ನಿಮ್ಮ ಸುದ್ದಿ ಬಾಗಲಕೋಟೆ
ಕೋವಿಡ್ ಲಕ್ಷಣಗಳಿದ್ದರೂ ಸಿಸಿ ಕೇಂದ್ರಕ್ಕೆ ದಾಖಲಾಗಲು ಮೊಂಡುತನ ತೋರಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಇಳಕಲ್ ತಾಲೂಕು ಕೆಲೂರ ಗ್ರಾಪಂ ಪಿಡಿಒ ಪಿ.ಬಿ.ಮುಳ್ಳೂರ ಎಚ್ಚರಿಕೆ ನೀಡಿದರು.
ಕೋವಿಡ್ ೨ನೇ ಅಲೆ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಸರಕಾರದ ನಿರ್ದೇಶನದಂತೆ ಕೆಲೂರ ಗ್ರಾಪಂ ವ್ಯಾಪ್ತಿಯಲ್ಲಿ ಮನೆಗಳ ಸಮೀಕ್ಷೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪ್ರತಿಯೊಬ್ಬರ ಆರೋಗ್ಯ ರಕ್ಷಣೆ ನಮ್ಮೆಲ್ಲರ ಹೊಣೆ. ಜ್ವರ, ಕೆಮ್ಮು ಹಾಗೂ ನೆಗಡಿಯಂತಹ ಕೊರೊನಾ ಲಕ್ಷಣಗಳು ಕಂಡು ಬಂದರೆ ಕೂಡಲೆ ಪರೀಕ್ಷೆಗೆ ಒಳಪಡಿಸಬೇಕು. ಪಾಸಿಟಿವ್ ಕಂಡು ಬಂದರೆ ಕೋವಿಡ್ ಕೇರ್ ಸೆಂಟರ್‌ಗಳಿಗೆ ದಾಖಲಿಸುವ ಪ್ರಕ್ರಿಯೆ ಆರಂಭವಾಗಬೇಕು ಎಂದು ಸಭೆಯಲ್ಲಿದ್ದ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಸೂಚಿಸಿದರು.
ಪ್ರತಿದಿನ ೨೫ ಕುಟುಂಬಗಳ ಸಮೀಕ್ಷೆ ನಡೆಯಬೇಕು. ಹಿಂದಿನAತೆ ಪಾಸಿಟಿವ್ ಸೋಂಕಿತರಿಗೆ ಹೋಂ ಐಸೋಲೇಶನ್ ಬದಲಾಗಿ ಸಿಸಿ ಕೇಂದ್ರಗಳಿಗೆ ಕಳುಹಿಸಲಾಗುತ್ತದೆ. ಕೇಂದ್ರಕ್ಕೆ ದಾಖಲಾಗಲು ಒಪ್ಪದಿದ್ದರೆ ೧೧೨ಗೆ ಕರೆ ಮಾಡಿ ಎಂದು ಸೂಚಿಸಿದರು.
ಗ್ರಾಪಂ ಅಧ್ಯಕ್ಷ ಮಹಾಲಿಂಗೇಶ ನಾಡಗೌಡರ, ಅಂಗನವಾಡಿ ಕಾರ್ಯಕರ್ತೆಯರಾದ ಲತಾ ಹುದ್ದಾರ, ಸುಮಿತ್ರಾ ಮಂಡಿ, ದ್ರಾಕ್ಷಾಯಣಿ ಮಾದನಶೆಟ್ಟಿ, ಹನಮಂತವ್ವ ಆಸಂಗಿ, ಮಾನವ್ವ ಕಬ್ಬರಗಿ, ಗಿರಿಜವ್ವ ವಾಲಿಕಾರ, ಸಾವಿತ್ರಿ ಗೌಡರ ಇತರರು ಇದ್ದರು.