ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ತಮ್ಮನ್ನು ಅಯುರ್ವೇದ ವೈದ್ಯಕೀಯ ಪದ್ಧತಿಯ ಪ್ರಬಲ ಪ್ರತಿಪಾದಕ ಎಂದು ಹೇಳಿಕೊಂಡಿದ್ದಾರೆ. ಸುಪ್ರೀಂಕೋರ್ಟ್ ಆವರಣದಲ್ಲಿ ಆಯುಷ್ ಸಮಗ್ರ ಸ್ವಾಸ್ಥ್ಯ ಕೇಂದ್ರವನ್ನು ಅವರನ್ನು ಉದ್ಘಾಟಿಸಿದರು.”
ನನಗೆ ಇದೊಂದು ತೃಪ್ತಿಕರ ಕ್ಷಣ. ನಾನು ಸಿಜೆಐ ಆಗಿ ಅಧಿಕಾರ ವಹಿಸಿಕೊಂಡಾಗಿನಿಂದ ಈ ಬಗ್ಗೆ ಕೆಲಸ ಮಾಡುತ್ತಿದ್ದೇನೆ. ನಾನು ಆಯುರ್ವೇದ ಮತ್ತು ಸಮಗ್ರ ಹಾಗೂ ಸ್ವಾಸ್ಥ್ಯಮಯ ಜೀವನಶೈಲಿಯ ಪ್ರಬಲ ಪ್ರತಿಪಾದಕ. ನಾವು 2,000 ಕ್ಕೂ ಹೆಚ್ಚು ಸಿಬ್ಬಂದಿಯನ್ನು ಹೊಂದಿದ್ದೇವೆ. ಕೇವಲ ಜಡ್ಜ್‌ಗಳು ಮತ್ತು ಅವರ ಕುಟುಂಬದವರು ಮಾತ್ರವಲ್ಲ, ಸಿಬ್ಬಂದಿ ಕೂಡ ಸಮಗ್ರ ಜೀವನ ಶೈಲಿ ಅಳವಡಿಸಿಕೊಳ್ಳಬೇಕು ಎನ್ನುವುದು ನನ್ನ ಆಶಯ. ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಆಯುರ್ವೇದದ ಎಲ್ಲಾ ವೈದ್ಯರಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ,” ಎಂದು ಸಿಜೆಐ ತಿಳಿಸಿದರು.
ತಾವು ಕೋವಿಡ್ 19 ಸೋಂಕಿಗೆ ಒಳಗಾಗಿದ್ದಾಗ, ಪ್ರಧಾನಿ ನರೇಂದ್ರ ಮೋದಿ ಅವರು ಕರೆ ಮಾಡಿದ ಸಂದರ್ಭವನ್ನು ಸಿಜೆಐ ನೆನಪಿಸಿಕೊಂಡರು.ನಾನು ಕೋವಿಡ್ ಸಾಂಕ್ರಾಮಿಕದ ಸಂದರ್ಭದಿಂದಲೂ ಆಯುಷ್ ಕೆಲಸಗಳೊಂದಿಗೆ ಸಹಯೋಗ ಹೊಂದಿದ್ದೇನೆ. ನನಗೆ ಕೋವಿಡ್ ತೀವ್ರವಾಗಿ ಬಾಧಿಸಿತ್ತು. ಆಗ ಪ್ರಧಾನಿ ನರೇಂದ್ರ ಮೋದಿ ಅವರು ನನಗೆ ಕರೆ ಮಾಡಿ, ‘ನೀವು ಕೋವಿಡ್‌ನಿಂದ ಅಸ್ವಸ್ಥಗೊಂಡಿದ್ದೀರಿ ಎಂದುಕೊಂಡಿದ್ದೇನೆ. ಎಲ್ಲವೂ ಆರಾಮವಾಗಿದೆ ಎಂದು ಆಶಿಸುತ್ತೇನೆ. ನೀವು ಉತ್ತಮ ಸ್ಥಿತಿಯಲ್ಲಿ ಇಲ್ಲ ಎನ್ನುವುದು ನನಗೆ ಅರಿವಾಗಿದೆ. ಆದರೆ ನಾವು ಎಲ್ಲವನ್ನೂ ಮಾಡುತ್ತೇವೆ’ ಎಂದು ಹೇಳಿದ್ದರು”