ಶ್ರೀನಗರ: ಭಾರತದ ಸೈನಿಕರ ಜೊತೆ ಗುದ್ದಾಟ ನಡೆಸಿ ಸೋತು ಸುಣ್ಣವಾದ ಚೀನಾ ದೇಶದ ಸೈನಿಕರು ಇದೀಗ ಲಡಾಖ್‌ನ ಕುರಿ ಮೇಯಿಸುವ ಸ್ಥಳೀಯರ ಜೊತೆಗಿನ ವಾಕ್ಸಮರದಲ್ಲೂ ಸೋಲು ಕಂಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
. ಕುರಿ ಹಾಗೂ ಸಾಕು ಪ್ರಾಣಿಗಳನ್ನು ಮೇಯಿಸುವ ಹಕ್ಕಿಗೆ ಸಂಬಂಧಿಸಿದಂತೆ ಚೀನಾ ಸೈನಿಕರ ಜೊತೆ ಲಡಾಖ್ ಗಡಿ ಭಾಗದ ಕುರಿಗಾಹಿಗಳು ಗುದ್ದಾಟ ನಡೆಸಿದ್ದು, ಭಾರತ – ಚೀನಾ ನಡುವಣ ವಾಸ್ತವ ಗಡಿ ನಿಯಂತ್ರಣ ರೇಖೆಯ ಬಳಿ ಸ್ಥಳೀಯ ಕುರಿಗಾರಿಗಳು ತಮ್ಮ ಪ್ರಾಣಿಗಳನ್ನು ಮೇಯಿಸುತ್ತಿದ್ದರು. ಆದರೆ, 2020ರ ಗಲ್ವಾನ್ ಸಂಘರ್ಷದ ಬಳಿಕ ಈ ಭಾಗದಲ್ಲಿ ಕುರಿಗಾಹಿಗಳ ಓಡಾಟಕ್ಕೆ ಅಡೆ ತಡೆ ಎದುರಾಗಿತ್ತು.
ಇದೀಗ ಮತ್ತೆ ಈ ಭಾಗದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಮೇಯಿಸುತ್ತಿರುವ ಕುರಿಗಾಹಿಗಳು ಇದನ್ನು ಪ್ರಶ್ನಿಸಲು ಬಂದ ಚೀನಾ ಸೇನೆಗೆ ದಟ್ಟ ಉತ್ತರ ನೀಡಿದ್ದು, ಭಾರತದ ಗಡಿ ಪ್ರದೇಶ. ನಮಗೆ ಬರಲು ಬೇಡ ಎನ್ನಲು ನೀವು ಯಾರು ಎಂದು ಕುರಿಗಾಹಿಗಳು ಚೀನಾ ಸೈನಿಕರಿಗೆ ಪ್ರಶ್ನಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರತೀಯರ ಮನ ಗೆದ್ದಿದೆ.
ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಸ್ಥಳೀಯ ಅಲೆಮಾರಿ ಜನಾಂಗಕ್ಕೆ ಸೇರಿದ ಈ ಕುರಿಗಾಹಿಗಳು, ಕಳೆದ ಮೂರು ವರ್ಷಗಳಿಂದ ಪೂರ್ವ ಲಡಾಖ್ ಪ್ರಾಂತ್ಯದಲ್ಲಿ ತಮ್ಮ ಸಾಕು ಪ್ರಾಣಿಗಳನ್ನು ಮೇಯಿಸಲು ಸಾಧ್ಯ ಆಗ್ತಿರಲಿಲ್ಲ. ಇದೇ ಮೊದಲ ಬಾರಿಗೆ ತಮ್ಮ ಸಾಕು ಪ್ರಾಣಿಗಳನ್ನು ಪೂರ್ವ ಲಡಾಖ್‌ಗೆ ಕರೆದೊಯ್ದ ಕುರಿಗಾಹಿಗಳನ್ನು ಚೀನಾ ಸೈನಿಕರು ತಡೆದರು.ಕುರಿಗಾಹಿಗಳು ಚೀನಾ ಸೈನಿಕರ ಜೊತೆ ಗುದ್ದಾಟ ನಡೆಸಿದರು. ಇದು ಭಾರತದ ಭೂ ಪ್ರದೇಶ, ವಾಸ್ತವ ಗಡಿ ನಿಯಂತ್ರಣ ರೇಖೆ ಇನ್ನು ದೂರವಿದೆ, ನೀವು ಹಿಂದೆ ಸರಿಯಿರಿ ಎಂದು ಖಡಕ್ ವಾರ್ನಿಮಗ್ ಕೊಟ್ಟರು.