This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Business NewsNational News

ಅಮೆರಿಕದಲ್ಲಿ ಲೇ ಆಫ್ , ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದ ಗೂಗಲ್ ಸಂಸ್ಥೆ

ಅಮೆರಿಕದಲ್ಲಿ ಲೇ ಆಫ್ , ಭಾರತದಲ್ಲಿ ಉದ್ಯೋಗಾವಕಾಶ ಹೆಚ್ಚಿಸಿದ ಗೂಗಲ್ ಸಂಸ್ಥೆ

ನವದೆಹಲಿ: ಗೂಗಲ್ ಸಂಸ್ಥೆ ಕಳೆದ ಎರಡು ಮೂರು ವರ್ಷಗಳಿಂದ ಮಾಡುತ್ತಾ ಬಂದಿರುವ ಉದ್ಯೋಗ ಕಡಿತ ಪ್ರಕ್ರಿಯೆ ಮುಂದುವರಿದಿದ್ದು, ಇತ್ತೀಚೆಗೆ ಗೂಗಲ್​ನ ಕೋರ್ ಟೀಮ್ ಅಥವಾ ಪ್ರಮುಖ ತಂತ್ರಜ್ಞರ ತಂಡಗಳಲ್ಲಿ ಸುಮಾರು 200 ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. ಇವರಲ್ಲಿ ಹೆಚ್ಚಿನವರು ಅಮೆರಿಕದ ಗೂಗಲ್ ಕಚೇರಿಗಳಲ್ಲಿ ಕೆಲಸ ಮಾಡುವವರೇ ಆಗಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.

ಕ್ಯಾಲಿಫೋರ್ನಿಯಾದಲ್ಲಿರುವ ಗೂಗಲ್ ಪ್ರಧಾನ ಕಚೇರಿಯಲ್ಲಿನ ಎಂಜಿನಿಯರಿಂಗ್ ತಂಡದಿಂದಲೇ 50ಕ್ಕೂ ಹೆಚ್ಚು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಇದೇ ವೇಳೆ ಬೇರೆ ದೇಶಗಳಲ್ಲಿ ಗೂಗಲ್ ನೇಮಕಾತಿ ಹೆಚ್ಚಿಸುತ್ತಿದೆ. ವರದಿಗಳ ಪ್ರಕಾರ ಮೆಕ್ಸಿಕೋ, ಭಾರತ, ಜರ್ಮನಿ ಮೊದಲಾದೆಡೆ ಗೂಗಲ್​ನಲ್ಲಿ ಉದ್ಯೋಗಾವಕಾಶ ಹೆಚ್ಚಲಿದೆ.

ಗೂಗಲ್ ಈ ಬಾರಿ ಲೇ ಆಫ್ ಮಾಡಲು ವೆಚ್ಚ ಕಡಿತ ಒಂದು ಕಾರಣವಾಗಿದೆ. ಹಾಗೆಯೇ, ಗೂಗಲ್​ನ ರಚನೆಯನ್ನು ಸರಳಗೊಳಿಸುವುದು, ಕಂಪನಿಯೊಳಗಿನ ಬ್ಯೂರೋಕ್ರಸಿ ವ್ಯವಸ್ಥೆ ಕಡಿಮೆ ಮಾಡುವುದು ಇದರ ಉದ್ದೇಶ.

ಗೂಗಲ್​ಗೆ ಜಾಹೀರಾತುಗಳಿಂದ ಹೆಚ್ಚು ಆದಾಯ ಬರುತ್ತದೆ. ಇತ್ತೀಚೆಗೆ ಅದು ಕಡಿಮೆ ಆಗಿದೆ. ಇದೇ ಕಾರಣಕ್ಕೆ 2022ರಿಂದ ಈಚೆಗೆ 12,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಗೂಗಲ್ ಕೆಲಸದಿಂದ ತೆಗೆದುಹಾಕಿದೆ.

ಈಗ ಲೇ ಆಫ್ ಆಗಿರುವ 200ಕ್ಕೂ ಹೆಚ್ಚು ಮಂದಿಯ ತಂಡ ನುರಿತ ತಂತ್ರಜ್ಞರಿಂದ ಕೂಡಿದ್ದಾಗಿದೆ. ಗೂಗಲ್​ನ ಉತ್ಪನ್ನಗಳ ರೂವಾರಿಯೇ ಈ ತಂಡವಾಗಿತ್ತು. ಆದರೆ, ಅಧಿಕ ಸಂಬಳವಿದ್ದ ಕಾರಣ ವೆಚ್ಚ ಕಡಿತಕ್ಕೆ ಗೂಗಲ್ ಈ ಲೇ ಆಫ್ ಕ್ರಮ ಕೈಗೊಂಡಿದೆ. ಈ ವರ್ಷ ಈ ಪ್ರಮುಖ ತಂಡದಲ್ಲಿ ಆಗಿರುವ ಅತಿದೊಡ್ಡ ಲೇ ಆಫ್ ಇದಾಗಿದೆ ಎಂದು ಹೇಳಲಾಗಿದೆ. ಇದು ಉಳಿದ ಉದ್ಯೋಗಿಗಳನ್ನು ನಿರಾಳಗೊಳಿಸಿದೆ ಎಂದು ಮಾಹಿತಿ ತಿಲಿದು ಬಂದಿದೆ.

Nimma Suddi
";