This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Politics News

ಹವಾನಿಯಂತ್ರಿತ ನೂತನ ಜಿ.ಪಂ ಸಭಾಭವನ ಉದ್ಘಾಟನೆ

ಸರಕಾರದ ವ್ಯವಸ್ಥೆ ನಿರಂತರ : ಡಿಸಿಎಂ ಕಾರಜೋಳ

ನಿಮ್ಮ ಸುದ್ದಿ ಬಾಗಲಕೋಟೆ

ಸರಕಾರದಲ್ಲಿ ಆಡಳಿತ ಮಾಡುವವರು ಬರುವುದು, ಹೋಗುವುದು ಇದ್ದೆ ಇರುತ್ತದೆ. ಆದರೆ ಸರಕಾರದ ವ್ಯವಸ್ಥೆ ಮಾತ್ರ ನಿರಂತರವಾಗಿ ನಡೆಯುತ್ತಿರುತ್ತದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಡಳಿತ ಭವನದ ಆವರಣದಲ್ಲಿ ಕಟ್ಟಲಾದ ನೂತನ ಜಿಲ್ಲಾ ಪಂಚಾಯತ ಸಭಾಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಭೆ ಮತ್ತು ಸಮಾರಂಭಗಳನ್ನು ನಡೆಸಲು ವಿಶಾಲವಾದ ಸಭಾಭವನದ ಕೊರತೆ ಇತ್ತು. ಇಂದು ಈ ನೂತನ ಸಭಾಭವನ ಆ ಕೊರತೆಯನ್ನು ನೀಗಿಸಿದೆ. ಸುಂದರ ಶಿಲ್ಪಕಲೆಯಿಂದ ಕೂಡಿದಂತ ಸಭಾಭವನ ಇದಾಗಿದ್ದು, ಅಂದಾಜು ೪.೬೭ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಭಾಭಬವನದಲ್ಲಿ ೨೦೦ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುತ್ತಲೂ ಗ್ಯಾಲರಿ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಆಡಳಿತ ಮಾಡುವವರು ತಮ್ಮ ಅಧಿಕಾರ ಅವಧಿಯಲ್ಲಿ ಹಾಕಿಕೊಂಡ ಕಾರ್ಯಕ್ರಮ ಪೂರ್ಣಗೊಳ್ಳದಿದ್ದಲ್ಲಿ ಮುಂದಿನದವರು ಅದನ್ನು ಪೂರ್ಣಗೊಳಿಸುತ್ತಾರೆ. ಇದು ಸ್ವಾತಂತ್ರ್ಯದ ನಂತರವು ನಡೆದು ಬಂದಿದೆ. ಈ ಹಿಂದಿನ ಅಧ್ಯಕ್ಷರು ಈ ಸಭಾರಂಭಕ್ಕೆ ಅಡಿಗಲ್ಲು ಹಾಕಿದ್ದರು. ಕಟ್ಟಡ ನಿರ್ಮಾಣ ಪೂರ್ಣಗೊಳ್ಳುವಲ್ಲಿ ಈಗಿನ ಜಿ.ಪಂ ಅಧ್ಯಕ್ಷರು ಮತ್ತು ಸದಸ್ಯರು ಶ್ರಮಿಸಿದ್ದಾರೆ ಎಂದು ತಿಳಿಸಿದರು.

ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ ಮಾತನಾಡಿ, ಜಿಲ್ಲಾ ಪಂಚಾಯತಿಯ ಸದಸ್ಯರ ಸಹಕಾರದಿಂದ ಸುಂದರವಾದ ಅಚ್ಚುಕಟ್ಟಾದ ಸಭಾಭವನ ನಿರ್ಮಾಣವಾಗಲು ಸಾಧ್ಯವಾಗಿದೆ. ನಿರ್ಮಿತಿ ಕೇಂದ್ರದವರು ಉತ್ತಮವಾದ ಸಭಾಭವನ ನಿರ್ಮಿಸಿದ್ದಾರೆ. ಸಭಾಭವನ ನಿರ್ಮಾಣಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಜಿ.ಪಂ ಸಿಇಓ ಟಿ.ಭೂಬಾಲನ ಪ್ರಾಸ್ತಾವಿಕವಾಗಿ ಮಾತನಾಡಿ ಜಿಲ್ಲಾಡಳಿತ ಭವನದಲ್ಲಿ ಜಿ.ಪಂ ಕೆಡಿಪಿ ಸಭೆ, ಸಾಮಾನ್ಯ ಹಾಗೂ ಮಹತ್ವದ ಸಭೆ ನಡೆಸಲು ಸಭಾಭವನದ ತೊಂದರೆ ಇತ್ತು. ಒಂದು ವಿಶಾಲವಾದ ಸಭಾಂಗಣ ನಿರ್ಮಿಸಬೇಕೆಂಬ ಬಹಳ ದಿನಗಳ ಕನಸಾಗಿತ್ತು. ಆ ಕಸನು ಇಂದು ಸಾಕಾರಗೊಂಡಿರುವುದು ಸಂತೋಷ ತಂದಿದೆ. ಈ ಸಭಾಂಗಣ ನಿರ್ಮಾಣಕ್ಕೆ ಪ್ರಾರಂಭದಲ್ಲಿ ಅನುದಾನದ ಸಮಸ್ಯೆ ಇತ್ತು. ನಿವೇಶಕ್ಕನ್ನೆ ಹಿಂದಿನ ಜಿ.ಪಂ ಅಧ್ಯಕ್ಷೆ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿ ಜಿಲ್ಲಾಡಳಿತ ಭವನದಲ್ಲಿ ನಿವೇಶನ ಪಡೆದು ಅಡಿಗಲ್ಲು ಹಾಕಿದ್ದರು ಎಂದರು.

ಸಭಾಭವನ ನಿರ್ಮಾಣಕ್ಕೆ ಹಿಂದಿನ ಸಿಇಓ ವಿಕಾಸ ಸುರಳಕರ ಸರಕಾರದಿಂದ ಅನುದಾನ ತರುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ನೆನಪಿಸಿಕೊಂಡು ಅಭಿನಂದನೆ ಸಲ್ಲಿಸಿದರು. ತದನಂತರ ಕಟ್ಟಡ ಪೂರ್ಣಗೊಳಿಸುವಲ್ಲಿ ಸಹಕರಿಸಿದ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವರ್ಗದವರನ್ನು ಅಭಿನಂಧಿಸಿದರು.

ಶಾಸಕ ವೀರಣ್ಣ ಚರಂತಿಮಠ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಆನಂತ ನ್ಯಾಮಗೌಡ, ಜಿ.ಪಂ ಉಪಾಧ್ಯಕ್ಷ ಮುತ್ತಪ್ಪ ಕೋಮಾರ, ತಾ.ಪಂ ಅಧ್ಯಕ್ಷ ಚನ್ನನಗೌಡರ ಪರನಗೌಡ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ಸೇರಿದಂತೆ ಜಿ.ಪಂ ಎಲ್ಲ ಸದಸ್ಯರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Nimma Suddi
";