This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ಸ್ಮಾಲ್ ಫೈನಾನ್ಸ್ ಸ್ಕೀಮ್​ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ:ಇಪಿಎಫ್​ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ

ಸ್ಮಾಲ್ ಫೈನಾನ್ಸ್ ಸ್ಕೀಮ್​ಗಳಿಗಿಂತಲೂ ಪಿಎಫ್ ಠೇವಣಿಗೆ ಹೆಚ್ಚು ಬಡ್ಡಿ:ಇಪಿಎಫ್​ಒ ಬಡ್ಡಿದರ ಶೇ. 8.25ಕ್ಕೆ ಏರಿಕೆ

ನವದೆಹಲಿ: ಇಪಿಎಫ್​ಒಗೆ ಬಡ್ಡಿದರ ಇನ್ನಷ್ಟು ಹೆಚ್ಚಿಸಲಾಗಿದ್ದು, ಹಿಂದಿನ ವರ್ಷದಲ್ಲಿ, ಅಂದರೆ 2022-23ರ ಸಾಲಿನ ವರ್ಷಕ್ಕೆ ಇಪಿಎಫ್ ಬಡ್ಡಿದರ ಶೇ. 8.15ಕ್ಕೆ ನಿಗದಿ ಮಾಡಲಾಗಿದೆ. 2023-24ಕ್ಕೆ ನಿಗದಿ ಮಾಡಲಾಗಿರುವ ಶೇ. 8.25 ಬಡ್ಡಿದರ ಕಳೆದ ಮೂರು ವರ್ಷದಲ್ಲೇ ಗರಿಷ್ಠ ದರವಾಗಿದೆ.ನಿನ್ನೆ ಶನಿವಾರ ಫೆ. 10ರಂದು ನಡೆದ ಇಪಿಎಫ್​ಒನ ಕೇಂದ್ರೀಯ ಟ್ರಸ್ಟೀ ಮಂಡಳಿಯ (ಸಿಬಿಟಿ) 235ನೇ ಸಭೆಯಲ್ಲಿ ಬಡ್ಡಿದರ ಪರಿಷ್ಕರಿಸುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿಕೆ ನೀಡಿದೆ.

ಕೇಂದ್ರ ಕಾನೂನು ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಈ ಸಭೆಯ ಅಧ್ಯಕ್ಷತೆ ವಹಿಸಿದ್ದು, ಸದ್ಯ ಇಪಿಎಫ್​ಒ ನಿಗದಿ ಮಾಡಲಾಗಿರುವ ಈ ದರಕ್ಕೆ ಕೇಂದ್ರ ಹಣಕಾಸು ಸಚಿವಾಲಯದಿಂದ ಅನುಮೋದನೆ ದೊರೆತ ಬಳಿಕ ಸರ್ಕಾರೀ ಗೆಜೆಟ್​ನಲ್ಲಿ ಅಧಿಕೃತವಾಗಿ ನೋಟಿಫೈ ಮಾಡಲಾಗುತ್ತದೆ. ಅದಾದ ಬಳಿಕ ಇಪಿಎಫ್ ಸದಸ್ಯರ ಖಾತೆಗಳಿಗೆ ಬಡ್ಡಿಹಣ ಜಮೆಯಾಗುತ್ತದೆ. ಯಾವಾಗ ಬೇಕಾದರೂ ಹಣ ಜಮೆ ಆಗಬಹುದು.

ಸದ್ಯ ಆರು ಕೋಟಿಗೂ ಹೆಚ್ಚು ಇಪಿಎಫ್ ಖಾತೆಗಳಿದ್ದು, ಕಾರ್ಮಿಕ ಸಚಿವಾಲಯ ನೀಡಿರುವ ಹೇಳಿಕೆ ಪ್ರಕಾರ 2023-24ರ ವರ್ಷ ಸಾಲಿನಲ್ಲಿ ಇಪಿಎಫ್​ನ ಠೇವಣಿಗಳ ಮೊತ್ತ 13 ಲಕ್ಷ ಕೋಟಿ ರೂ ಇದೆ. ಸದಸ್ಯರ ಈ ಠೇವಣಿಗಳಿಗೆ ಒಟ್ಟು 1,07,000 ರೂ ಹಣವನ್ನು ಇಪಿಎಫ್​ಒ ಸಂದಾಯ ಮಾಡಲು ನಿರ್ಧರಿಸಲಾಗಿದೆ. 2022-23ರ ಹಣಕಾಸು ವರ್ಷದಲ್ಲಿ ಇಪಿಎಫ್ ಠೇವಣಿಗಳ ಮೊತ್ತ 11.03 ಲಕ್ಷ ಕೋಟಿ ರೂ ಇತ್ತು. ಅದಕ್ಕೆ 91,151.66 ಕೋಟಿ ರೂ ಬಡ್ಡಿಹಣ ಹಾಕಲಾಗಿತ್ತು. 2023-24ರ ಸಾಲಿನಲ್ಲಿ ಹಾಕಲಾಗಿರುವ ಬಡ್ಡಿ ಹಣ ಇದುವರೆಗಿನ ಗರಿಷ್ಠ ಮೊತ್ತ ಎನಿಸಿದೆ.

";