This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಆರ್ಭಟ: ಸರಕು ಸಾಗಣೆ ಹಡಗಿನ ಮೇಲೆ ದಾಳಿ, ಬೆಂಕಿ ನಂದಿಸಲು ಭಾರತದ ಯುದ್ದನೌಕೆ ಎಂಟ್ರಿ

ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಆರ್ಭಟ: ಸರಕು ಸಾಗಣೆ ಹಡಗಿನ ಮೇಲೆ ದಾಳಿ, ಬೆಂಕಿ ನಂದಿಸಲು ಭಾರತದ ಯುದ್ದನೌಕೆ ಎಂಟ್ರಿ

ನವದೆಹಲಿ: ಕೆಂಪು ಸಮುದ್ರದಲ್ಲಿ ಹೌತಿ ಉಗ್ರರ ಆರ್ಭಟ ತೀವ್ರವಾಗುತ್ತಿದ್ದು, ಸರಕು ಸಾಗಣೆ ಹಡಗಿನ ಮೇಲೆ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ಹಮಾಸ್ ಉಗ್ರರ ವಿರುದ್ದ ಇಸ್ರೇಲ್ ಸೇನೆ ನಡೆಸುತ್ತಿರುವ ಯುದ್ದವನ್ನು ವಿರೋಧಿಸಿ ಯೆಮನ್‌ ದೇಶದ ಹೌತಿ ಉಗ್ರರು ಕೆಂಪು ಸಮುದ್ರದ ಮಾರ್ಗವಾಗಿ ಸಂಚರಿಸುವ ಹಡಗುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಹೌತಿ ಉಗ್ರರು ಮರ್ಲಿನ್ ಲೌಂಡಾ ಎಂಬ ಹೆಸರಿನ ಸರಕು ಸಾಗಣೆ ಹಡಗಿನ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ಈ ದಾಳಿಯಿಂದಾಗಿ ಹಡಗಿಗೆ ಬೆಂಕಿ ಬಿದ್ದಿದೆ. ಅರಬ್ಬಿ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದ ಐಎನ್‌ಎಸ್ ವಿಶಾಖಪಟ್ಟಣಂ ಯುದ್ದ ನೌಕೆಗೆ ಹಡಗಿಗೆ ಬೆಂಕಿ ಬಿದ್ದಿರುವ ಕುರಿತಾಗಿ ತುರ್ತು ಕರೆ ಬಂದಿತ್ತು. ಕೂಡಲೇ ಹಡಗಿನ ರಕ್ಷಣೆಗೆ ಭಾರತೀಯ ನೌಕಾ ಪಡೆ ಧಾವಿಸಿದೆ.

ಅರಬ್ಬಿ ಸಮುದ್ರದಿಂದ ಏಡನ್ ಕೊಲ್ಲಿ – ಕೆಂಪು ಸಮುದ್ರ – ಸುಯೆಜ್ ಕಾಲುವೆ ಮೂಲಕ ಮೆಡಿಟರೇನಿಯನ್ ಸಮುದ್ರ ತಲುಪಿ ಅಲ್ಲಿಂದ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆ ಸಂಪರ್ಕ ಸಾಧಿಸುವ ಹಡಗುಗಳು ಹಾಗೂ ಅದೇ ಮಾರ್ಗವಾಗಿ ವಾಪಸ್ ಬರುವ ಸರಕು ಸಾಗಣೆ ಹಡಗುಗಳನ್ನೇ ಗುರಿಯಾಗಿಸಿ ಹೌತಿ ಉಗ್ರರು ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸುತ್ತಿದ್ದಾರೆ.

ಈ ಹಡಗಿನಲ್ಲಿ ಭಾರತೀಯ ಪ್ರಜೆಗಳು ಹಾಗೂ ಬಾಂಗ್ಲಾ ದೇಶದ ಪ್ರಜೆಗಳೂ ಸೇರಿದಂತೆ ಒಟ್ಟು 22 ಮಂದಿ ಇದ್ದು, ಈ ಸರಕು ಸಾಗಣೆ ಹಡಗು ಏಡನ್ ಕೊಲ್ಲಿಯನ್ನು ದಾಟಿ ಅರಬ್ಬಿ ಸಮುದ್ರಕ್ಕೆ ಬರುವ ಮಾರ್ಗ ಮಧ್ಯದಲ್ಲಿ ಹೌತಿ ಉಗ್ರರು ದಾಳಿ ನಡೆಸಿದ್ದು, ದಾಳಿಗೀಡಾದ ಹಡಗಿನ ಬಳಿ ಭಾರತೀಯ ನೌಕಾ ಪಡೆಯ ಐಎನ್‌ಸ್ ವಿಶಾಖಪಟ್ಟಣಂ ಯುದ್ದ ನೌಕೆ ಧಾವಿಸಿದ್ದು, ಬೆಂಕಿ ನಂದಿಸುವ ಜೊತೆಯಲ್ಲೇ ಹಡಗಿನ ಸಿಬ್ಬಂದಿಯ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ ಎಂದು ಮಾಹಿತಿ ಬೆಳಕಿಗೆ ಬಂದಿದೆ.

";