ್ತರು ಹೇಳಿ ಸಮಾಧಾನ ಪಡಿಸಿದರು. ಮುಂದಿನ ಸಲ ಬಂದಾಗ ಬರುತ್ತೇನೆ, ಈಗ ಆಗುವುದಿಲ್ಲ ಎಂದು ಉತ್ತರಿಸಿದರು.