ನವದೆಹಲಿ: 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಬೇಕಾದಷ್ಟು ಸ್ಥಾನಗಳನ್ನು ಗೆಲ್ಲದೇ ಇರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ನೈತಿಕ ಹೊಣೆ ಹೊರಬೇಕು ಎಂದು ಮಾಹಿತಿ ತಿಳಿದು ಬಂದಿದೆ.
ಪ್ರಧಾನಿ ಹುದ್ದೆಯಿಂದ ತಾವೇ ಸ್ವಯಂಪ್ರೇರಿತರಾಗಿ ದೂರ ಸರಿಯಬೇಕು ಎಂದು ಬಿಜೆಪಿಯ ಹಿರಿಯ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಹೇಳಿದ್ದು,ತಮ್ಮೀ ಅನಿಸಿಕೆಯನ್ನು ಟ್ವೀಟ್ ಮಾಡಿರುವ ಅವರು, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಪಕ್ಷ ತನ್ನ ಸ್ವಂತ ಬಲದ ಮೇಲೆ ಅಧಿಕಾರದಲ್ಲಿ ಬರುವುದಕ್ಕೆ ಸಾಧ್ಯವಾಗಿಲ್ಲ. ಬಹುಮತಕ್ಕೆ 272 ಸ್ಥಾನಗಳು ಬೇಕು.
ಈ ಟ್ವೀಟ್ ಗೆ ಹಲವಾರು ಮಂದಿ ಟ್ವೀಟರ್ ನ ಕಮೆಂಟ್ ಬಾಕ್ಸ್ ನಲ್ಲಿ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ. ಆದರೆ, ಅವರಲ್ಲಿ ಕೆಲವರಿಗೆ ಉತ್ತರ ನೀಡಿರುವ ಸುಬ್ರಹ್ಮಣ್ಯನ್ ಸ್ವಾಮಿ, ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಕಮೆಂಟ್ ಹಾಕಿದವರಲ್ಲಿ ರಮ್ಯಾ ವಸಿಷ್ಠ ಎಂಬುವರೂ ಒಬ್ಬರು. ಅವರು ಸುಬ್ರಹ್ಮಣ್ಯನ್ ಸ್ವಾಮಿಯವರ ಟ್ವೀಟ್ ಗೆ ಉತ್ತರಿಸಿ, ಕಾಂಗ್ರೆಸ್ ಪಕ್ಷದ ಚುಕ್ಕಾಣಿಯನ್ನು ಆ ಪಕ್ಷದ ಯುವ ನಾಯಕರೊಬ್ಬರು ಕೈಗೆತ್ತಿಕೊಂಡಾಗಿನಿಂದ ಆ ಪಕ್ಷ ಅನೇಕ ಚುನಾವಣೆಗಳಲ್ಲಿ ತೆವಳುತ್ತಲೇ ಸಾಗುತ್ತಿದೆ. ಆದರೆ, ನೀವು ಅದನ್ನು ಹೇಳದೆ, ಸ್ವಪಕ್ಷೀಯವರ ವಿರುದ್ಧವೇ ಟೀಕೆ ಮಾಡುತ್ತಿದ್ದೀರಿ.
ಎನ್ ಡಿಎಗೆ ಈ ಬಾರಿ ಸ್ಪಷ್ಟ ಬಹುಮತ ಬಂದಿರುವುದು ನಿಮಗೆ ಗೊತ್ತಿಲ್ಲವೇ? ಆತ್ಮಾಭಿಮಾನ ಇರುವ ಯಾವುದೇ ಹಿಂದು ಪ್ರಧಾನಿ ಮೋದಿಯವರನ್ನು ಬೆಂಬಲಿಸುತ್ತಾರೆ. ಹಾಗೆಯೇ, ಆತ್ಮಾಭಿಮಾನ ಇರುವ ಯಾವುದೇ ಕಾಂಗ್ರೆಸ್ಸಿಗ ನಾಯಕತ್ವ ಬದಲಾವಣೆಗೆ ಆಗ್ರಹಿಸಲೇಬೇಕಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿಯು 240ರ ಸನಿಹಕ್ಕೆ ಮಾತ್ರ ಬಂದಿದೆ. ಹಾಗಾಗಿ, ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಯಿಂದ ದೂರ ಸರಿಯಬೇಕು. ಯಾವುದೇ ಒಬ್ಬ ಧೀಮಂತ ನಾಯಕ ಇಂಥ ಸಂದರ್ಭದಲ್ಲಿ ಸ್ವಯಂಪ್ರೇರಿತರಾಗಿ ಹಿಂದೆ ಸರಿಯುವುದೇ ಲೇಸು. ಪಕ್ಷವೇ ಅವರನ್ನು ಅಧಿಕಾರದಿಂದ ಹೊರಹಾಕುವವರೆಗೆ ಕಾಯಬಾರದು ಎಂದು ಹೇಳಿದ್ದಾರೆ.