ನಿಮ್ಮ ಸುದ್ದಿ ವಿಜಯಪುರ
ಕೊರೋನಾ ತಡೆಗಟ್ಟಲು ರಾಜ್ಯ ಸರಕಾರ ಇಂದಿನಿಂದ ರಾತ್ರಿ 11 ಗಂಟೆಯಿಂದ ಬೆಳಗ್ಗೆ 5ರ ವರೆಗೆ ರಾತ್ರಿ ಕರ್ಫ್ಯೂ ವಿಧಿಸಿರುವ ಕ್ರಮವನ್ನು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗಡೌ ರಾ. ಪಾಟೀಲ ಯತ್ನಾಳ ವ್ಯಂಗ್ಯವಾಡಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಅವರು, ರಾತ್ರಿ ಕರ್ಫ್ಯೂಗೆ ಅರ್ಥವೇ ಇಲ್ಲ. ರಾತ್ರಿ ಕರ್ಫ್ಯೂ ವಿಧಿಸಿರುವುದು ಪೊಲೀಸರಿಗೆ ತೊಂದರೆ ವಿಧಿಸಿದಂತಾಗಿದೆ. ಸಾರ್ವಜನಿಕರೊಂದಿಗೆ ಪೊಲೀಸರು ಜಗಳವಾಡಲು ಇಂತಹ ನಿರ್ಣಯಗಳು ಕಾರಣವಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾತ್ರಿ ಕರ್ಫ್ಯೂನಂಥ ಅರ್ಧಂಬರ್ಧ ನಿರ್ಣಯ ಮಾಡಬಾರದು. ರಾತ್ರಿ ಕರ್ಫ್ಯೂವನ್ನು ತೆಗೆದು ಹಾಕಬೇಕು. ರಾತ್ರಿ ಕರ್ಫ್ಯೂಗೆ ಬೆಲೆಯೇ ಇಲ್ಲ. ರಾತ್ರಿ ಕರ್ಫ್ಯೂ ಜಾರಿಯಿಂದ ಏನು ಉಪಯೋಗವಿದೆ ಅರ್ಥವಾಗುತ್ತಿಲ್ಲ. ಕೊರೋನಾ ರಾತ್ರಿ ಹೆಚ್ಚಾಗುತ್ತೋ, ಹಗಲು ಹೆಚ್ಚಾಗುತ್ತೋ ನಮಗೂ ಗೊತ್ತಿಲ್ಲ. ವೈಜ್ಞಾನಿಕ ಮತ್ತು ವೈದ್ಯಕೀಯ ಸಲಹೆ ತೆಗೆದುಕೊಂಡು ನಿರ್ಧರಿಸಬೇಕು ಎಂದು ಅವರು ಕಿವಿಮಾತು ಹೇಳಿದರು.
ಒಂದು ಕಡೆ ಕ್ರಿಸ್ ಮಸ್ ಎಲ್ಲ ಕಾರ್ಯಕ್ರಮಗಳಿಗೆ ಅನುಮತಿ ನೀಡುತ್ತೇವೆ ಎಂದು ಹೇಳುವ ಸಿಎಂ ಗೊಂದಲದ ನಿರ್ಣಯ ಮಾಡಿದ್ದಾರೆ. ಸಿಎಂ ಕೂಡಲೇ ರಾತ್ರಿ ಕರ್ಫ್ಯೂ ವಿಚಾರವನ್ನು ಪುನರ್ ಪರಿಶೀಲನೆ ನಡೆಸಬೇಕು. ರಾತ್ರಿ 11 ರಿಂದ ಬೆ. 5ರ ಯಾರೂ ಹೊರಗೆ ತಿರುಗಾಡುವುದಿಲ್ಲ. ಎಲ್ಲರೂ ಮನೆಯಲ್ಲಿಯೇ ಇರುತ್ತಾರೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಇನ್ನೊಮ್ಮೆ ಪರಿಶೀಲಿಸಬೇಕು ಎಂದು ಅವರು ಹೇಳಿದರು.