ನವದೆಹಲಿ: ಜಿ20 ಅಧ್ಯಕ್ಷತೆ ಭಾರತ ವಹಿಸಿತ್ತು. ಜಿಟಿ20ಯನ್ನು ದೆಹಲಿಯಲ್ಲಿ ನಡೆಸಬಹುದಿತ್ತು. ಆದರೆ ನಾವು ಪ್ರತಿಯೊಂದ ರಾಜ್ಯದ ಪ್ರಮುಖ ಸ್ಥಳಗಳಲ್ಲಿ ನಾವು 200ಕ್ಕೂ ಹೆಚ್ಚು ಸಭೆಗಳನ್ನು ನಡೆಸಿದವು. ಇದರಿಂದ ಆಯಾ ರಾಜ್ಯಗಳಿಗೂ ಹೆಚ್ಚಿನ ಉತ್ತೇಜನ ಸಿಕ್ಕಿತ್ತು. ವಿಶ್ವಮಟ್ಟದಲ್ಲಿ ಆಯಾ ರಾಜ್ಯದ ಐತಿಹಾಸಿಕ ಸ್ಥಳಗಳ, ರಾಜ್ಯಗಳ ಮೂಲಭೂತ ಸೌಕರ್ಯ, ಪ್ರವಾಸಿ ಸ್ಥಳಗಳು ವಿಶ್ವಕ್ಕೆ ಪರಿಚಯವಾಗಿತ್ತು ಎಂದು ಮೋದಿ ಹೇಳಿದರು.
ರಾಜ್ಯಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ವಂದನಾ ನಿರ್ಣಯದ ಮೇಲೆ, ಪ್ರತಿಪಕ್ಷಗಳ ಟೀಕೆ ಹಾಗೂ ಪ್ರಶ್ನೆಗಳಿಗೆ ತಕ್ಕ ಉತ್ತರ ನೀಡಿದ್ದು, ಇದೇ ವೇಳೆ ಜಿ20 ಅಧ್ಯಕ್ಷತೆ ಹಾಗೂ ಸಭೆ ಕುರಿತು ಟೀಕಿಸಿದ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ದೆಹಲಿಗೆ ದೊಡ್ಡ ದೊಡ್ಡ ನಾಯಕರನ್ನು ಕರೆಸಿ ಸಭೆ ನಡೆಸಿ ಸುಲಭವಾಗಿ ಮುಗಿಸಬಹುದಿತ್ತು. ಆದರೆ ನಾವು ಹಾಗೆ ಮಾಡಲಿಲ್ಲ. ದೇಶದ ಪರಿಚಯ ಮಾಡಿದೆವು ಎಂದರು.
ವಿಶ್ವಕ್ಕೆ ಭಾರತ ದರ್ಶನವಾಗಿದ್ದು, ನನ್ನ ದೇಶ ಕೇವಲ ದಹೆಲಿ ಮಾತ್ರವಲ್ಲ, ಬೆಂಗಳೂರು ಕೂಡ ನನ್ನ ದೇಶ, ಚೆನ್ನೈ ಕೂಡ ನನ್ನ ದೇಶ. ಭಾರತದ ಸೌಂದರ್ಯ, ದರ್ಶನ ದೆಹಲಿಯಿಂದ ಮಾತ್ರ ಸಾಧ್ಯವಿಲ್ಲ ಅನ್ನೋದನ್ನು ಜಗತ್ತಿಗೆ ಸಾರಿ ಹೇಳಿದ್ದೇವೆ ಏರ್ ಇಂಡಿಯಾವನ್ನು ಮುಳುಗಿಸಿದವರು ಯಾರು , ಕಾಂಗ್ರೆಸ್ ಆಡಳಿತದ 10 ವರ್ಷದಲ್ಲಿ ಎಷ್ಟು ಸಂಸ್ಥೆಗಳು ಮುಳುಗಿದೆ ಎಂದು ಮೋದಿ ಹೇಳಿದ್ದಾರೆ.