ನಿಮ್ಮ ಸುದ್ದಿ ಬಾಗಲಕೋಟೆಬಾಗಲಕೋಟೆ ಮತಕ್ಷೇತ್ರದ ಶಾಸಕ, ಬಿಜೆಪಿ ಅಭ್ಯರ್ಥಿ ಡಾ.ವೀರಣ್ಣ ಸಿ. ಚರಂತಿಮಠ ಅವರು ಅಪಾರ ಸಂಖ್ಯೆಯ ಬೆಂಬಲಿಗ ಕಾರ್ಯಕರ್ತರೊಂದಿಗೆ ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಶಕ್ತಿ ಪ್ರದರ್ಶನ ಮಾಡಿದರು. ನಿರೀಕ್ಷೆಗೂ ಮೀರಿ ಜನರು ಸೇರಿದ್ದರಿಂದ ನಗರವು ಸಂಪೂರ್ಣ ಕೇಸರಿಮಯವಾಗಿತ್ತು. ಎದುರಾಳಿಗಳಿಗೆ ನಡುಕ ಹುಟ್ಟುವಂತ್ತಾಗಿದ್ದು, ಕಾರ್ಯಕರ್ತರ ಹುಮ್ಮಸ್ಸು ಇಮ್ಮಡಿಗೊಳಿಸಿದೆ.
ಬೆಳಿಗ್ಗೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆವರಣದಲ್ಲಿರುವ ಶ್ರೀ ಕಣವಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ವಿಶೇಷವಾದ ಪೂಜೆ ಸಲ್ಲಿಸಿದ ಶಾಸಕ ವೀರಣ್ಣ ಚರಂತಿಮಠ ಅವರು, ತೆರೆದ ವಾಹನ ಏರುತ್ತಿದ್ದಂತೆ ಅಪಾರ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು ಕೇಕೇ ಹಾಕಿ ಸಂಭ್ರಮಿಸಿದರು. ಬಾಗಲಕೋಟೆ ನಗರವು ಇಂದು ಸಂಪೂರ್ಣ ಕೇಸರಿಮಯವಾಗಿತ್ತು.
ಕರಡಿ ಮಜಲು, ಝಂಝ ಪಥಕ್, ಡೊಳ್ಳು ವಾದನವು ಮೆರವಣಿಗೆಗೆ ರಂಗು ನೀಡಿತು. ಬೃಹತ್ ಮೆರವಣಿಗೆಯ ಮಾರ್ಗಮಧ್ಯದಲ್ಲಿ ಮತದಾರರು ಹೂವಿನಹಾರ, ಆರತಿ ಬೆಳಗಿ ಆಶೀರ್ವಸಿದರು. ಇನ್ನೂ ಅಡತ ಬಜಾರ ರಸ್ತೆಯಲ್ಲಿ ಮೆರವಣಿಗೆ ಸಾಗುತ್ತಿದ್ದಾಗ ವ್ಯಾಪಾರಸ್ಥರು ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೆ ಶಾಲು ಹೊಂದಿಸಿ ಸನ್ಮಾನಿಸಿದರು. ಇನ್ನೂ ಕೆಲವರಂತೂ ತೆರೆದ ವಾಹನದ ಮೇಲೆ ಹೂವಿನ ಮಳೆಯನ್ನು ಹರಿಸಿದರು. ಅಲ್ಲಲ್ಲಿ ಪಟಾಕಿ ಸಿಡಿಸಿ ಮೆರವಣಿಗೆ ಮತ್ತಷ್ಟು ರಂಗು ಪಡೆದುಕೊಂಡಿತು. ರಸ್ತೆಯ ಇಕ್ಕಲೆಗಳಲ್ಲಿ ಹಿರಿಯರು, ಮಹಿಳೆಯರು, ಮಕ್ಕಳು ಶಾಸಕ ವೀರಣ್ಣ ಚರಂತಿಮಠರತ್ತ ವಿಕ್ಟರಿ ಸಿಂಬಲ್ ತೋರಿಸಿ ನಗೆಬೀರಿದರು.
ಮೆರವಣಿಗೆಯಲ್ಲಿ ಸಚಿವ ಗೋವಿಂದ ಕಾರಜೋಳ, ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ, ಲೋಕಸಭಾ ಸದಸ್ಯ ಪಿ.ಸಿ. ಗದ್ದಿಗೌಡರ, ಬುಡಾ ಅಧ್ಯಕ್ಷ ಬಸವಲಿಂಗಪ್ಪ ನಾವಲಗಿ, ನಗರಸಭೆ ಅಧ್ಯಕ್ಷೆ ಜ್ಯೋತಿ ಭಜಂತ್ರಿ, ಉಪಾಧ್ಯಕ್ಷ ಬಸವರಾಜ ಅವರಾದಿ, ಶ್ರೀಮತಿ ರಾಜೇಶ್ವರಿ ಚರಂತಿಮಠ, ಡಾ.ನವೀನ ಚರಂತಿಮಠ, ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್. ಪಾಟೀಲ, ಜಯಂತ ಕುರಂದವಾಡ, ಮುರಿಗೆಪ್ಪ ನಾರಾ, ಗುರುಬಸವ ಸೂಳಿಭಾವಿ, ಮಹಾಂತೇಶ ಶೆಟ್ಟರ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರಾಜು ನಾಯ್ಕರ, ರಾಜಶೇಖರ ಮುದೇನೂರ, ಸಿ.ವಿ. ಕೋಟಿ, ಶಿವಾನಂದ ಟವಳಿ, ಅಶೋಕ ಲಿಂಬಾವಳಿ, ರಾಜು ರೇವಣಕರ್, ಯಲ್ಲಪ್ಪ ಬೆಂಡಿಗೇರಿ, ಭಾಗ್ಯಶ್ರೀ ಹಂಡಿ, ನಗರ ಮಂಡಳ ಅಧ್ಯಕ್ಷ ಸದಾನಂದ ನಾರಾ, ಗ್ರಾಮೀಣ ಮಂಡಳ ಅಧ್ಯಕ್ಷ ಸುರೇಶ ಕೊಣ್ಣೂರ, ಪ್ರಧಾನ ಕಾರ್ಯದರ್ಶಿಗಳಾದ ಮಲ್ಲೇಶ ವಿಜಾಪೂರ, ಕಲ್ಲಪ್ಪ ಭಗವತಿ ಪಕ್ಷದ ವಿವಿಧ ಸೆಲ್‌ಗಳ ಪದಾಧಿಕಾರಿಗಳು ಸೇರಿದಂತೆ ಅನೇಕರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಗಮನ ಸೆಳೆದ ಬೃಹತ್ ಸೇಬು ಹಣ್ಣಿನ ಹಾರ
ಬಾಗಲಕೋಟೆ: ಬಾಗಲಕೋಟೆ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ಶಕ್ತಿ ಪ್ರದರ್ಶನದ ಹಿನ್ನೆಲೆಯಲ್ಲಿ ಇಂದು ನಡೆದ ರ‍್ಯಾಲಿಯಲ್ಲಿ ಬೃಹತ್ ಸೇಬಿನ ಹಾರವು ಗಮನ ಸೆಳೆಯಿತು.
ಕಣವಿ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊAಡು ಬೀಳೂರು ಗುರುಬಸವ ಸ್ವಾಮೀಜಿ ದೇವಸ್ಥಾನ, ಪಶುಆಸ್ಪತ್ರೆ, ಟೀಕಿನಮಠ, ಅಡತ ಬಜಾರ ರಸ್ತೆ, ಪೊಲೀಸ್ ಚೌಕ್, ಟಾಂಗಾ ಸ್ಟಾö್ಯಂಡ್, ವಲ್ಲಭಬಾಯಿ ಚೌಕ್, ಎಂಜಿ ರಸ್ತೆ, ಬಸವೇಶ್ವರ ಸರ್ಕಲ್‌ಗೆ ಆಗಮಿಸುತ್ತಿದ್ದಂತೆ ತೆರೆದ ವಾಹನದಲ್ಲಿ ಆಗಮಿಸಿದ ಶಾಸಕ ಡಾ.ವೀರಣ್ಣ ಚರಂತಿಮಠ, ಸಚಿವ ಗೋವಿಂದ ಕಾರಜೋಳ, ಸಂಸದ ಪಿ.ಸಿ. ಗದ್ದಿಗೌಡರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರ ಮೇಲೆ ಜೆಸಿಬಿ ಬಕೇಟ್ ಮೇಲೆ ನಿಂತು ಕಾರ್ಯಕರ್ತರು ಹೂವಿನ ಮಳೆ ಹರಿಸಿದರು. ನಂತರ ಕ್ರೇನ್ ಮೂಲಕ ಬೃಹತ್ ಸೇಬು ಹಣ್ಣಿನ ಹಾರ ಹಾಗೂ ಹೂವು-ತುಳಸಿ ಮಿಶ್ರಿತ ಹಾರವನ್ನು ಹಾಕಿ ಸಂಭ್ರಮಪಟ್ಟರು.
ದೇಶದ ಸುರಕ್ಷತೆ, ಅಭಿವೃದ್ದಿಗೆ ಬಿಜೆಪಿ ಬೆಂಬಲಿಸಿ
* ಬಿಜೆಪಿ ರ‍್ಯಾಲಿಯಲ್ಲಿ ಶಾಸಕ ಯತ್ನಾಳ ಹೇಳಿಕೆ * ವೀರಣ್ಣ ಚರಂತಿಮಠರ ಗೆಲುವು ನಿಶ್ಚಿತ
ಬಾಗಲಕೋಟೆ: ದೇಶದ ಸಮಗ್ರ ವಿಕಾಸಕ್ಕಾಗಿ, ದೇಶದ ಸುರಕ್ಷತೆ, ಅಭಿವೃದ್ಧಿಗಾಗಿ, ಹಿಂದುತ್ವಕ್ಕಾಗಿ ಬಿಜೆಪಿಯನ್ನು ಪ್ರತಿಯೊಬ್ಬರು ಬೆಂಬಲಿಸಬೇಕು ಎಂದು ವಿಜಯಪುರ ಶಾಸಕ ಬಸವನಗೌಡ ಪಾಟೀಲ ಯತ್ನಾಳ ಅವರು ಮತದಾರರಲ್ಲಿ ಮನವಿ ಮಾಡಿದರು.
ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಗುರುವಾರ ಬೃಹತ್ ಸಂಖ್ಯೆಯ ಕಾರ್ಯಕರ್ತರೊಂದಿಗೆ ಶಾಸಕ ಡಾ.ವೀರಣ್ಣ ಸಿ. ಚರಂತಿಮಠ ಅವರು ಬಾಗಲಕೋಟೆ ನಗರದಲ್ಲಿ ಆಯೋಜಿಸಿದ್ದ ಬೃಹತ್ ಶಕ್ತಿ ಪ್ರದರ್ಶನದ ರ‍್ಯಾಲಿಯಲ್ಲಿ ಅವರು ಮಾತನಾಡಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವ ದೇಶಕ್ಕೆ ಸಿಕ್ಕಿದೆ. ದೇಶವು ತೀವ್ರಗತಿಯನ್ನು ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾಗುತ್ತಿದ್ದು, ಪ್ರಪಂಚದಲ್ಲಿ ಮುಂಚೂಣಿಯಲ್ಲಿ ಗುರುತಿಸಿ ಕೊಂಡಿದೆ. ಸುರಕ್ಷತೆ ದೃಷ್ಠಿಯಿಂದ, ಅಭಿವೃದ್ಧಿ ದೃಷ್ಠಿಯಿಂದ ಬಿಜೆಪಿಗೆ ಮತದಾನ ಮಾಡಬೇಕು ಎಂದ ಅವರು, ಬಾಗಲಕೋಟೆ ಕ್ಷೇತ್ರವು ಸಾಕಷ್ಟು ಅಭಿವೃದ್ಧಿಯಾಗಿದೆ. ಈ ಚುನಾವಣೆಯಲ್ಲಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರು ೩೫ ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.
ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರವು ಉತ್ತಮವಾದ ಆಡಳಿತವನ್ನು ನೀಡುತ್ತಾ ಜನರ ಪರವಾಗಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿದೆ. ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ತರಬೇಕು ಎಂದು ರಾಜ್ಯದ ಮತದಾರರ ಆಲೋಚನೆಯಾಗಿದೆ ಎಂದು ಹೇಳಿದರು.
ಶಾಸಕ ಡಾ.ವೀರಣ್ಣ ಚರಂತಿಮಠ ಅವರು ಬಾಗಲಕೋಟೆ ಮತಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ಬಾಗಲಕೋಟೆ ನಗರವನ್ನು ಚಂಡಿಗಡ ಮಾದರಿಯಲ್ಲಿ ನಿರ್ಮಾಣ ಮಾಡುವ ಕಾಯಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ೬ಸಾವಿರ ಕೋಟಿ ಅನುದಾನವನ್ನು ರಾಜ್ಯ ಸರ್ಕಾರದಿಂದ ತಂದು ಅಭಿವೃದ್ಧಿ ಕಾರ್ಯವನ್ನು ಮಾಡಿದ್ದಾರೆ. ಇಷ್ಟೊಂದು ದೊಡ್ಡ ಮೊತ್ತದ ಅನುದಾನ ತಂದ ಶಾಸಕರಲ್ಲಿ ವೀರಣ್ಣ ಚರಂತಿಮಠ ಅವರು ಮೊದಲಸಾಲಿನಲ್ಲಿ ನಿಲ್ಲುತ್ತಾರೆ. ಚುನಾವಣೆಯಲ್ಲಿ ಅವರನ್ನು ಗೆಲ್ಲಿಸಬೇಕು ಬಾಗಲಕೋಟೆ ಅಭಿವೃದ್ದಿಗೆ ಮುನ್ನುಡಿ ಬರೆಯಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಲೋಕಸಭಾ ಸದಸ್ಯ ಪಿ.ಸಿ.ಗದ್ದಿಗೌಡರ ಮಾತನಾಡಿ, ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಜನರು ಸೇರಿ ರ‍್ಯಾಲಿ ಮಾಡಿದ್ದು, ಚುನಾವಣೆಯಲ್ಲಿ ಗೆಲುವಿನ ಮುನ್ಸೂಚನೆ ನೀಡಿದ್ದೀರಿ. ಅಭಿವೃದ್ಧಿ ಪರವಾಗಿ ಕೆಲಸ ಮಾಡುವ ವೀರಣ್ಣ ಚರಂತಿಮಠ ಅವರ ಗೆಲವು ನಿಶ್ಚಿತವಾಗಿದೆ ಎಂದರು.
ಇಂದು ಆಯೋಜಿಸಿದ್ದ ಶಕ್ತಿ ಪ್ರದರ್ಶನ ರ‍್ಯಾಲಿಯಲ್ಲಿ ನಿರೀಕ್ಷೆಗೂ ಮೀರಿ ಕಾರ್ಯಕರ್ತರು, ಬೆಂಬಲಿಗರು, ಹಿತೈಷಿಗಳು ಪಾಲ್ಗೊಂಡಿದ್ದು, ನಮ್ಮ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಚುನಾವಣೆಯಲ್ಲಿ ಗೆಲುವು ಶತಸಿದ್ದ
-ಡಾ.ವೀರಣ್ಣ ಸಿ. ಚರಂತಿಮಠ, ಬಿಜೆಪಿ ಅಭ್ಯರ್ಥಿ