This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Education NewsPolitics NewsState News

ಸಚಿವ ಎಂ.ಬಿ.ಪಾಟೀಲರ ಸ್ವಾತಂತ್ರ್ಯ ಸಂದೇಶ ಗಮನವಿಟ್ಟು ಓದಿ

<span class=ಸಚಿವ ಎಂ.ಬಿ.ಪಾಟೀಲರ ಸ್ವಾತಂತ್ರ್ಯ ಸಂದೇಶ ಗಮನವಿಟ್ಟು ಓದಿ" title="ಸಚಿವ ಎಂ.ಬಿ.ಪಾಟೀಲರ ಸ್ವಾತಂತ್ರ್ಯ ಸಂದೇಶ ಗಮನವಿಟ್ಟು ಓದಿ" decoding="async" srcset="https://nimmasuddi.com/whirtaxi/2023/08/HAPPY-INDEPENDENCE-DAY-scaled.jpg 2560w, https://nimmasuddi.com/whirtaxi/2023/08/HAPPY-INDEPENDENCE-DAY-300x88.jpg 300w, https://nimmasuddi.com/whirtaxi/2023/08/HAPPY-INDEPENDENCE-DAY-1024x299.jpg 1024w, https://nimmasuddi.com/whirtaxi/2023/08/HAPPY-INDEPENDENCE-DAY-768x224.jpg 768w, https://nimmasuddi.com/whirtaxi/2023/08/HAPPY-INDEPENDENCE-DAY-1536x449.jpg 1536w, https://nimmasuddi.com/whirtaxi/2023/08/HAPPY-INDEPENDENCE-DAY-2048x599.jpg 2048w" sizes="(max-width: 2560px) 100vw, 2560px" />

*ಸ್ವಾತಂತ್ರ್ಯೋತ್ಸವದ ಸಂದೇಶ-2023*

*ಎಂ.ಬಿ.ಪಾಟೀಲ*
*ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ,*
*ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರು*

ಆಗಸ್ಟ್ 15, 2023
• ಪ್ರಿಯ ನಾಗರಿಕ ಬಂಧುಗಳೇ, ನಿಮ್ಮೆಲ್ಲರಿಗೂ ಭಾರತದ 77ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

• ಈ ಸಂದರ್ಭದಲ್ಲಿ ನಾವೆಲ್ಲರೂ ಸ್ವಾತಂತ್ರಕ್ಕಾಗಿ ತ್ಯಾಗ, ಬಲಿದಾನಗಳನ್ನು ಮಾಡಿದ ಕಿತ್ತೂರು ರಾಣಿ ಚೆನ್ನಮ್ಮ, ಮೊಹರೆ ಹನುಮಂತರಾಯರು, ಮೈಲಾರ ಮಹದೇವಪ್ಪ, ಮಧುರಚೆನ್ನರು, ಫ.ಗು.ಹಳಕಟ್ಟಿಯವರು, ಹಲಗಲಿಯ ಬೇಡರು, ಧೋಂಡಿಯ ವಾಘ್, ಗಂಗಾಧರ ದೇಶಪಾಂಡೆ, ನಾ.ಸು.ಹರ್ಡೇಕರ್, ಹರ್ಡೀಕರ್ ಮಂಜಪ್ಪ, ಸುರಪುರದ ರಾಜಾ ವೆಂಕಟಪ್ಪ ನಾಯಕ, ಚನ್ನಬಸಪ್ಪ ಅಂಬಲಿ, ಸುರಪುರದ ಮಲ್ಲಪ್ಪ, ನರಗುಂದದ ಬಾಬಾಸಾಹೇಬರು, ಕಾಕಾ ಕಾರಖಾನೀಸ್, ತಾಮಜಿ ಕುಶಾಜಿ ಮೀರಜಕರ್, ಮಾಧವಾನಂದ ಪ್ರಭುಗಳು, ಸ್ವಾಮಿ ರಮಾನಂದತೀರ್ಥರು, ಜೀವರಾಜ ದೋಶಿ, ನಮ್ಮ ದೇವರ ನಾವದಗಿಯಲ್ಲಿ ನೆಲೆಸಿದ್ದ ವಾಸುದೇವ ಬಲವಂತ ಫಡ್ಕೆ, ರಾಚಪ್ಪ ಗುರುಲಿಂಗಪ್ಪ ಹೊಳಗಿ, ನಾರಾಯಣ ರಾಘವೇಂದ್ರ ದೇಸಾಯಿಯವರು, ರತನಚಂದ ವಾಯಪ್ಪ ಜಗಶೆಟ್ಟಿ, ಶಂಕರಗೌಡ ಪಾಟೀಲರು, ಭಗವಾನ್ ಸಿಂಗ್ ಅಂಗಡಿ, ಶಿವಾನಂದ ಶಿವಯೋಗಿಗಳು, ತಿಪ್ಪಣ್ಣ ಶಂಕರಪ್ಪ ಗುದ್ದಿ, ಬಾಳಪ್ಪ ಬೋಸಗಿ, ಖಾಜಾಬಾಯಿ, ಈರಪ್ಪ ಕಾಳಪ್ಪ ಬಡಿಗೇರ, ಮಲ್ಲಪ್ಪ ಕುಂಬಾರ, ರೇವಪ್ಪ ಕಾಪಸೆ, ಗಿರಿಮಲ್ಲಪ್ಪ ವಾಲಿ, ಬಸಪ್ಪ ಬೆಳಗಲಿ, ಅಗರಖೇಡ್ ಜಹಗೀರುದಾರರು ಸೇರಿದಂತೆ ಅವಳಿ ಜಿಲ್ಲೆಯ ಹಾಗೂ ಈ ಭಾಗದ ಸಾವಿರಾರು ನೇತಾರರು ಭಾರತಾಂಬೆಯ ಸ್ವಾತಂತ್ರಕ್ಕಾಗಿ ಯಾವ ಅಪಾಯವನ್ನೂ ಲೆಕ್ಕಿಸದೆ ನಡೆಸಿದ ಹೋರಾಟವನ್ನು ನಾವಿಂದು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಲೇಬೇಕು.

• ಹಾಗೆಯೇ ರಾಷ್ಟ್ರಮಟ್ಟದಲ್ಲಿ ತಮ್ಮ ಅಹಿಂಸೆ ಮತ್ತು ಅಸಹಕಾರದ ಹೋರಾಟಗಳ ಮೂಲಕ 33 ಕೋಟಿ ಭಾರತೀಯರನ್ನು ಒಗ್ಗೂಡಿಸಿದ ಮಹಾತ್ಮ ಗಾಂಧೀಜಿ, ಮೋತಿಲಾಲ್ ನೆಹರು, ಜವಾಹರಲಾಲ್ ನೆಹರು, ಬಾಬಾಸಾಹೇಬ್ ಅಂಬೇಡ್ಕರ್, ಸರ್ದಾರ ವಲ್ಲಭಾಯಿ ಪಟೇಲ ಸ್ವದೇಶಿ ಆಂದೋಲನದ ಮೂಲಕ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿದ ಬಾಲಗಂಗಾಧರ ತಿಲಕರು, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ತಾತ್ಯಾ ಟೋಪೆ, ಬಹದ್ದೂರ್ μÁ, ಸುಭಾಷಚಂದ್ರ ಭೋಸ್, ಅರವಿಂದ ಘೋμï, ಬಿಪಿನ್‍ಚಂದ್ರ ಪಾಲ್, ಗೋಪಾಲಕೃಷ್ಣ ಗೋಖಲೆ, ಲಾಲಾಲಜಪತ ರಾಯ್, ಸಿ.ರಾಜಗೋಪಾಲಾಚಾರಿ, ನಮ್ಮ ರಾಜ್ಯದ ಪ್ರಥಮ ಮುಖ್ಯಮಂತ್ರಿಗಳಾಗಿದ್ದ ಶ್ರೀ ಕೆ.ಸಿ.ರೆಡ್ಡಿ, ಮೇಡಂ ಭಿಕಾಜಿ ಕ್ಯಾಮಾ, ಶಾಮಲಾಲ್ ಕೃಷ್ಣವರ್ಮ ಮುಂತಾದವರನ್ನೆಲ್ಲ ನೆನಪಿಸಿಕೊಂಡು, ನಮಿಸೋಣ.

• ನಮ್ಮ ನೆಲದಲ್ಲಿ ಅವತರಿಸಿದ ಪುಣ್ಯಪುರುಷರೆಲ್ಲರ ಪ್ರಾಮಾಣಿಕವಾದ ಹೋರಾಟ ಹಾಗೂ ಅವರ ತ್ಯಾಗ ಮತ್ತು ಬಲಿದಾನದಿಂದ ದೇಶವು ಬ್ರಿಟಿಷರ ಕಪಿಮುಷ್ಟಿಯಿಂದ ವಿಮೋಚನೆ ಕಂಡಿತು. ಕಳೆದ 76 ವರ್ಷಗಳಲ್ಲಿ ನಮ್ಮ ಹಿರಿಯರ ದೂರದೃಷ್ಟಿಯಿಂದಾಗಿ ಭಾರತವು ಇಂದು ವಿಶ್ವದ ಅಗ್ರಮಾನ್ಯ ರಾಷ್ಟ್ರಗಳಲ್ಲಿ ಒಂದಾಗಿದೆ.

• ಆ ಹಿರಿಯರ ನಿಸ್ವಾರ್ಥದ ಸಿಹಿಫಲಗಳನ್ನು ನಾವು ಇಂದು ಸವಿಯುತ್ತಿದ್ದೇವೆ. ಈ ಮುಕ್ಕಾಲು ಶತಮಾನದಲ್ಲಿ ದೇಶವು ಬಡತನ ನಿರ್ಮೂಲನೆ, ಕೃಷಿ, ಅನ್ನ, ಆಹಾರ, ವಸತಿ, ಶಿಕ್ಷಣ, ಉದ್ಯಮ, ವಿಜ್ಞಾನ, ತಂತ್ರಜ್ಞಾನ, ಬಾಹ್ಯಾಕಾಶ, ಅಣುವಿಜ್ಞಾನ, ಸೇವಾ ವಲಯ ಮುಂತಾದವುಗಳಲ್ಲಿ ಇಡೀ ಜಗತ್ತೇ ಬೆರಗಿನಿಂದ ನೋಡುವಂತಹ ವಿಕ್ರಮಗಳನ್ನು ಸಾಧಿಸಿದೆ. ಇದಕ್ಕೆ ನಾವೆಲ್ಲರೂ ಹೆಮ್ಮೆ ಪಡಬೇಕು.

• ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶ್ರೀ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಸರಕಾರವು ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ತಾನು ಕೊಟ್ಟ ಐದು ಗ್ಯಾರಂಟಿಗಳು ಸೇರಿದಂತೆ ಎಲ್ಲಾ ಆಶ್ವಾಸನೆಗಳನ್ನೂ ಸಮರೋಪಾದಿಯಲ್ಲಿ ಜಾರಿಗೆ ತರುತ್ತಿದೆ. ಇದು ನಮ್ಮ ಸಂವಿಧಾನದ ಜನಕರಾಗಿರುವ ಡಾ.ಅಂಬೇಡ್ಕರರ ಸಮಾನತೆಯ ಕನಸನ್ನು ನನಸು ಮಾಡುವ ಸಂಕಲ್ಪವಾಗಿದೆ.

• ನಾವು ಚುನಾವಣೆಗೆ ಮೊದಲು, ಐದು ಗ್ಯಾರಂಟಿಗಳ ಭರವಸೆ ನೀಡಿದ್ದೆವು. ಅಧಿಕಾರಕ್ಕೆ ಬಂದಮೇಲೆ ನಾವು ಇದನ್ನು ಮರೆಯಲಿಲ್ಲ. ಬದಲಿಗೆ, ಕೇವಲ ಎರಡು ತಿಂಗಳಲ್ಲಿ ರಾಜ್ಯದ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಸಂಪೂರ್ಣ ಉಚಿತ ಪ್ರಯಾಣದ ‘ಶಕ್ತಿ’ ಯೋಜನೆ, ಕುಟುಂಬದ ಯಜಮಾನಿಗೆ ತಿಂಗಳಿಗೆ 2,000 ರೂ. ಕೊಡುವ ಗೃಹಲಕ್ಷ್ಮಿ ಯೋಜನೆ, ತಿಂಗಳಿಗೆ ಪ್ರತೀ ಮನೆಗೂ ಗರಿಷ್ಠ 200 ಯೂನಿಟ್‍ವರೆಗೂ ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ, ಪ್ರತೀ ಕುಟುಂಬದ ಸದಸ್ಯರಿಗೂ ತಿಂಗಳಿಗೆ ತಲಾ 10 ಕೆ.ಜಿ ಅಕ್ಕಿ (5 ಕೆ.ಜಿ ಅಕ್ಕಿ ಖರೀದಿಸಲು ನೇರವಾಗಿ ಬ್ಯಾಂಕ್ ಖಾತೆಗೆ 170 ರೂ. ಜಮಾ ಮಾಡಲಾಗುತ್ತಿದೆ)- ಈ ನಾಲ್ಕೂ ಗ್ಯಾರಂಟಿಗಳನ್ನು ಈಗಾಗಲೇ ಜಾರಿಗೆ ತಂದಿದ್ದೇವೆ.

• ಉಚಿತ ಪ್ರಯಾಣದ ಶಕ್ತಿ ಯೋಜನೆಯಿಂದಾಗಿ ಜಿಲ್ಲೆಯಲ್ಲಿ 91 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಪ್ರಯೋಜನವಾಗುತ್ತಿದೆ. ನಮ್ಮದು ಗಡಿಭಾಗದ ಜಿಲ್ಲೆಯಾದ್ದರಿಂದ ಗಡಿಯಾಚೆಗೂ 20 ಕಿ.ಮೀ. ದೂರ ಉಚಿತ ಪ್ರಯಾಣದ ಅವಕಾಶ ಕಲ್ಪಿಸಲಾಗಿದೆ. ಈ ಸವಲತ್ತನ್ನು ನಾವು ತೃತೀಯ ಲಿಂಗಿಗಳಿಗೂ ಒದಗಿಸಿರುವುದು ನಮ್ಮ ಮನುಷ್ಯಪರ ಕಾಳಜಿಗೆ ಸಾಕ್ಷಿಯಾಗಿದೆ.

• ಈ ಹಿಂದೆ ಬಂಗಾರಪ್ಪನವರು ಮುಖ್ಯಮಂತ್ರಿ ಆಗಿದ್ದಾಗ ಕುಠಿರ ಯೋಜನೆಯನ್ನು ಆರಂಭಿಸಿ, ಬಡವರಿಗೆ ಉಚಿತ ವಿದ್ಯುತ್ ಒದಗಿಸಿದ್ದನ್ನು ಇಲ್ಲಿ ಸ್ಮರಿಸುತ್ತೇನೆ. ಇದೀಗ ಬಡವರ ಭಾಗ್ಯವಿಧಾತರಾಗಿರುವ ನಮ್ಮ ಹೆಮ್ಮೆಯ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯನವರು ‘ಗೃಹ ಜ್ಯೋತಿ’ ಯೋಜನೆಯನ್ನು ತಂದಿದ್ದಾರೆ. ಜಿಲ್ಲೆಯಲ್ಲಿ 4 ಲಕ್ಷ 60 ಸಾವಿರ ಒಟ್ಟು ಗೃಹ ಬಳಕೆದಾರರು ಸಂಪರ್ಕ ಹೊಂದಿದ್ದು, ಇದರಲ್ಲಿ 3 ಲಕ್ಷ 72 ಸಾವಿರ ಅಂದರೆ ಶೇ.81 ಗ್ರಾಹಕರು ಈ ಯೋಜನೆಯಲ್ಲಿ ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. ವಿಜಯಪುರ ಜಿಲ್ಲೆಯಲ್ಲಿ ಈ ಯೋಜನೆಯಿಂದ ಗ್ರಾಹಕರಿಗೆ ತಿಂಗಳಿಗೆ 17 ಕೋಟಿ ಮತ್ತು ವರ್ಷಕ್ಕೆ ಕನಿಷ್ಠ 200 ಕೋಟಿ ರೂ.ಗಳಷ್ಟು ಬಿಲ್ ತುಂಬುವುದು ಉಳಿತಾಯವಾಗಲಿದೆ. ಗ್ರಾಮೀಣ ಬಳಕೆದಾರರಿಗೆ ಶೇ.100ಕ್ಕೆ 100ರಷ್ಟು ಹಾಗೂ ನಗರ ಪ್ರದೇಶಗಳಲ್ಲಿ ಶೇ.96 ರಷ್ಟು ಗ್ರಾಹಕರು ವಿದ್ಯುತ್ ಬಿಲ್ ಮೊತ್ತವನ್ನು ನಮ್ಮ ಸರ್ಕಾರವೇ ಭರಿಸಲಿದೆ.

• ಸಾರ್ವಜನಿಕರು ವಿದ್ಯುತ್ ಬಿಲ್ ಪಾವತಿಯಿಂದ ಇದೀಗ ತಮಗೆ ಉಳಿತಾಯವಾಗುವ ಹಣವನ್ನು ಕಡ್ಡಾಯವಾಗಿ ತಮ್ಮ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಬಳಸಬೇಕು ಎನ್ನುವುದು ನನ್ನ ವಿನಂತಿಯಾಗಿದೆ.

• ಅನ್ನಭಾಗ್ಯ ಯೋಜನೆಯಡಿ ನಾವು ಜಿಲ್ಲೆಯಲ್ಲಿ 11.94 ಲಕ್ಷಕ್ಕೂ ಹೆಚ್ಚು ಅರ್ಹರ ಖಾತೆಗಳಿಗೆ 20.30 ಕೋಟಿ ರೂ. ಹಣವನ್ನು ವರ್ಗಾಯಿಸಿದ್ದೇವೆ.

• ಗೃಹಲಕ್ಷ್ಮಿ ಯೋಜನೆಯ ಲಾಭವು ವಿಜಯಪುರ ಜಿಲ್ಲೆಯಲ್ಲಿ 3.98 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಸಿಕ್ಕುತ್ತಿದೆ. ಅಂದರೆ, ನಮ್ಮ ಜಿಲ್ಲೆಯಲ್ಲಿರುವ ಒಟ್ಟು ಮಹಿಳೆಯರ ಪೈಕಿ ಶೇಕಡಾ 78.25ರಷ್ಟು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ನಾವು ಚಾಲನೆ ನೀಡಿದ್ದೇವೆ.

• ಇನ್ನು ಗೃಹಜ್ಯೋತಿ ಯೋಜನೆಯಡಿ ಜಿಲ್ಲೆಯಲ್ಲಿರುವ ಶೇಕಡಾ 99ರಷ್ಟು ಮನೆಗಳಿಗೆ ಲಾಭವಾಗುತ್ತಿದೆ. ಇದರಿಂದ ಹೊರಗುಳಿದಿರುವ ಜನರ ಸಂಖ್ಯೆಯು ಜಿಲ್ಲೆಯಲ್ಲಿ ಕೇವಲ 26 ಸಾವಿರ ಮಾತ್ರ.

• ನಿರುದ್ಯೋಗಿ ಪದವೀಧರರು ಮತ್ತು ಡಿಪೆÇ್ಲಮಾ ಪದವೀಧರರಿಗೆ ಗರಿಷ್ಠ 2 ವರ್ಷಗಳ ಕಾಲ ತಿಂಗಳಿಗೆ ತಲಾ 3,000 ರೂ. ಮತ್ತು 1,500 ರೂ. ಕೊಡುವಂತಹ ‘ಯುವನಿಧಿ’ ಗ್ಯಾರಂಟಿ ಯೋಜನೆಗೆ ಕೂಡ ನಮ್ಮ ಸರಕಾರದಿಂದ ಸದ್ಯದಲ್ಲೇ ಚಾಲನೆ ನೀಡಲಿದ್ದೇವೆ.

• ನಾನು ಈ ಹಿಂದೆ 2013-18 ರ ಅವಧಿಯಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದಾಗ ವಿಜಯಪುರ ಜಿಲ್ಲೆಯೂ ಸೇರಿದಂತೆ ರಾಜ್ಯದ ಹಲವೆಡೆಗಳಲ್ಲಿ ಹತ್ತಾರು ಉಪಯುಕ್ತ ಯೋಜನೆಗಳನ್ನು ರೂಪಿಸಿ, ಜಾರಿಗೆ ತಂದಿದ್ದು, ಅದರ ಲಾಭವು ವಿಶೇಷವಾಗಿ ನಮ್ಮ ಜಿಲ್ಲೆಯ ಜನತೆಗೆ ಸಿಕ್ಕಿದ್ದು, ಅವರೆಲ್ಲರ ಬದುಕು ಹಸನಾಗಿದೆ. ಇದನ್ನು ಕಂಡು ನನಗೆ ಸಾರ್ಥಕತೆ ಮತ್ತು ಧನ್ಯತೆಯ ಭಾವನೆ ಮೂಡಿದೆ.

• 2018-19 ರಲ್ಲಿ ಗೃಹ ಸಚಿವನಾಗಿದ್ದಾಗ ವಿಜಯಪುರ ಜಿಲ್ಲೆಯ ಕೇಂದ್ರ ಕಾರಾಗೃಹ ನಿರ್ಮಣಕ್ಕೆ 100ಕೋಟಿ ಒದಗಿಸಿದ್ದು, ಅದೀಗ ಮುಕ್ತಾಯದ ಹಂತದಲ್ಲಿದೆ.

• ಜೊತೆಗೆ, ಈಗ ಭಾರೀ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವನಾಗಿ ಸಿಕ್ಕಿರುವ ಸದವಕಾಶದಲ್ಲಿ ರಾಜ್ಯಕ್ಕೂ ಜಿಲ್ಲೆಗೂ ರಚನಾತ್ಮಕ ಮತ್ತು ಶಾಶ್ವತ ಕೊಡುಗೆಗಳನ್ನು ನೀಡಲು ನಾನು ಸಂಕಲ್ಪ ಮಾಡಿದ್ದೇನೆ.

• ಜಿಲ್ಲೆಯಲ್ಲಿ ಒಂದು ಕಡೆ ನೀರಾವರಿಯ ಅನುಕೂಲವಿದೆ. ಇನ್ನೊಂದೆಡೆಯಲ್ಲಿ ಇದಕ್ಕೆ ಪೂರಕವಾಗಿ ಉದ್ಯಮಗಳು ಬರಲೇಬೇಕು. ಇಲ್ಲದೆ ಹೋದರೆ ಸಮತೋಲನ ಸಾಧ್ಯವಾಗುವುದಿಲ್ಲ. ಈ ದೃಷ್ಟಿಯಿಂದ ಜಿಲ್ಲೆಯಲ್ಲಿ 3219 ಎಕರೆ ಪ್ರದೇಶವನ್ನು ಗುರುತಿಸಲಾಗಿದೆ. ಇದರಲ್ಲಿ ಕೊಲ್ಹಾರ ತಾಲ್ಲೂಕಿನಲ್ಲಿ 614 ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶವನ್ನು ಅಭಿವೃದ್ಧಿ ಪಡಿಸಿದ್ದು, 411 ಕೈಗಾರಿಕಾ ನಿವೇಶನಗಳನ್ನು ಸಜ್ಜುಗೊಳಿಸಲಾಗಿದೆ. ಇದಕ್ಕಾಗಿ ನಾವು 254 ಕೋಟಿ ರೂ. ಬಂಡವಾಳ ಹೂಡಿದ್ದೇವೆ.

• ಅಲ್ಲದೇ, ಹೊಸದಾಗಿ ಇನ್ನೂ ಹೆಚ್ಚಿನ ಕೈಗಾರಿಕೆಗಳು ಇಲ್ಲಿ ನೆಲೆಗೊಳ್ಳಲು ಶಾಶ್ವತ ಕ್ರಮಗಳನ್ನು ಕೈಗೊಳ್ಳಲು ನಾನು ರೂಪುರೇಷೆ ಹಾಕಿಕೊಂಡಿದ್ದೇನೆ. ವಿಜಯಪುರದಲ್ಲಿ ವಿಮಾನ ನಿಲ್ದಾಣ ನಿರ್ಮಾಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಅದರಿಂದ ಅನಕೂಲ ಪಡೆಯಲು ಹೊಸದಾಗಿ ಒಂದು ಸಾವಿರ ಎಕರೆ ಪ್ರದೇಶದಲ್ಲಿ ಇಂಡಸ್ಟ್ರೀಯಲ್ ಎಸ್ಟೇಟ್/ಪಾರ್ಕ್ ನಿರ್ಮಾಣ ಮಾಡಿ, ಇಲ್ಲಿ ಗುಡಿಕೈಗಾರಿಕೆಗಳಿಂದ ಶ್ರೇಷ್ಠ ತಂತ್ರಜ್ಞಾನದ ಕೈಗಾರಿಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

• ನಾನು ಈ ಎರಡೂ ಖಾತೆಗಳ ಹೊಣೆ ಹೊತ್ತುಕೊಂಡು ಎರಡು ತಿಂಗಳಾದವು. ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿಯ ವೇಗವನ್ನು ಕಲ್ಪಿಸಿ, ಮೂಲಯೋಜನೆಯಲ್ಲಿ ನೈಟ್ ಲ್ಯಾಂಡಿಂಗ್‍ಗೂ ಅವಕಾಶ ಇರಲಿಲ್ಲ. ಇದನ್ನು ಪರಿಷ್ಕರಿಸಿ, ನೈಟ್ ಲ್ಯಾಂಡಿಂಗ್ ವ್ಯವಸ್ಥೆಗೆ ಕ್ರಮ ಕೈಗೊಂಡಿದ್ದೇನೆ. ಇದಕ್ಕಾಗಿ 50 ಕೋಟಿ ರೂ. ಗಳನ್ನು ಬಿಡುಗಡೆಗೊಳಿಸಲಾಗಿದೆ. ಕಳೆದ ವಾರ ನಾನು ಸ್ಥಳಕ್ಕೆ ಭೇಟಿ ನೀಡಿ ಕ್ಷಿಪ್ರ ಗತಿಯಲ್ಲಿ ಕೆಲಸ ಸಾಗುವಂತೆ ಸೂಚಿಸಿದ್ದು, ಇನ್ನೂ ಅಗತ್ಯವಿರುವ ವಿವಿಧ ಇಲಾಖೆಗಳ ಅನುಮತಿ ಮತ್ತು ಅಗತ್ಯವಿರುವ ಉಪಕರಣಗಳ ಅಳವಡಿಕೆಗೆ ಕ್ರಮ ಜರುಗಿಸಲಾಗಿದೆ. ಇವೆಲ್ಲ ಪೂರ್ಣಗೊಂಡು 2024ರ ಏಪ್ರಿಲ್ ವೇಳೆಗೆ ನಮ್ಮ ಈ ವಿಮಾನ ನಿಲ್ದಾಣ ಕಾಮಗಾರಿ ಮುಕ್ತಾಯಗೊಳ್ಳುವುದು. ಇದಕ್ಕಾಗಿ ಒಟ್ಟು 400 ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿದ್ದೇವೆ. ಈ ವಿಮಾನ ನಿಲ್ದಾಣದಿಂದ ನಮಗೆ ಮುಂಬೈ, ಹೈದರಾಬಾದ್, ಅಹಮದಾಬಾದ್, ಬೆಂಗಳೂರು, ಮಂಗಳೂರು, ಗೋವಾ ಮತ್ತು ಚನೈಗಳು ಮತ್ತಷ್ಟು ಹತ್ತಿರವಾಗಲಿವೆ.

• ಇμÉ್ಟೀ ಅಲ್ಲದೆ, ಬೋಯಿಂಗ್ ತರಹದ ದೊಡ್ಡ ಏರ್‍ಬಸ್‍ಗಳು ಇಲ್ಲಿ ಇಳಿಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ದೇಶದ ನಾನಾ ಭಾಗಗಳಿಂದ ಬರುವುದರಿಂದ ಹೊಸ-ಹೊಸ ಕೈಗಾರಿಕೆಗಳು, ಸ್ಟಾರ್ಟಪ್‍ಗಳು ಇಲ್ಲಿಗೆ ಬಂದು, ಇಲ್ಲಿಯ ಸಾವಿರಾರು ಜನರಿಗೆ ಮನೆಬಾಗಿಲಲ್ಲೇ ಉದ್ಯೋಗಾವಕಾಶಗಳನ್ನು ತಂದು ಕೊಡಲಿವೆ. ಇದು ಅಂತಿಮವಾಗಿ ಪ್ರಾದೇಶಿಕ ಅಸಮಾನತೆಯ ನಿವಾರಣೆ ಮತ್ತು ಬ್ರಾಂಡ್ ಕರ್ನಾಟಕ ಸೃಷ್ಟಿಗೆ ನೆರವಾಗಲಿವೆ.

• ರಾಜ್ಯದಲ್ಲಿ ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಈ ತಿಂಗಳ 31ರಿಂದ ವಿಮಾನ ಹಾರಾಟ ಆರಂಭವಾಗಲಿದೆ. ಹಾಸನ ವಿಮಾನ ನಿಲ್ದಾಣ ಕಾಮಗಾರಿ ಪ್ರಗತಿಯಲ್ಲಿದೆ. ರಾಯಚೂರು ಮತ್ತು ಬಳ್ಳಾರಿಯಲ್ಲೂ ವಿಮಾನ ನಿಲ್ದಾಣ ನಿರ್ಮಾಣವಾಗಲಿದೆ.
• ಇμÉ್ಟೀ ಅಲ್ಲ, ಇನ್ನುಮುಂದೆ ರಾಜ್ಯದ ವಿಮಾನ ನಿಲ್ದಾಣಗಳನ್ನು ನಮ್ಮ ಸರಕಾರದ ವತಿಯಿಂದಲೇ ಸಮರ್ಥವಾಗಿ ನಿರ್ವಹಿಸಲಾಗುವುದು. ಇದರಿಂದ ಒಂದು ಆರ್ಥಿಕ ಆದಾಯದ ಮೂಲ ಸೃಷ್ಟಿಯಾಗಿ, ಅದು ನಮ್ಮ ಬೊಕ್ಕಸಕ್ಕೇ ಹರಿದುಬರಲಿದೆ.

• ಈ ವರ್ಷದ ಬಜೆಟ್‍ನಲ್ಲಿ ವಿಜಯಪುರಕ್ಕೆ ಉತ್ಪಾದನೆ ಆಧಾರಿತ Iಟಿಜusಣಡಿiಚಿಟ ಅಟusಣeಡಿ ಅನ್ನು ಘೋಷಿಸಲಾಗಿದೆ. ಇದು ಕೂಡ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಿಗೆ ಆರ್ಥಿಕ ಚೈತನ್ಯವನ್ನು ತಂದುಕೊಡಲಿದೆ.

• ವಿಜಯಪುರ ಜಿಲ್ಲೆಯ ಬಹುಹಳ್ಳಿಯ ಕುಡಿಯುವ ನೀರಿನ ಜಲಧಾರೆ ಯೋಜನೆಯಲ್ಲಿ ಕೃಷ್ಣಾ ನದಿಯಿಂದ ನೀರೆತ್ತಿ ಪ್ರತಿನಿತ್ಯ 214 ಎಂ.ಎಲ್.ಡಿ ಮತ್ತು ವಾರ್ಷಿಕ 2.63 ಟಿ.ಎಂ.ಸಿ ನೀರನ್ನು ಬಳಸಿ, ಶುದ್ಧೀಕರಿಸಿ, ಒದಗಿಸುವ ಉದ್ದೇಶಿತ ಜಲಧಾರೆ ಯೋಜನೆಗೆ ಜಿಲ್ಲೆಯಾದ್ಯಂತ 4022 ಕಿ.ಮೀ ಕೊಳವೆ ಮಾರ್ಗ ಅಳವಡಿಸುತ್ತಿರುವುದು ದಾಖಲೆಯಾಗಿದೆ. ಇದಕ್ಕಾಗಿ 3454 ಕೋಟಿ ವೆಚ್ಚ ಮಾಡಲಾಗುತ್ತಿದೆ. ಈ ಯೋಜನೆಯಡಿ ಚಡಚಣ, ಇಂಡಿ, ಮನಗೂಳಿ, ನಿಡಗುಂದಿ, ಕೊಲ್ಹಾರ, ನಾಲತವಾಡ, ಮುದ್ದೇಬಿಹಾಳ, ತಾಳಿಕೋಟಿ, ದೇವರಹಿಪ್ಪರಗಿ, ಆಲಮೇಲ, ಸಿಂದಗಿ, ಬಬಲೇಶ್ವರ ಹಾಗೂ ತಿಕೋಟಾ ಸ್ಥಳೀಯ ನಗರ ಸಂಸ್ಥೆಗಳಿಗೆ ಹಾಗೂ 1045 ಗ್ರಾಮೀಣ ಜನವಸತಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುವುದು.

• ವಿಜಯಪುರ ನಗರಕ್ಕೆ ಕೋಲ್ಹಾರ ಪಟ್ಟಣದಲ್ಲಿ ಕೃಷ್ಣಾ ನದಿಯಿಂದ ನೀರು ಪೂರೈಸುವ 10.74ಕಿ.ಮೀ ಉದ್ದದ ಕಾಂಕ್ರೀಟ್ ಪೈಪ್‍ಗಳಲ್ಲಿ ಪದೇ-ಪದೇ ಸೋರಿಕೆ ಕಂಡುಬಂದಿದೆ. ಇದನ್ನು ಬದಲಾಯಿಸಿ ಇಲ್ಲಿ ಉಕೃಷ್ಟ ಉತ್ತಮ ದರ್ಜೆಯ ಪೈಪ್ ಅಳವಡಿಸಬೇಕು. ಇದಕ್ಕೆ 2018ರಲ್ಲಿಯೇ 3ಈ ಕಳೆದ ವಾರ ಸಭೆ ನಡೆಸಿದ್ದು, ಈ ಪೈಪ್‍ಲೈನ್ ಬದಲಾಯಿಸಲು ಸದ್ಯದ ಪರಿಷ್ಕರಣೆಯಂತೆ 52ಕೋಟಿ ರೂ. ವೆಚ್ಚ ತಗುಲಲಿದೆ. ಇದನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಜಾರಿಗೊಳಿಸಲಾಗುವುದು.

• ವಿಜಯಪುರ ನಗರ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ಭವಿಷ್ಯದ 50 ವರ್ಷಗಳ ದೂರದೃಷ್ಟಿಯಿಂದ ವಿಜಯಪುರ ಜಿಲ್ಲೆಯ ಕುಡಿಯುವ ನೀರಿನ ಯೋಜನೆ ರೂಪಿಸಬೇಕಿದೆ. ನಗರಕ್ಕೆ ನೀರು ಪೂರೈಸುವ ಶತಮಾನಗಳ ಇತಿಹಾಸದ ಭೂತನಾಳ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಿ, ಕೃಷ್ಣಾ ನದಿಯಿಂದ ನೀರೆತ್ತಿ ತುಂಬಿಸಿ, ವಿಜಯಪುರ ನಗರದ ಏಳು ವಾರ್ಡ್‍ಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತದೆ. ಇದನ್ನು ಇನ್ನಷ್ಟು ಬಲಗೊಳಿಸಲು ಮುಳವಾಡ ಏತನೀರಾವರಿ ಯೋಜನೆ, ತಿಡಗುಂದಿ ಶಾಖಾ ಕಾಲುವೆ, ಅಕ್ವಾಡಕ್ಟ್‍ನಿಂದ ಇನ್ನೊಂದು ಸಂಪರ್ಕವನ್ನು ಕಲ್ಪಿಸಿ, ಸದಾಕಾಲವು ಭೂತನಾಳ ಕೆರೆಗೆ ನೀರಿನ ಅಭಾವ ಆಗದಂತೆ ನೋಡಿಕೊಳ್ಳಲು ಉದ್ದೇಶ ಹೊಂದಿದ್ದೇನೆ.

• ವಿಜಯಪುರ ಸುತ್ತಮುತ್ತ ರಾಜ್ಯದಲ್ಲಿ ಅತ್ಯಂತ ಕನಿಷ್ಠ ಅರಣ್ಯ ಪ್ರದೇಶ ಹೊಂದಿದ್ದು, ಸತತ ಬರಗಾಲಕ್ಕೆ ತುತ್ತಾಗುವ ಈ ಜಿಲ್ಲೆಯಲ್ಲಿ ಅರಣ್ಯೀಕರಣ ಬೆಳೆಸಲು ಈ ಹಿಂದೆ ನಾನು ಜಿಲ್ಲೆ ಉಸ್ತುವಾರಿ ಸಚಿವನಾಗಿ ಆರಂಭಿಸಿದ ಕೋಟಿ ವೃಕ್ಷ ಅಭಿಯಾನಕ್ಕೆ ಜಿಲ್ಲೆಯಾದ್ಯಂತ ಸಾರ್ವಜನಿಕರಿಂದ ಉತ್ತಮ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಕೋವಿಡ್ ಕಾಲದಲ್ಲಿ ಹಾಗೂ ಇತರೆ ಕಾರಣಾಂತರಗಳಿಂದ ಇದರ ಅಂಗವಾಗಿ ನಡೆಯುತ್ತಿದ್ದ ವೃಕ್ಷೋಥಾನ (ಮ್ಯಾರಥಾನ್) ಸ್ಪರ್ಧೆ ನಿಂತುಹೋಗಿದ್ದು, ಇದನ್ನು ಪುನಃ ಈ ವರ್ಷದಿಂದ ಏರ್ಪಡಿಸಲಾಗುವುದು. ಹಸಿರು ಜಾಗೃತಿಯ ಈ ಓಟದಲ್ಲಿ ವೃಕ್ಷ ಅಭಿಯಾನದ ಜೊತೆ-ಜೊತೆಗೆ ವಿಜಯಪುರದ ಪಾರಂಪರಿಕ ಸ್ಥಳಗಳ (ಹೆರಿಟೆಜ್ ಸೈಟ್) ಮಹತ್ವಗಳ ಅರಿವು ಕೂಡ ಮೂಡಿಸಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು.

• ವಿದ್ಯಾರ್ಥಿಗಳು, ಯುವಜನರು, ಸಾರ್ವಜನಿಕ ಸಂಘ-ಸಂಸ್ಥೆಗಳನ್ನು ಒಗ್ಗೂಡಿಸಿ, ವೃಕ್ಷ ಅಭಿಯಾನಕ್ಕೆ ಬಲ ತುಂಬಿ, ಹಸಿರು ವಿಜಯಪುರ ಮಾಡಲು ನಾನು ಹೆಚ್ಚು ಆಸಕ್ತಿ ಹೊಂದಿದ್ದೇನೆ. ಅದಕ್ಕಾಗಿ ಇನ್ನು ಹೆಚ್ಚಿನ ನರ್ಸರಿಗಳು, ಹಸಿರು ವನಗಳು ನಿರ್ಮಾಣ ಮಾಡುವುದರ ಜೊತೆಗೆ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ಹೆಚ್ಚಿಸಲಾಗುವುದು. ವಿಶೇಷವಾಗಿ ಮಮದಾಪುರ ಕೆರೆ ಹತ್ತಿರ 1526 ಎಕರೆ ಪ್ರದೇಶದಲ್ಲಿ ಎರಡು ಲಕ್ಷಕ್ಕೂ ಅಧಿಕ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಬೆಳೆಸಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಇದು ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವ ಬಹುದೊಡ್ಡ ಜೀವವೈವಿಧ್ಯತೆಯ ತಾಣವಾಗಲಿದೆ.

• ಮೂಲಸೌಲಭ್ಯ ಅಭಿವೃದ್ಧಿ, ಕೈಗಾರಿಕೋದ್ಯಮ, ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ ಇವೆಲ್ಲವೂ ಒಂದು ಸರಪಳಿಯಂತೆ ಕೆಲಸ ಮಾಡುತ್ತಿರುತ್ತವೆ. ನಾನು ಈ ಖಾತೆಗಳ ಸಚಿವನಾದ ಮೇಲೆ ಐಫೆÇೀನ್ ತಯಾರಿಸುವ ಫಾಕ್ಸ್‍ಕಾನ್, ಅದರ ಎಂಡ್ ಅಸೆಂಬ್ಲಿ ಘಟಕಗಳನ್ನು ತಯಾರಿಸುವ ಅದರ ಅಂಗಸಂಸ್ಥೆ ಫಾಕ್ಸ್‍ಕಾನ್ ಇಂಟರ್‍ನೆಟ್ ಇಂಡಸ್ಟ್ರೀಸ್ (ಈII), ಅಯಾನ್-ಲೀಥಿಯಂ ಬ್ಯಾಟರಿಗಳನ್ನು ತಯಾರಿಸುವ Iಟಿಣeಡಿಟಿಚಿಣioಟಿಚಿಟ ಃಚಿಣಣeಡಿಥಿ ಅomಠಿಚಿಟಿಥಿ, ಕೈಗಾರಿಕಾ ಪ್ರದೇಶಗಳನ್ನು ಸ್ವತಃ ನಿರ್ಮಿಸಿ ಹಸ್ತಾಂತರಿಸುವ ಜಪಾನಿನ ಮಾರುಬೇನಿ ಕಾಪೆರ್Çರೇಷನ್ ಇವೆಲ್ಲವುಗಳ ಜತೆ ಮಾತುಕತೆ ನಡೆಸಿ, ಸಾವಿರಾರು ಕೋಟಿ ರೂ. ಬಂಡವಾಳವನ್ನು ಆಕರ್ಷಿಸಲಾಗುತ್ತಿದೆ. ಇದರ ಜತೆಯಲ್ಲೇ ರಫ್ತು ವಹಿವಾಟಿಗೆ ಉತ್ತೇಜನ ನೀಡುವಂಥ ಹೊಸ ಕೈಗಾರಿಕಾ ನೀತಿಯನ್ನು ತರಲು ನಮ್ಮ ಸರಕಾರ ತೀರ್ಮಾನಿಸಿದೆ.

• ಬೆಂಗಳೂರು ನಮ್ಮ ನಾಡಿನ ರಾಜಧಾನಿಯಾಗಿದ್ದು, ಅಲ್ಲಿಯ ಜನಸಂಖ್ಯೆ 1.30 ಕೋಟಿಗಿಂತ ಹೆಚ್ಚಾಗಿದೆ. ಅಲ್ಲಿಯ ಜನರ ಸುಗಮ ಮತ್ತು ತ್ವರಿತ ಓಡಾಟಕ್ಕೆಂದು 15 ಸಾವಿರ ಕೋಟಿ ರೂ.ಗಳಿಗಿಂತಲೂ ಹೆಚ್ಚಿನ ವೆಚ್ಚದಲ್ಲಿ 148 ಕಿ.ಮೀ. ಉದ್ದದ ಸಬರ್ಬನ್ ರೈಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ.

• ವಿಜಯಪುರ ನಗರದಲ್ಲಿ ಸಂಚಾರ ದಟ್ಟಣೆ ಹೆಚ್ಚಾಗುತ್ತಿದ್ದು, ಇದನ್ನು ನಿಯಂತ್ರಿಸಲು ಮತ್ತು ಸುಗಮ ಸಂಚಾರಕ್ಕಾಗಿ ಶಿವಾಜಿ ಸರ್ಕಲ್ ನಿಂದ ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದವರೆಗೆ 1 ಕಿ. ಮೀ. ಉದ್ದದ 200 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಫ್ಲೈ ಓವರ್ (ಮೇಲು ಸೇತುವೆ) ನಿರ್ಮಿಸುವ ಚಿಂತನೆ ಇದೆ.

• ಕೆಲದಿನಗಳ ಹಿಂದೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಮಳೆಯಾಗಿ ಸಾವುನೋವುಗಳು ಸಂಭವಿಸಿದ್ದು ತುಂಬಾ ದುಃಖದ ಸಂಗತಿ. ಈ ವಿಕೋಪಗಳಲ್ಲಿ 7 ಜನರು ಸಾವಿಗೀಡಾಗಿದ್ದು, ಇವರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳಂತೆ ಒಟ್ಟು 35 ಲಕ್ಷ ರೂ. ಪರಿಹಾರ ಕೊಡಲಾಗಿದೆ. ಜತೆಗೆ ಇವರ ಕುಟುಂಬಗಳಿಗೆ ಭೇಟಿ ನೀಡಿ, ದುಖಃದಲ್ಲಿ ಭಾಗಿಯಾಗಿ, ಸಾಂತ್ವನ ಹೇಳಿದ್ದೇನೆ.

• ಜತೆಗೆ 85 ಜಾನುವಾರುಗಳ ಜೀವಹಾನಿಯಾಗಿದ್ದು, ಈ ಬಾಬ್ತಿನಲ್ಲಿ 22 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಹಾಗೆಯೇ, 2,287 ಮನೆಗಳು ಭಾಗಶಃ ಹಾನಿಗೀಡಾಗಿದ್ದು ಇವುಗಳ ದುರಸ್ತಿಗೆ ತಲಾ 50 ಸಾವಿರ ರೂ.ಗಳಂತೆ 1.43 ಕೋಟಿ ರೂ. ಹೆಚ್ಚುವರಿ ಪರಿಹಾರ ಧನ ನೀಡಲು ಆದೇಶಿಸಲಾಗಿದೆ.

• ಹಾಗೆಯೇ, 584 ಹೆಕ್ಟೇರ್‍ನಲ್ಲಿ ಬೆಳೆದು ನಿಂತಿದ್ದ ತೋಟಗಾರಿಕೆ ಬೆಳೆಗಳು ಹಾನಿಗೀಡಾಗಿವೆ. ಇದಕ್ಕಾಗಿ ಸರಕಾರದಿಂದ ನೇರವಾಗಿ 50 ಲಕ್ಷ ರೂ. ಪರಿಹಾರವನ್ನು ರೈತರ ಖಾತೆಗಳಿಗೆ ಹಾಕಲಾಗಿದೆ.

• ಕಂದಾಯ ಇಲಾಖೆಯಲ್ಲಿ ಭೂಮಿ ತಂತ್ರಾಂಶದ ಮೂಲಕ ಹಕ್ಕು ಬದಲಾವಣೆ ಕಾರ್ಯ ನಿರ್ವಹಣೆಯಲ್ಲಿ ವಿಜಯಪುರ ಜಿಲ್ಲೆಯು ರಾಜ್ಯದಲ್ಲಿ 4ನೇ ಸ್ಥಾನದಲ್ಲಿದೆ. ನಮ್ಮ ಜಿಲ್ಲೆಯಲ್ಲಿ 303 ‘ಗ್ರಾಮ ಒನ್’ ಕೇಂದ್ರಗಳು & 36 ‘ಕರ್ನಾಟಕ ಒನ್’ ಕೇಂದ್ರಗಳಿದ್ದು, ಇವು ಸಾರ್ವಜನಿಕರಿಗೆ ವಿವಿಧ ಸೇವೆಗಳನ್ನು ಒದಗಿಸುತ್ತಿವೆ.

• ಹಾಗೆಯೇ, ಭೂಮಾಪನ & ಮೋಜಿಣಿ ಇಲಾಖೆಯ ಮೂಲಕ ಜಿಲ್ಲೆಯ 273 ಗ್ರಾಮಗಳಲ್ಲಿ ಡ್ರೋನ್ ಸಮೀಕ್ಷೆಯನ್ನು ಕೈಗೊಂಡಿದ್ದೇವೆ. ಈ ಪೈಕಿ 163 ಹಳ್ಳಿಗಳಲ್ಲಿ ಈ ಕೆಲಸವನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಇದೇ ರೀತಿಯಲ್ಲಿ ಸ್ವಾಮಿತ್ವ ಯೋಜನೆಯಡಿ 53 ಗ್ರಾಮಗಳಲ್ಲಿ ಡ್ರೋನ್ ಸಮೀಕ್ಷೆ ಮುಗಿಸಲಾಗಿದ್ದು, ಸಂಬಂಧಿತ ವರದಿಗಳನ್ನು ಅಂತಿಮಗೊಳಿಸಲಾಗಿದೆ.

• ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ವತಿಯಿಂದ ಹೊಸ ವಿದ್ಯುತ್ ವಿತರಣಾ ಕೇಂದ್ರಗಳ ಸ್ಥಾಪನೆ: ಜಿಲ್ಲೆಯಲ್ಲಿ ಹೊಸದಾಗಿ ಒಂದು 400ಕೆವಿ, ಎರಡು 220 ಕೆವಿ ಹಾಗೂ 27 ಸಂಖ್ಯೆಯ 110ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ಅಂದಾಜು 1850 ಕೋಟಿ ರೂ.ಗಳಲ್ಲಿ ಕರ್ನಾಟಕ ಸರ್ಕಾರದ ಇಂಧನ ಇಲಾಖೆಯ ಅಡಿಯಲ್ಲಿ ಬರುವ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (ಕೆ.ಪಿ.ಟಿ.ಸಿ.ಎಲ್) ದಿಂದ ವಿಜಯಪುರ ಜಿಲ್ಲೆಯಲ್ಲಿನ ಸುಮಾರು 2ಲಕ್ಷ 25ಸಾವಿರ ರೈತರಿಗೆ ನೀರವರಿ ಪಂಪ್‍ಸೆಟ್‍ಗಳಿಗೆ ಹಗಲು ವೇಳೆಯಲ್ಲಿ ನಿರಂತರವಾಗಿ ಗುಣಮಟ್ಟದ 7 ಗಂಟೆಗಳ ಕಾಲ 3 ಫೇಸ್ ವಿದ್ಯುತ್‍ನ್ನು ಪೂರೈಸಲು ಕರ್ನಾಟಕ ಸರ್ಕಾರವು ಉದ್ದೇಶಿಸಿದ್ದು, ಮುಂದಿನ 2 ವರ್ಷಗಳಲ್ಲಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು.

• ಜಿಲ್ಲೆಯಲ್ಲಿರುವ ಮೆಟ್ರಿಕ್‍ಪೂರ್ವ ಮತ್ತು ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳಲ್ಲಿ ಪ್ರತಿದಿನವೂ ತಂತ್ರಜ್ಞಾನ ಮತ್ತು ಪರಿಣತರ ಮೂಲಕ ವಿಜ್ಞಾನ, ಗಣಿತ ಮತ್ತು ಇಂಗ್ಲೀμï ವಿಷಯಗಳ ಆನ್‍ಲೈನ್ ಬೋಧನೆ ನಡೆಯುತ್ತಿದೆ. ಇದು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಸಾಧ್ಯವಾಗಿಸಲಿದೆ.

• ಗ್ರಾಮೀಣಾಭಿವೃದ್ಧಿ & ಪಂಚಾಯತಿರಾಜ್ ಇಲಾಖೆಯ ವತಿಯಿಂದ PಒಉSಙ ಮತ್ತು ಇತರ ಯೋಜನೆಗಳ ಮೂಲಕ 59.87 ಕೋಟಿ ರೂ. ವೆಚ್ಚದಲ್ಲಿ 112 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ.

• ವಿಜಯಪುರದ ಮುಖ್ಯ ಕೃಷಿ ಮಾರುಕಟ್ಟೆ ಪ್ರಾಂಗಣ ಮತ್ತು ಬಸವನ ಬಾಗೇವಾಡಿಯಲ್ಲಿರುವ ಉಪಮಾರುಕಟ್ಟೆ ಪ್ರಾಂಗಣದಲ್ಲಿ 4.14 ಕೋಟಿ ರೂ. ವೆಚ್ಚದಲ್ಲಿ 25 ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ.

• ಶಿಕ್ಷಣ ಕ್ಷೇತ್ರ ನನ್ನ ಅಚ್ಚುಮೆಚ್ಚಿನ ಕ್ಷೇತ್ರವಾಗಿದೆ. ಗುಣಮಟ್ಟದ ಶಿಕ್ಷಣ ನನ್ನ ಆದ್ಯತೆ, ಈ ಹಿಂದೆ ಎಸ್.ಎಸ್.ಎಲ್.ಸಿ ಫಲಿತಾಂಶ ಜಿಲ್ಲೆಯ ಪಾಲಿಗೆ ಕಹಿಯಾಗಿತ್ತು. ರಾಜ್ಯದ ಕೊನೆಯ ಮೂರು ಜಿಲ್ಲೆಗಳಲ್ಲಿ ವಿಜಯಪುರ ಜಿಲ್ಲೆ ಫಲಿತಾಂಶ ಬರುತ್ತಿತ್ತು. ಶೈಕ್ಷಣಿಕ ಗುಣಮಟ್ಟ ಕುಸಿದಿತ್ತು. ಈ ಹಿಂದೆ ನಾನು ಉಸ್ತುವಾರಿ ಸಚಿವನಾಗಿದ್ದಾಗ ಫಲಿತಾಂಶ ಸುಧಾರಣೆಗೆ ಕೈಗೊಂಡ ವಿಶೇಷ ಕ್ರಮಗಳು ಫಲ ನೀಡಿವೆ. ಇದಕ್ಕೆ ಸಾಕ್ಷಿ ಎಂಬಂತೆ ಜಿಲ್ಲೆಯ ಫಲಿತಾಂಶವು ಈ ಹಿಂದೆ 2013-14ರಲ್ಲಿ 32ನೇ ಸ್ಥಾನ, 2014-15 ರಲ್ಲಿ 31ನೇ ಸ್ಥಾನ, 2015-16ರಲ್ಲಿ 31ನೇ ಸ್ಥಾನಕ್ಕೆ ಕುಸಿದಿತ್ತು. ನಂತರ ಕೈಗೊಂಡ ಸುಧಾರಣಾ ಕ್ರಮಗಳಿಂದಾಗಿ 2016-17ರಲ್ಲಿ 20 ನೇ ಸ್ಥಾನ, 2017-18 ರಲ್ಲಿ 9ನೇ ಸ್ಥಾನ ಪಡೆಯಲು ಸಾಧ್ಯವಾಯಿತು ಎಂಬುದನ್ನು ಸ್ಮರಿಸುತ್ತೇನೆ.

• ಈ ವರ್ಷ 2022-23 ರಲ್ಲಿ ರಾಜ್ಯಕ್ಕೆ ವಿಜಯಪುರ ಜಿಲ್ಲೆ 11 ನೇ ಸ್ಥಾನವನ್ನು ಪಡೆದಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಒತ್ತು ಕೊಟ್ಟು ರಾಜ್ಯದ ಪ್ರಥಮ 5 ಜಿಲ್ಲೆಗಳಲ್ಲಿ ವಿಜಯಪುರವನ್ನು ತರಲು ಉದ್ದೇಶಿಸಲಾಗಿದೆ. ಅದರಂತೆಯೆ 132 ಶಾಲೆಗಳು ಶೇ.100 ರಷ್ಟು ಫಲಿತಾಂಶ ಪಡೆದಿವೆ. ಇವರಿಗೆ ನಾನು ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಅದೇ ರೀತಿ ಕಳೆದ ಸಾಲಿನ ದ್ವಿತೀಯ ಪಿ.ಯು.ಸಿ. ಪರೀಕ್ಷೆಯಲ್ಲಿ ಶೇ.84.68 ಫಲಿತಾಂಶದೊಂದಿಗೆ ಜಿಲ್ಲೆಯು ರಾಜ್ಯಕ್ಕೆ 5ನೇ ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

• ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ನಾಗರಬೆಟ್ಟ ಆಕ್ಸ್‍ಫರ್ಡ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯ ವಿದ್ಯಾರ್ಥಿ ಕುಮಾರ ಭೀಮನಗೌಡ ಬಿರಾದಾರ ಪಾಟೀಲ ಈತನು 625 ಕ್ಕೆ 625 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ, ಅವನಿಗೆ ಹಾಗೂ ಆ ಶಾಲೆಯ ಆಡಳಿತ ಮಂಡಳಿ ಮತ್ತು ಶಿಕ್ಷಕರಿಗೆ ಅಭಿನಂದನೆಗಳು.

• ಜಿಲ್ಲಾ ಆಸ್ಪತ್ರೆಯಲ್ಲಿ ಬೆಂಗಳೂರಿನ ಕಿದ್ವಾಯಿ ಸಂಸ್ಥೆಯವರ ಸಹಯೋಗದೊಂದಿಗೆ 10 ಹಾಸಿಗೆಯ ಸಾಮಥ್ರ್ಯದ ಕಿಮೋ ಥೆರಪಿ ಇನ್‍ಫ್ಯುಜನ್ ಸೆಂಟರ್ ಪ್ರಾರಂಭಿಸಲಾಗಿದೆ. ಅದರಂತೆಯೇ 10 ಹಾಸಿಗೆಯ ಸಾಮಥ್ರ್ಯದ ಕಣ್ಣಿನ ಶಸ್ತ್ರಚಿಕಿತ್ಸಾ ಘಟಕದ ಕಾಮಗಾರಿಯು ಮುಕ್ತಾಯವಾಗಿರುತ್ತದೆ.

• ಅವಳಿ ಜಿಲ್ಲೆಗಳಲ್ಲಿ ಪ್ರತಿ ದಿನ ಸರಾಸರಿ 72 ಸಾವಿರ ಲೀಟರ್ ಹಾಲು ಹಾಗೂ 14,700 ಕೆ.ಜಿ. ಮೊಸರು ಮಾರಾಟ ಮಾಡಲಾಗುತ್ತಿದೆ. ಹಾಲು ಒಕ್ಕೂಟದ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಇತ್ತೀಚಿಗೆ ನಮ್ಮ ಸರ್ಕಾರವು ಹಾಲಿನ ದರವನ್ನು ಹೆಚ್ಚಿಸಿ ಡೇರಿ ಉದ್ಯಮಕ್ಕೆ ಪ್ರೋತ್ಸಾಹ ನೀಡಿದೆ.

• ನೀರಾವರಿ ಸೌಕರ್ಯ ಬಳಸಿಕೊಂಡು ಜಿಲ್ಲೆಯ ಗ್ರಾಮೀಣ ಪ್ರದೇಶದ ಕೃಷಿಕ ಕುಟುಂಬದವರು ವಿಶೇಷವಾಗಿ ಮಹಿಳೆಯರು ಹೈನುಗಾರಿಕೆಯಿಂದ ಆರ್ಥಿಕ ಸ್ವಾವಲಂಭನೆ ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೈನುಗಾರಿಕೆ ಬಲವರ್ಧನೆಗೆ ಉತ್ತೇಜನ ನೀಡಲಾಗುವುದು. ಹೆಚ್ಚಿನ ಜನರು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡು ಸ್ವಾವಲಂಭಿ ಬದುಕು ಸಾಗಿಸುವತ್ತ ವಿಜಯಪುರ ಜಿಲ್ಲೆಯಲ್ಲಿ ಕ್ಷೀರ ಕ್ರಾಂತಿಗೆ ಉತ್ತೇಜನ ನೀಡುವಲ್ಲಿ ನಾನು ಅತೀವ ಆಸಕ್ತಿ ಹೊಂದಿದ್ದೇನೆ.

• ಜಲ, ವೃಕ್ಷ, ಶಿಕ್ಷಣ ನನ್ನ ಅಭಿವೃದ್ಧಿ ಮಂತ್ರವಾಗಿದೆ. ಇದು ಈ ಭಾಗದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗಿದೆ. ಹಿಂದೆ ಈ ಕ್ಷೇತ್ರಗಳಿಗೆ ನಾನು ಹೆಚ್ಚು ಒತ್ತು ಕೊಟ್ಟು, ಕೆಲಸ ಮಾಡಿದ್ದರ ಫಲಿತಾಂಶಗಳು ಇಂದು ನಿಮ್ಮ ಕಣ್ಣ ಮುಂದೆ ಇವೆ. ಇವುಗಳನ್ನು ಇನ್ನೂ ವಿಸ್ತಾರಗೊಳಿಸಿ, ಜಿಲ್ಲೆಯ ಕಟ್ಟ ಕಡೆಯ ವ್ಯಕ್ತಿಗೂ ಈ ಎಲ್ಲ ಯೋಜನೆಗಳ ಸೌಲಭ್ಯಗಳು ದೊರೆಯಬೇಕು ಎಂಬುದು ನನ್ನ ಆಶಯ.

• ಒಟ್ಟಿನಲ್ಲಿ ನಾವು 21ನೇ ಶತಮಾನದ ಸವಾಲುಗಳಿಗೆ ತಕ್ಕಂತೆ ಸಮರ್ಥ ಕರ್ನಾಟಕವನ್ನು ಕಟ್ಟಬೇಕಾಗಿದೆ. ಇದು ಸಮರ್ಥ ಭಾರತಕ್ಕೆ ದಾರಿ ಮಾಡಿಕೊಡಲಿದೆ ಎನ್ನುವುದನ್ನು ಮರೆಯಬಾರದು.

• ವಂದೇ ಭಾರತ- ಒಂದೇ ಭಾರತ ಎನ್ನುವ ಅಖಂಡತೆಯ ಕರೆ, ಕೋಟ್ಯಾಂತರ ಕಂಠಗಳಿಂದ ಒಮ್ಮಲೆ ಮೊಳಗಲಿ ಹಾಗೂ ಆ ಕೂಗು ನವಭಾರತದ ನಿರ್ಮಾಣದ ಸುಭದ್ರ ಬುನಾದಿಗೆ ಅಡಿಗಲ್ಲಾಗಲಿ ಎಂದು ಹಾರೈಸುತ್ತೇನೆ.

ಎಲ್ಲರಿಗೂ ಮತ್ತೊಮ್ಮೆ ನಮಸ್ಕಾರಗಳು. ಜೈ ಹಿಂದ್! ಜೈ ಕರ್ನಾಟಕ!!

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.‌ ಬಿ. ಪಾಟೀಲ ಅವರು ನಗರದ ಗಾಂಧಿ ವೃತ್ತಕ್ಕೆ ಭೇಟಿ ನೀಡಿ ಉದ್ದೇಶಿತ ವಿಸ್ತೃತ ಹಾಗೂ ನವೀಕರಣಗೊಳಿಸಲಾಗುವ ಗಾಂಧಿವೃತ್ತದ ನೀಲನಕ್ಕೆ ವೀಕ್ಷಿಸಿ ಸ್ಥಳ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಡಿಸಿ. ಟಿ. ಬೂಬಾಲನ್, ಎಸ್ಪಿ ಎಚ್. ಡಿ. ಆನಂದಕುಮಾರ, ಜಿ. ಪಂ. ಸಿಇಓ ರಾಹುಲ ಶಿಂಧೆ, ಜಲವಾಹಿನಿ ಮ್ಯಾನೇಜಮಡಂಟ್ ಎಂಡಿ ಜಗದೀಶ ನಂದಿ, ಲೋಕೋಪಯೋಗಿ ಇಲಾಖೆ ಇಇ ರಾಜು ಮುಜುಂದಾರ, ಎಇಇ ಎಂ. ಎಂ. ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಬದ್ರುದ್ದೀನ್ ಸೌದಾಗರ ಮುಂತಾದವರು ಉಪಸ್ಥಿತರಿದ್ಸರು.