This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

National News

ಭಾರತವು ಅದ್ಭುತ ಸಾಮರ್ಥ್ಯವನ್ನು ಹೊಂದಿದೆ: ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ

ಭಾರತವು ಅದ್ಭುತ ಸಾಮರ್ಥ್ಯವನ್ನು ಹೊಂದಿದೆ: ಆಸ್ಟ್ರೇಲಿಯಾ ಮಾಜಿ ಪ್ರಧಾನಿ ಟೋನಿ

ಆಸ್ಟ್ರೇಲಿಯಾದ ಮಾಜಿ ಪ್ರಧಾನಿ ಟೋನಿ ಅಬಾಟ್ ‘ವಾಟ್ ಇಂಡಿಯಾ ಟುಡೇ ಥಿಂಕ್ಸ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದು, ಅಬಾಟ್ ಅವರು ‘ಏಷ್ಯಾ-ಪೆಸಿಫಿಕ್‌ನಿಂದ ಇಂಡೋ-ಪೆಸಿಫಿಕ್‌ಗೆ’ ವಿಷಯದ ಕುರಿತು ಮಾತನಾಡುತ್ತಿದ್ದು, ಪ್ರಾದೇಶಿಕ ಸಂಬಂಧಗಳ ಅಡಿಪಾಯ ಯಾವುದು ಮತ್ತು ಅವುಗಳನ್ನು ಹೇಗೆ ಸುಧಾರಿಸುವುದು ಎಂಬುದರ ಕುರಿತು ಟೋನಿ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಭಾರತವು ಅದ್ಭುತ ಸಾಮರ್ಥ್ಯವನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಟೋನಿ ಅಬಾಟ್ ಹೇಳಿದರು.ಭಾರತದ ಪ್ರಜಾಪ್ರಭುತ್ವವು ಜರ್ಮನಿ ಮತ್ತು ಸ್ಪೇನ್‌ನಂತಹ ದೇಶಗಳಿಗಿಂತ ಹಳೆಯದು. ಕ್ವಾಡ್‌ಗೆ ಸಂಬಂಧಿಸಿದಂತೆ ಭಾರತ ಮತ್ತು ಜಪಾನ್‌ನ ಪ್ರಯತ್ನಗಳು ಶ್ಲಾಘನೀಯ ಎಂದರು.

ಟೋನಿ ಅಬಾಟ್ ಅವರು ಆಸ್ಟ್ರೇಲಿಯಾದ 28 ನೇ ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು 2013 ಮತ್ತು 2015 ರ ನಡುವೆ ಎರಡು ವರ್ಷಗಳ ಕಾಲ ಆಸ್ಟ್ರೇಲಿಯಾದ ಪ್ರಧಾನಿಯಾಗಿದ್ದರು. ಪ್ರಧಾನಿಯಾಗುವ ಮೊದಲು ಟೋನಿ ಅವರು 2009 ಮತ್ತು 2013 ರ ನಡುವೆ ನಾಲ್ಕು ವರ್ಷಗಳ ಕಾಲ ವಿರೋಧ ಪಕ್ಷದ ನಾಯಕರಾಗಿದ್ದರು.

ಇಂಗ್ಲೆಂಡ್‌ನ ರಾಜಧಾನಿ ಲಂಡನ್‌ನಲ್ಲಿ ಜನಿಸಿದ ಟೋನಿ 2 ವರ್ಷ ವಯಸ್ಸಿನಲ್ಲಿ ಆಸ್ಟ್ರೇಲಿಯಾದ ಸಿಡ್ನಿಗೆ ಬಂದರು. ಸಿಡ್ನಿ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ಮತ್ತು ಆಕ್ಸ್‌ಫರ್ಡ್‌ನ ಕ್ವೀನ್ಸ್ ಕಾಲೇಜಿನಲ್ಲಿ ತತ್ವಶಾಸ್ತ್ರ ಮತ್ತು ರಾಜಕೀಯ ವಿಷಯದಲ್ಲಿ ಅಧ್ಯಯನ ಮಾಡಿ. ತಮ್ಮ ವೃತ್ತಿಜೀವನವನ್ನು ಪತ್ರಕರ್ತ, ವ್ಯವಸ್ಥಾಪಕ ಮತ್ತು ರಾಜಕೀಯ ಸಲಹೆಗಾರರಾಗಿ ಪ್ರಾರಂಭಿಸಿದರು. 1994 ರಲ್ಲಿ ಮೊದಲ ಬಾರಿಗೆ ಟೋನಿ ಸಂಸದರಾಗಿ ಸದನಕ್ಕೆ ಪ್ರವೇಶಿಸಿದರು. ನಂತರ ಎರಡು ದಶಕಗಳ ನಂತರ ಅವರು ದೇಶದ ಪ್ರಧಾನಿಯಾದರು.

Nimma Suddi
";