ಚೆನ್ನೈ: ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ ಅಣ್ಣಾಮಲೈ ಅವರು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದಾರೆ. ನಮ್ಮ ಪಕ್ಷದ ಹಿರಿಯರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ. ಈ ಹಿಂದೆ ಅಣ್ಣಾಮಲೈ ಲೋಕಸಭೆಯಲ್ಲಿ ಸ್ಪರ್ಧಿಸುತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದೀಗ ಆ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ವೈಯಕ್ತಿಕ ಪೂರ್ವಾಗ್ರಹ ಅಥವಾ ಬಿಜೆಪಿಯಲ್ಲಿ ನನಗೆ ಆ ಸ್ಥಾನ ಬೇಕು ಈ ಸ್ಥಾನಬೇಕು ಎಂಬ ಬೇಡಿಕೆಯನ್ನು ನಾನು ಇಟ್ಟಿಲ್ಲ. ಅದು ನನಗೆ ಇಷ್ಟನೂ ಇಲ್ಲ ಎಂದು ಹೇಳಿದ್ದು, ಪಕ್ಷ ಏನು ಹೇಳಿದರೂ ನಾನು ಅದನ್ನು ಪಾಲಿಸಬೇಕು, ಅದು ಪಕ್ಷದ ಸ್ವಭಾವವಾಗಿದೆ ಎಂದರು.
ಇಂದು ಪಕ್ಷವು ರಾಜ್ಯ ಮಟ್ಟದ ಯಾತ್ರೆಯನ್ನು ಪೂರ್ಣಗೊಂಡಿದೆ ಎಂದು ಹೇಳಿದ್ದು, ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಬಿಜೆಪಿ ನನಗೆ ಕೆಲವು ಜವಾಬ್ದಾರಿಯನ್ನು ನೀಡಿದೆ. ನಾನು ಈಗಾಗಲೇ ಪ್ರಾರಂಭಿಸಿದ್ದೇನೆ ಎಂದು ತಿಳಿಸಿದರು.
ಮುಂಬರುವ ಲೋಕಸಭೆ ಸ್ಪರ್ಧೆಯ ಬಗ್ಗೆ ತಿಳಿಸಿದ ಅವರು, ನಾಳೆ ಬೆಳಿಗ್ಗೆ ಪಕ್ಷ ಅದನ್ನು ಮಾಡು ಎಂದು ಹೇಳಿದರೆ ನಾನು ಅದನ್ನು ಮಾಡುತ್ತೇನೆ ಎಂದು ಹೇಳಿದರು. ನಾನು ಊಹಾಪೋಹಗಳಿಗೆ ಪ್ರತಿಕ್ರಿಯಿಸಲು ಹೋಗುವುದಿಲ್ಲ, ನಮ್ಮ ಹಿರಿಯ ರಾಷ್ಟ್ರೀಯ ನಾಯಕತ್ವವು ಯಾವುದೇ ನಿರ್ಧಾರವನ್ನು ತೆಗೆದುಕೊಂಡರೂ, ಅದನ್ನು ಪಾಲಿಸುವುದು ಮತ್ತು ಅದನ್ನು ತಮಿಳುನಾಡಿನಲ್ಲಿ ಕಾರ್ಯಗತಗೊಳಿಸುವುದು ನನ್ನ ಕರ್ತವ್ಯ ಎಂದು ಅಣ್ಣಾಮಲೈ ಹೇಳಿದ್ದಾರೆ.