This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಎಂ.ಎಲ್.ಎ ಆಕಾಂಕ್ಷಿ ಪಿ.ಎಚ್.ಪೂಜಾರ ಹೊಸ ದಾಳ

ಎಂ.ಎಲ್.ಎ ಆಕಾಂಕ್ಷಿ ಪಿ.ಎಚ್.ಪೂಜಾರ ಹೊಸ ದಾಳ

ನಿಮ್ಮ ಸುದ್ದಿ ಬಾಗಲಕೋಟೆ

ಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಯಾ ಪಕ್ಷಗಳಲ್ಲಿ ಪೈಪೋಟಿ ಆರಂಭವಾಗಿದೆ.

ಈಗಾಗಲೇ ಕಾಂಗ್ರೆಸ್ ಈ ಮುಂಚೆ ಆಕಾಂಕ್ಷಿಗಳಿಗೆ ಅರ್ಜಿ ಹಾಕಲು ತಿಳಿಸಿದ್ದು ಬಾಗಲಕೋಟೆ ಮತಕ್ಷೇತ್ರದಿಂದ ಐದಾರು ಆಕಾಂಕ್ಷಿಗಳು ಅರ್ಜಿ ಗುಜರಾಯಿಸಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಆಂತಿಮಗೊಳ್ಳಲಿದೆ ಎಂಬ ಮಾತು ಕೇಳಿದೆ.

ಆದರೆ ಬಿಜೆಪಿಯಿಂದ ಬಾಗಲಕೋಟೆ ಮತಕ್ಷೇತ್ರಕ್ಕೆ ಬಿಜೆಪಿಯಿಂದ ಹಾಲಿ ಶಾಸಕ ವೀರಣ್ಣ ಚರಂತಿಮಠ ಆವರೇ ಮತ್ತೊಮ್ಮೆ ಸ್ಪರ್ಧೆಗಿಳಿಯುತ್ತಾರೆ ಎಂಬ ಮಾತು ಒಂದೆಡೆಯಾದರೆ, ಪರಿಷತ್ ಸದಸ್ಯ ಪಿ.ಎಚ್‌ಪೂಜಾರ ಬಹಿರಂಗವಾಗಿಯೇ ಬಿಜೆಪಿಯಿಂದ ತಾವು ಆಕಾಂಕ್ಷಿ ಎನ್ನುವುದನ್ನು ತೋರ್ಪಡಿಸಿ ವರಿಷ್ಠರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದ್ದು ಇದಕ್ಕೆ ಇತ್ತೀಚೆಗೆ ಮತಕ್ಷೇತ್ರದ ಹಿರೇಗುಳಬಾಳ ಗ್ರಾಮದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ವರಿಷ್ಠರು ಸೂಚಿಸಿದರೆ ಚುನಾವಣೆಗೆ ಸ್ಪರ್ದಿಸುವೆ ಎಂಬ ಮಾತು ಆಡಿದ್ದು ಬಿಜೆಪಿ ವಲಯದಲ್ಲಿ ಕುತೂಹಲ ಮೂಡಿಸುವಂತಾಗಿದೆ.

ಇದೀಗ ಪಿ.ಎಚ್‌‌.ಪೂಜಾರ್ ಆವರು ಮತ್ತೊಂದು ದಾಳ ಉರುಳಿಸಿದ್ದು ಕ್ಷೇತ್ರದ ಎಲ್ಲ ಪ್ರಜ್ಣಾವಂತ ಮತದಾರರ ಪರವಾಗಿ ಎಂದು ಪಾಂಪ್ಲೆಟ್ ಗಳನ್ನು ಪತ್ರಿಕೆಗಳ ಮೂಲಕ ಕ್ಷೇತ್ರದ ಮನೆ ಮನೆಗೂ ತಲುಪಿಸುವ ವ್ಯವಸ್ಥೆ ಮಾಡಿದ್ದಾರೆ.

ಅದರಲ್ಲಿ ಕ್ಷೇತ್ರದ ಶಾಸಕರು ಎಂಥವರಿರಬೇಕು? ಎಂಬ ಶೀರ್ಷಿಕೆಯೊಂದಿಗೆ ಆರಂಭಗೊಂಡು ಪಿ.ಎಚ್‌.ಪೂಜಾರ ಅವರೇ ಶಾಸಕರಾಗಬೇಕೆಂದು ಧ್ವನಿ ಎತ್ತೋಣ…… ಬದಲಾವಣೆಯತ್ತ ಹೆಜ್ಜೆ ಹಾಕೋಣ…. ಎಂದು ಮುಕ್ತಾಯೊಂಡಿದೆ. ಪತ್ರದ ವಿವರ ಈ ಕೆಳಗಿನಂತಿದೆ.

 

ಬಾಗಲಕೋಟೆ ಕ್ಷೇತ್ರದ ಶಾಸಕರು ಎಂಥವರಿರಬೇಕು ?

ಮತದಾರ ಬಾಂಧವರಲ್ಲೊಂದು ಮನವಿ,

ಈ ಭಾರತವೆಂಬ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಂವಿಧಾನದ ಪ್ರಕಾರ, ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡಿಕೊಳ್ಳುವ ಪರಮಾಧಿಕಾರ ಪ್ರಜೆಗಳಾದ ನಮ್ಮೆಲ್ಲರಿಗೂ ಇದೆ. ಹಾಗಾಗಿ ಇಲ್ಲಿ ಪ್ರಜೆಗಳೇ ದೇವರು, ವರ ನೀಡುವ ಅಧಿಕಾರ ದೇವರಿಗಿರುವಂತೆ ಸಂವಿಧಾನ ನಮಗೆ ಮತವೆಂಬ ಆಧಿಕಾರ ನೀಡಿದೆ. ಸಂವಿಧಾನದ ನಿಯಮದಂತೆ ಪ್ರತಿ ಐದು ವರ್ಷಕ್ಕೊಮ್ಮೆ ಚುನಾವಣೆಗಳು ಬರುತ್ತವೆ ಆ ಮೂಲಕ ಪ್ರತಿನಿಧಿಗಳನ್ನು (ಶಾಸಕರನ್ನು) ನಾವು ಆಯ್ಕೆಮಾಡುತ್ತೇವೆ. ಅಂದರೆ ನಮ್ಮ ಮತದಾನವೆಂಬ ವರವನ್ನು ಯೋಗ್ಯರಿಗೆ ವರದಾನ ಮಾಡುವ ಪರಮಾಧಿಕಾರ ನಮಗಿದೆ.

ಈ ಮೂಲಕ ಪ್ರಜಾ ಪ್ರಭುತ್ವವನ್ನು ಯಶಸ್ವಿಗೊಳಿಸಬೇಕಾಗಿದೆ. ನಾವು ಜಾತಿಗೋ, ಯಾವುದೋ ಆಮಿಷಕ್ಕೋ, ಭಯಕ್ಕೋ ಒಳಗಾಗಿ ಎಂಥವರನ್ನೂ ಆಯ್ಕೆ ಮಾಡಿಕೊಂಡು, ಅಭದ್ರತೆಯಿಂದ ಪರಿತಪಿಸುವಂತಾದರೆ, ಮತ್ತೆ 5 ವರ್ಷ ಅಂತ ಆಯ್ಕೆಯ ಅವಕಾಶಕ್ಕಾಗಿ ಕಾಯಬೇಕಲ್ಲವೆ?

ಅದಕ್ಕಾಗಿ ನಾವು ಮತದಾರರು ಪ್ರಜ್ಞಾವಂತರಾಗಬೇಕು ಅಂದರೆ, ನಮ್ಮನ್ನು ಸಮಾನ ಭಾವದಿಂದ ಗುರುತಿಸುವ, ಸೌಜನ್ಯತೆಯಿಂದ ಮಾತನಾಡಿಸಿ, ಅಭಿವೃದ್ಧಿ ಮೂಲಕ ಓಲೈಸುವ, ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ನಮಗೂ ಭದ್ರತೆ ದೊರೆತು ಮತದಾರರು ನೆಮ್ಮದಿಯ ನಿಟ್ಟಿಸಿರು ಬಿಡುವಂತಾಗುತ್ತದೆ. ಈ ನಿಟ್ಟಿನಲ್ಲಿ ನಾವು ನಮ್ಮ ಈ ಬಾಗಲಕೋಟೆ ಕ್ಷೇತ್ರಕ್ಕೆ ಎಂಥವರನ್ನು ಆಯ್ಕೆ ಮಾಡೋಣ ಈ ಕುರಿತು ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳಲು ಈ ಒಂದು ಪ್ರಸ್ತಾವಣೆ ನಿಮ್ಮ ಮುಂದೆ……

ಪ್ರಸಕ್ತ ಬಾಗಲಕೋಟೆ ಕ್ಷೇತ್ರ ಮುಳುಗಡೆಯಿಂದ ಪುನರ್ವಸತಿ ನಿರೀಕ್ಷಿಸುತ್ತಿರುವ ಸಂತ್ರಸ್ಥರ ಅನೇಕ ಸಮಸ್ಯೆಗಳನ್ನು ಹೊತ್ತ ಕ್ಷೇತ್ರ. ಈ ಕ್ಷೇತ್ರ ಇದೂವರೆಗೂ ಬಹು ಪಕ್ಷಗಳ ಶಾಸಕರುಗಳನ್ನು ಕಂಡಿದೆ. ಇದರಲ್ಲಿ ಕೆಲವರು ಅವಕಾಶವಾದಿಗಳಾದರೆ, ಕೆಲ ಶಾಸಕರು ಸ್ವಾರ್ಥಿಗಳಾದರು. ಇನ್ನು ಪಕ್ಷ ಬೆಂಬಲದಿಂದ ಬಂದವರು, ಉಳ್ಳವರಿಗೆ ಮಾತ್ರ ಇದರಲ್ಲಿ ಕೆಲವರು ಲಭ್ಯವಾಗಿ ಜನ ಸಾಮಾನ್ಯರಿಗೆ, ಗಗನ ಕುಸುಮವಾಗಿ, ಜನಾಂಗೀಯ ದ್ವೇಷ ಬಿತ್ತಿದರು. ಇದೆಲ್ಲಾ ತಮಗೆ ತಿಳಿದ ವಿಷಯವಾಗಿದೆ.

ನಾವು ಆಯ್ಕೆ ಮಾಡುವ ಶಾಸಕರು ಜಾತಿ ಎಣಿಸದ ಕ್ಷೇತ್ರದ ಕೊನೆಯ ಪ್ರಜೆಗೂ ಸುಲಭವಾಗಿ ಲಭ್ಯವಾಗಿ ಆತನ ಸಮಸ್ಯೆ ಅಹವಾಲನ್ನು ಸೌಜನ್ಯದಿಂದ ಕೇಳುವ ಹೃದಯವಂತರಾಗಿರಬೇಕು.

ಈ ಕ್ಷೇತ್ರದ ದೀನ ದಲಿತರ, ಹಿಂದುಳಿದವರ, ಮಹಿಳೆಯರ, ರೈತರ, ಕಾರ್ಮಿಕರ, ನೊಂದವರ, ಮುಖ್ಯವಾಗಿ ಮುಳುಗಡೆ ಸಂತ್ರಸ್ಥರ ಧ್ವನಿಯಾಗಬೇಕು.

ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಯ ಮನೆ ಬಾಗಿಲಿಗೆ ತಲುಪಿಸುವವರು ಬೇಕು. ಜನಮನದ ನಾಡಿ ಮಿಡಿತಕ್ಕೆ ತ್ವರಿತವಾಗಿ ಸ್ಪಂದಿಸುವ ಜನ ನಾಯಕರು ಬೇಕು.

ಮೇಲಿನ ಈ ಎಲ್ಲ ಪ್ರಸ್ತಾವಣೆಗಳಿಗೆ, ಜನಪರ ಕಾಳಜಿಯ ನಿಷ್ಠಾವಂತ ವ್ಯಕ್ತಿ, ಬಡವರ, ನೊಂದವರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಧ್ವನಿಯಾಗಿರುವ ಶ್ರೀ ಪಿ. ಹೆಚ್. ಪೂಜಾರ ಅವರು ಮಾತ್ರವೇ ಯೋಗ್ಯರು, ಅನ್ಯರ ಬಗ್ಗೆ ಹೇಳುವದೇ ಬೇಡ | ಶ್ರೀ ಪಿ. ಹೆಚ್, ಪೂಜಾರವರ ಬಗ್ಗೆ ಕೇಳುವುದೇ ಬೇಡ. ಇವರು ಈ ಹಿಂದೆ ಎರಡು ಸಲ ಶಾಸಕರಾಗಿ ಜನಪರ ಕೆಲಸ ಮಾಡಿದ್ದಾರೆ. ನೇಕಾರರು ಮತ್ತು ರೈತರ ಬೇಡಿಕೆಗಳ ಈಡೇರಿಕೆಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಬಾಗಲಕೋಟೆ ನಗರದಲ್ಲಿ ಬಡವರಿಗೆ 3500 ಕ್ಕಿಂತ ಹೆಚ್ಚು ಮನೆಗಳನ್ನು ನಿರ್ಮಿಸಿ ದಾಖಲೆ ಮಾಡಿದ್ದು, ಸಂತ್ರಸ್ಥರ ಉಳಿವಿಗಾಗಿಗಾಗಿ 2003 ರಲ್ಲಿ ನದಿ ದಂಡೆಯ ಮೇಲೆ ಉಪವಾಸ ಕುಳಿತು, ನೀರು ನಿಲ್ಲಿಸುವ ಸರ್ಕಾರದ ತೀರ್ಮಾನವನ್ನು ಒಂದು ವರ್ಷ ಮುಂದೂಡಿ, ಸಂತ್ರಸ್ಥರನ್ನು ಸಂಕಷ್ಟದಿಂದ ಪಾರು ಮಾಡಿದ್ದನ್ನು ನೆನಪಿಸಿಕೊಳ್ಳೋಣ, ಸರಕಾರದಿಂದ 638 ಕೋಟಿ ರೂಪಾಯಿಗಳ ಪ್ಯಾಕೇಜ್ ಘೋಷಣೆ ಮಾಡಲು ಕಾರಣೀಭೂತರಾದದ್ದನ್ನು ನಾವಿಲ್ಲಿ ಸರಿಸಬೇಕಾಗಿದೆ. ಜನಸಂಘದ ಕಾಲದ, ಬಿಜೆಪಿ ಹುಟ್ಟಿದಾಗಿಂದಲೂ ಪಕ್ಷವನ್ನು ವಿಜಯಪುರ ಮತ್ತು ಬಾಗಲಕೋಟೆ ಅವಳ ಜಿಲ್ಲೆಗಳಲ್ಲಿ ಕಟ್ಟಿ ಬೆಳಿಸಿದವರಲ್ಲಿ ಇವರೂ ಒಬ್ಬರು, ಇವರನ್ನು ಮರೆಯಲು ಸಾಧ್ಯವೇ ಇಲ್ಲ. ಇವರು ಶಾಸಕರಿದ್ದಾಗ ಕುತಂತ್ರದಿಂದ ಬಿ.ಜೆ.ಪಿ ಟಿಕೆಟ್ ತಪ್ಪಿಸಿದ್ದು, ನಮಗೆಲ್ಲ ತಿಳಿದ ಸಂಗತಿ. ಹಾಗಾಗಿ ನಮ್ಮ ಮುಂದಿನ ಆಯ್ಕೆ ಶ್ರೀ ಪಿ ಹೆಚ್, ಪೂಜಾರ ಅವರು ಮಾತ್ರ: ಶ್ರೀ ಪಿ ಹೆಚ್, ಪೂಜಾರವರೇ, 2013 ರ ಬಾಗಲಕೋಟೆಯ ಶಾಸಕರಾಗಬೇಕೆಂದು, ಕ್ಷೇತ್ರದೆಲ್ಲೆಡೆ ನಿರ್ಭಿತಿಯಿಂದ ಧ್ವನಿ ಎತ್ತೋಣ. ವರ ನೀಡುವ ಅವಕಾಶ ನಿಮಗಿದೆ. ಪ್ರಜ್ಞಾವಂತರಾಗೋಣ ಬದಲಾವಣೆಯತ್ತ ಹೆಜ್ಜೆ ಇಡೋಣ ಎಂದು ಬರೆಯಲಾಗಿದೆ.

";