ನಿಮ್ಮ ಸುದ್ದಿ ಬಾಗಲಕೋಟೆ
ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಇಲಕಲ್ಲಿನಲ್ಲಿ ಮಹಿಳಾ ಪದವಿ ಕಾಲೇಜು ಪ್ರಾರಂಭಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದೆಂದು ಜಲ ಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ ಹೇಳಿದರು.
ಇಳಕಲ್ ನಗರದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸುವರ್ಣ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ವೇದಿಕೆ ಕಾರ್ಯಕ್ರದಲ್ಲಿ ಮಾತನಾಡಿದ ಅವರು ಇಲಕಲ್ಲ ನಗರದಲ್ಲಿ ೮೫೦ ಹೆಣ್ಣು ಮಕ್ಕಳು ಉತ್ಸಾಹದಿಂದ ವಿದ್ಯಾರ್ಜನೆ ಮಾಡುವುದನ್ನು ಕಂಡು ಮತ್ತು ಅವರ ಬೇಡಿಕೆಯಂತೆ ಮಹಿಳಾ ಪದವಿ ಕಾಲೇಜ ಪ್ರಾರಂಭಿಸಲು ಕ್ರಮಕೈಗೊಳ್ಳಲಾಗುವುದೆಂದು ಕಾರಜೋಳ ತಿಳಿಸಿದರು.
ಅತೀ ಮಹತ್ವದ ೧೦ ಕೆರೆಗಳಿಗೆ ನೀರು ತುಂಬುವ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರಿಂದ ಈ ಭಾಗದ ೩೫ ಹಳ್ಳಿಗಳಿಗೆ ಅಂತರ್ಜಲ ಹೆಚ್ಚಲಿದೆ. ೨೦ ಸಾವಿರ ಎಕರೆ ಜಮೀನು ನೀರಾವರಿ ಆಗಲಿದೆ. ಈ ತಾಲ್ಲೂಕಿನಲ್ಲಿ ಅತೀ ಹೆಚ್ಚು ಕೊಳವೆ ಬಾವಿ ಇದ್ದು, ಅವೇಲ್ಲವುಗಳಿಗೆ ಅಂತರ್ಜಲ ಹೆಚ್ಚಾಗಿ ಪುನಃ ಪ್ರಾರಂಭಗೊಳ್ಳುವತ್ತವೆ. ಅಲ್ಲದೆ ರೈತರಿಗೂ ಕೂಡಾ ಇದರ ಪ್ರಯೋಜನೆಯಾಗಲಿದೆ ಎಂದರು. ಈ ಹಿಂದೆ ಇಳಕಲ್ ನಗರ ವಾಣಿಜ್ಯ ನಗರವಾಗಿತ್ತು, ಅದು ಪುನಃ ಕಾರ್ಯನಿರ್ವಹಿಸುವಂತ್ತಾಗಬೇಕೆAಬ ಶಾಸಕ ದೊಡ್ಡನಗೌಡ ಪಾಟೀಲರ ಆಶೆ ಪ್ರಾಮಾಣಿಕವಾಗಿ ಇಡೇರಿಸುವದಾಗಿ ತಿಳಿಸಿದರು.
ಇಲ್ಲಿಯ ಕೈಗಾರಿಕೆಗಳ ಅದರಲ್ಲು ಪ್ರಸಿದ್ದ ಗ್ರಾನೈಟ್ ಉದ್ಯಮ ಸ್ಥಗಿತವಾಗಿದ್ದರಿಂದ ಸಾವಿರಾರು ಕಾರ್ಮಿಕರಿಗೆ ಉದ್ಯೊಗ ಇಲ್ಲದಂತ್ತಾಗಿದೆ. ಅದನ್ನು ಪರಿಶೀಲಿಸಿ ಏನೂ ಮಾಡಲು ಸಾದ್ಯವಿದೆಯೋ ಆ ಕಾರ್ಯ ಮಾಡಲಾಗುವುದು. ಇಳಕಲ್ ನಗರದ ಈ ಅಭಿರ್ವದ್ಧಿ ಕಾರ್ಯಗಳು ಪೂರ್ಣಗೊಂಡಿದ್ದು ಬಹಳ ದಿನಗಳಾಗಿತ್ತು. ಬೆಳಗಾವಿ ಚುನಾವಣಾ ಉಸ್ತುವಾರಿ ವಹಿಸಿದ್ದರಿಂದ ಮತ್ತು ಅಧಿವೇಶನ ನಡೆದದ್ದರಿಂದ ತಡವಾಗಿ ಲೋಕಾರ್ಪಣೆ ಮಾಡಲಾಯಿತು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ ಮಹಾಮಾರಿ ಕರೋನದಿಂದಾಗಿ ತಾಲ್ಲೂಕಿನಲ್ಲಿ ನಡೆಯಬೇಕಿದ್ದ ಅನೇಕ ಕಾಮಗಾರಿಗಳು ಲೋಕಾರ್ಪಣೆಯಗಬೇಕಿದ್ದು ಸರ್ಕಾರದ ಆದೇಶದ ಮೇರೆಗೆ ಮತ್ತು ಸುರಕ್ಷಾ ದೃಷ್ಠಿಯಿಂದ ಕಾರ್ಯಕ್ರಮಗಳನ್ನು ಮುಂದುಡಲಾಗಿತ್ತು. ಇಂದು ರಾಯಚೂರು ಬಾಚಿ ರಸ್ತೆಯ ಅಗಲಿಕರಣ, ಡಾಂಬರಿಕರಣ ಮತ್ತು ನಮ್ಮ ಮತಕ್ಷೇತ್ರದ ಅಂದಾಜು ೨೦೦ ಕೋಟಿ ರೂ ಗಳ ವೆಚ್ಚದಲ್ಲಿ ಮಾನ್ಯ ನೀರಾವರಿ ಸಚಿವರ ಅಮೃತಾಸ್ತದಿಂದ ಇಂದು ೧೦ ಕೆರೆಗಳ ತುಂಬುವ ಯೋಜನೆ ಲೋಕಾರ್ಪಣೆಗೋಳಿಸಲಾಗಿದ್ದು. ಇನ್ನುಳಿದ ೨೨ ಸಾವಿರ ಎಕರೆ ಭೂಮಿಗೆ ಹನಿ ನೀರಾವರಿ ಮಾಡಲು ಭೂಮಿ ಪೂಜಾ ಮಾಡಲಾಗಿದೆ. ಈ ಕಾರ್ಯ ಇಗಾಗಲೇ ಪ್ರಾರಂಭಗೊAಡಿದ್ದು ಮುಂಬರುವ ಆರು ತಿಂಗಳುಗಳಲ್ಲಿ ಮುಕ್ತಾಯಗೊಳಿಸಲಾಗುವುದು. ಬಲಕುಂದಿ, ಚಿತ್ತವಾಡಗಿ,ರಂಗಸಮುದ್ರ, ದಮ್ಮೂರು ಕೆರೆ ಸೇರಿದಂತೆ ಹತ್ತು ಕೆರೆಗಳನ್ನು ಬರ್ತಿ ಮಾಡಲಾಗುವುದು ಎಂದರು.
ಗುಡೂರು ಭಾಗದ ಕೆರೆಗಳನ್ನು ಕೂಡಾ ತುಂಬಿಸಬೇಕೆAಬ ಆಲೋಚನೆ ಇತ್ತು ಆದರೆ ಈಗ ಬರುವ ಪೈಪ್‌ಲೈನ್ ಭೂಮಿಯ ತಳಮಟ್ಟದಲ್ಲಿರುವುದರಿಂದ ಅದು ಆಗಲಿಲ್ಲ ಎಂದ ಅವರು ಅದಕ್ಕಾಗಿಯೇ ಮತ್ತೋಂದು ಯೋಜನೆ ರೂಪಿಸಿ ಮಲಪ್ರಭಾ ನದಿ ನೀರಿನ ಮೂಲಕ ಆ ಕೆರೆಗಳನ್ನು ಕೂಡಾ ತುಂಬಲಾಗುವದು ಎಂದರು.
ಕಾರ್ಯಕ್ರಮದಲ್ಲಿ ವಿಜಯ ಮಹಾಂತೇಶ್ವರ ಮಠದ ಪೀಠಾಧಿಪತಿಗಳು, ನಗರಸಭೆ ಉಪಾಧ್ಯಕ್ಷೆ ಸವಿತಾ ಆರಿ, ನಗರಸಭೆ ಸ್ಥಾಯಿ ಸಮಿತಿ ಚೇರಮನ್ನ ಸದಾಶಿವ ಅಯ್ಯಪ್ಪ ಕನಕೇರಿ, ವೀಣಾ ಪ್ರಶಾಂತ ಅರಳಿಕಟ್ಟಿ, ಲಕ್ಷಿö್ಮÃಬಾಯಿ ಮಹಾಂತಪ್ಪ ಹಾದಿಮನಿ, ರೋಷಿತಾ ವೆಂಕಟೇಶ ಪೋತಾ, ಕಾಳಮ್ಮ ವಿರುಪಾಕ್ಷಪ್ಪ ಜಕ್ಕಾ, ಪ್ರಮೀಳಾ ಉಮೇಶ ಕೊಂಗಾರಿ, ಮಂಜುನಾಥ ಮಹಾಂತಪ್ಪ ಶೆಟ್ಟರ, ಶಾರದಾ ಮಂಜುನಾಥ ಪತ್ತಾರ, ಸುಗೋರೇಶ ಹಿರಣ್ಯಪ್ಪ ನಾಗಲೋಟಿ, ಗುರುದತ್ತಾತ್ರೇಯ ಗುಳೇದ, ಹುಸೇನಸಾಬ ಬಾಗವಾನ, ನೇತ್ರಾ ಯಲ್ಲಪ್ಪ ಪೂಜಾರಿ, ಹನಮಂತ ತುಂಬದ, ಸಂತೋಷ ಐಲಿ, ಚಂದ್ರಶೇಖರ ಏಕಬೋಟೆ ಮತ್ತು ಪ್ರಸ್ಥಾವಿಕವಾಗಿ ನಗರಸಭೆ ಪೌರಾಯುಕ್ತರಾದ ರಾಮಕೃಷ್ಣ ಸಿದ್ದನಕೊಳ್ಳ, ಕುಮಾರಿ ಶರಣ್ಯ ಅಂಗಡಿ ನಿರೂಪಿಸಿದರು, ಶೇಖರ್ ಏಕಬೋಟೆ ವಂದಿಸಿದರು.