ಅಮೇಥಿ: ಉತ್ತರ ಪ್ರದೇಶದ ಅಮೇಥಿ ಮತ್ತು ರಾಯ್ ಬರೇಲಿ ಕ್ಷೇತ್ರಗಳ ಅಭಿವೃದ್ಧಿಯನ್ನು ಬಿಜೆಪಿ ಕಡೆಗಣಿಸಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.
ಉತ್ತರ ಪ್ರದೇಶದ ಅಮೇಥಿಯನ್ನು ಪ್ರವೇಶಿಸಿದ ಕಾಂಗ್ರೆಸ್‌ನ ಭಾರತ್ ಜೋಡೋ ನ್ಯಾಯ ಯಾತ್ರೆಯ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಖರ್ಗೆ, ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅಮೇಥಿ ಹಾಗೂ ರಾಯ್ ಬರೇಲಿಗಾಗಿ ಮೀಸಲಿಟ್ಟಿದ್ದ ಯೋಜನೆಗಳ ಕಥೆಯನ್ನು ಅವರು ಮುಗಿಸಿದ್ದಾರೆ” ರಾಯ್ ಬರೇಲಿ ಮತ್ತು ಅಮೇಥಿ ಜನರ ನಡುವೆ ಬಿಜೆಪಿ ವೈರತ್ವ ಬಿತ್ತಲು ಸಂಚು ನಡೆಸಿದೆ” ಎಂದು ಆರೋಪಿಸಿದ ಖರ್ಗೆ, ಪ್ರಧಾನಿ ನರೇಂದ್ರ ಮೋದಿ ಅವರ ‘ಅಬ್ಕಿ ಬಾರ್, 400 ಪಾರ್’ ಎಂಬ ಘೋಷಣೆಯನ್ನು ಟೀಕಿಸಿದರು.
ಕಾಂಗ್ರೆಸ್ ಅವಧಿಯಲ್ಲಿ ಅಮೇಥಿಗೆ ಕೋಟ್ಯಂತರ ರೂ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಅವುಗಳನ್ನು ಬಹುತೇಕ ಇನ್ನೂ ಬಾಕಿ ಇದ್ದು, ಯೋಜನೆಗಳು ಇನ್ನೂ ಏಕೆ ಪೂರ್ಣಗೊಂಡಿಲ್ಲ ಎಂದು ನಾನು ಅವರನ್ನು ಕೇಳಲು ಬಯಸುತ್ತೇನೆ. ಅವರು ಅಮೇಥಿ ಮತ್ತು ರಾಯ್ ಬರೇಲಿಯಲ್ಲಿ ಕೆಲಸ ನಡೆಯುವುದನ್ನು ಬಯಸುತ್ತಿಲ್ಲ ಎಂದರು.