ಬೆಂಗಳೂರು: ತಾಕತ್ತು ಇದ್ದರೆ ಎಚ್ ಕಾಂತರಾಜು ಅವರ ಜಾತಿ ಗಣತಿ ವರದಿ ಸ್ವೀಕಾರ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಸವಾಲು ಎಸೆದಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ಮಂಗಳವಾರ ಮಾತನಾಡಿದ ಅವರು, ವರದಿಯಲ್ಲಿ ಸತ್ಯ ಇದ್ದರೆ ವರದಿ ಸ್ವೀಕಾರ ಮಾಡಿ. ನೀವು ಕುಳಿತುಕೊಂಡು ಕಾಂತರಾಜು ವರದಿ ಬರೆಸಿದ್ದು ಎಂದು ಗಂಭೀರವಾದ ಆರೋಪವನ್ನು ಮಾಡಿದ್ದು, ಕಾಂತರಾಜು ಜಾತಿ ಗಣತಿ ವರದಿಯನ್ನು ಅಧಿವೇಶನದ ಸಂದರ್ಭದಲ್ಲಿ ಸ್ವೀಕಾರ ಮಾಡಲು ಸಿಎಂ ಸಿದ್ದರಾಮಯ್ಯ ನಿರ್ಧಾರ ಮಾಡಿದ್ದಾರೆ ಎಂದರು.
ವರದಿ ಮಂಡನೆ ಅವಧಿ ಜನವರಿ ತಿಂಗಳಿಗೆ ಮುಕ್ತಾಯವಾಗಲಿದ್ದು, ಅವಧಿ ವಿಸ್ತಾರಣೆ ಮಾಡಲು ಅಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಸಿಎಂ ಭೇಟಿ ಮಾಡಿ ಮನವಿ ಮಾಡುವ ಸಾಧ್ಯತೆ ಇದೆ. ಇದೇ ಸಂದರ್ಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ನನ್ನನ್ನು ಎಂಪಿನೇ ಮಾಡಲಿಲ್ಲ, ಪ್ರಧಾನಿ ಮಾಡ್ತಿರಾ ಎಂದು ತಮ್ಮ ಕಾರ್ಯಕರ್ತರ ಸಭೆಯಲ್ಲಿ ಹೇಳಿದ್ದಾರೆ.
ನೀವು ಯಾರ ಯಾರ ಮನೆ ಬಾಗಿಲು ತಟ್ಟಿದ್ರಿ ಹಿಂದೆ? ಹೌದು, ನಾವು ಓಪನ್ ಆಗಿಯೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದೇವೆ. ನೀವು ಕದ್ದು ಮುಚ್ಚಿ ಅಧಿಕಾರಕ್ಕಾಗಿ ರಾಜಕೀಯ ಮಾಡಿದ್ದಿರಿ .ಕಾಂಗ್ರೆಸ್ ನಾಯಕರ ನಡವಳಿಕೆಯಿಂದಲೇ ಎಲ್ಲರೂ ಬಿಟ್ಟು ಹೋಗ್ತಿರೋದು. ಇಂಡಿಯಾ ಮೈತ್ರಿಕೂಟದಿಂದ ನಿತೀಶ್ ಕುಮಾರ್ ಯಾಕೆ ಬಿಟ್ಟು ಹೋದರು. ಮಮತಾ ಬ್ಯಾನರ್ಜಿ ಬುದ್ದಿವಂತರಾದ್ರು. ಪಾಪ ನಾವೇ ದಡ್ಡರಾಗಿದ್ದು, ಎಂದು ಹೇಳಿದರು.