ಬಾಗಲಕೋಟೆ: ರಾಜ್ಯ ಸರಕಾರದ ಆಡಳಿತದ ಎರಡೂವರೆ ವರ್ಷ ಮುಗಿದಿದೆ. ಇಲ್ಲಿನವರೆಗೆ ಆಗಿದ್ದೇನು? ಮುಂದೆ ಆಗಬೇಕಾದುದೇನು ಎಂಬ ರೋಡ್‍ಮ್ಯಾಪ್ ಈ ಸರಕಾರಕ್ಕೆ ಇಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಟೀಕಿಸಿದ್ದಾರೆ.
ಇಂದು ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಒಬ್ಬರದು ಎರಡೂವರೆ ವರ್ಷ ಮುಖ್ಯಮಂತ್ರಿ ಸ್ಥಾನ ಮುಗಿದಿದೆ; ಈಗ ಅಧಿಕಾರ ಹಸ್ತಾಂತರ ಮಾಡಿ ನಮಗೆ ಕೊಡಿ ಎಂಬುದೇ ಅವರ ಪ್ರಯತ್ನ. ಆ ರೀತಿ ಕೊಡುವ ಸಂದರ್ಭದಲ್ಲಿ ಒಂದು ಡಜನ್ ಲೀಡರ್‍ಗಳು ಈಗ ಕ್ಯೂನಲ್ಲಿ ನಿಂತಿದ್ದಾರೆ ಎಂದು ಕಾಣಿಸುವುದಾಗಿ ತಿಳಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರ ಅಭಿವೃದ್ಧಿಯಲ್ಲಿ ಬಹಳ ಹಿಂದೆ ಬಿದ್ದಿದೆ; ಅಂದರೆ ಅದು ಅಭಿವೃದ್ಧಿಶೂನ್ಯವಾಗಿದೆ ಎಂದು ಆರೋಪಿಸಿದರು. ಕೇವಲ ಕೆಲವು ಗ್ಯಾರಂಟಿ ಕೊಟ್ಟಿದ್ದೇವೆ; ಇದರಲ್ಲೇ 5 ವರ್ಷ ಕಾಲಹರಣ ಮಾಡಬಹುದೆಂಬ ಭಾವನೆಯಲ್ಲಿ ಈ ಸರಕಾರ ಇದ್ದ ಹಾಗಿದೆ ಎಂದು ಆಕ್ಷೇಪಿಸಿದರು. ಅವರು ಮಾಡುವ ದುಂಡಾವರ್ತಿ, ಭ್ರಷ್ಟಾಚಾರ, ಕಾನೂನಾತ್ಮಕವಾಗಿ ಅನೇಕ ವಿಚಾರಗಳನ್ನು ಅವರು ತಿರುಚಿ ಕೆಲಸ ಮಾಡುತ್ತಿರುವುದನ್ನು ನೋಡಿದ್ದೇವೆ. ಅವರ ಸರಕಾರದಲ್ಲಿ ಭಾಗಿಯಾದವರೇ ಈ ರಾಜ್ಯ ಭ್ರಷ್ಟಾಚಾರದಲ್ಲಿಸಲ್ಲಿಸಿದರುಆಗಿದೆ ಎಂದು ಹೇಳುತ್ತಾರೆ ಎಂದು ವಿವರಿಸಿದರು.
ಸಚಿವಸಂಪುಟ ಪುನಾರಚನೆ ಹೆಸರಿನಲ್ಲಿ ಕಾಲಹರಣ..
ಇನ್ನೊಂದೆಡೆ ಸಚಿವಸಂಪುಟ ಪುನಾರಚನೆ ಕುರಿತ ಮಾತು ಒಂದು ವರ್ಷದಿಂದ ಕೇಳಿಸುತ್ತಿದೆ. ಈ ತಿಂಗಳು, ಮುಂದಿನ ತಿಂಗಳು ಎಂದು ತಿಳಿಸುತ್ತಾರೆ; ಯಾರು ಸಚಿವರಾಗಬೇಕು ಎನ್ನುತ್ತಾರೋ ಅವರ ಮೂಗಿಗೆ ತುಪ್ಪ ಸವರುತ್ತಾರೆ. ಯಾರು ವ್ಯತ್ಯಾಸ ಮಾಡುತ್ತಾರೋ ಅವರನ್ನು ತೆಗೆಯುತ್ತೇವೆ ಎನ್ನುತ್ತಾರೆ. ಇವೆರಡು ವಿಚಾರಗಳನ್ನು ಇಟ್ಟುಕೊಂಡು ಒಂದು ವರ್ಷದಿಂದ ಕಾಲಹರಣ ಮಾಡಿದ್ದಾರೆ ಎಂದು ಛಲವಾದಿ ನಾರಾಯಣಸ್ವಾಮಿ ಅವರು ದೂರಿದರು.
ಬಿಜೆಪಿ ಹೋರಾಟದ ಬಳಿಕ ವೈಮಾನಿಕ ಸರ್ವೇ
ಅಭಿವೃದ್ಧಿ ಎಂದರೆ ಇಷ್ಟೇ ಎಂದು ತಿಳಿದಿದ್ದಾರೆ. ಅತಿವೃಷ್ಟಿ ಆಯಿತು; ನಾವು ಬೀದಿಗಿಳಿದು ಹೋರಾಟ ಮಾಡಬೇಕಾಯಿತು. ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ, ನಾನು, ವಿಪಕ್ಷದ ಮತ್ತೊಬ್ಬ ನಾಯಕ ಅಶೋಕ್, ಇನ್ನೂ ಹಲವು ಮುಖಂಡರು ಬೆಳೆಹಾನಿಯಿಂದ ರೈತರು ಸಂಕಷ್ಟಕ್ಕೆ ಸಿಲುಕಿದ ಬಗ್ಗೆ ಗಮನ ಸೆಳೆದಾಗ ಸರಕಾರ ತಲೆ ಕೆಡಿಸಿಕೊಳ್ಳಲಿಲ್ಲ; ನಾವು ಬೀದರ್‍ನಿಂದ ಹೋರಾಟ ಪ್ರಾರಂಭಿಸಿದ ಮೇಲೆ ವೈಮಾನಿಕ ಸರ್ವೇ ಮಾಡಲು ಹೊರಟರು. ಹಳ್ಳಗಳಿಂದ ರಸ್ತೆ ಸಂಚಾರ ನಿಷೇಧವಾಗುವಂತಿತ್ತು. ಅದಕ್ಕಾಗಿಯೇ ಅವರು ವೈಮಾನಿಕ ಸಮೀಕ್ಷೆ ಮಾಡಿದರು ಎಂದು ವ್ಯಂಗ್ಯವಾಗಿ ತಿಳಿಸಿದರು.
ಪರಿಹಾರ ಘೋಷಣೆ ಮಾಡಿದರು. ಆದರೆ, ರೈತರಿಗೆ ಒಂದು ನಯಾಪೈಸೆ ಸಿಕ್ಕಿಲ್ಲ; ಘೋಷಣೆ ಮಾತ್ರ ನಡೆದಿದೆ ಎಂದು ಟೀಕಿಸಿದರು. ಕೇವಲ ಘೋಷಣೆ ಮಾಡಿದ್ದರಿಂದ ಯಾರ ಹೊಟ್ಟೆಯೂ ತುಂಬುವುದಿಲ್ಲ. ಪರಿಹಾರವನ್ನು ಅವರಿಗೆ ಕೊಡಬೇಕು ಎಂದು ಆಗ್ರಹಿಸಿದರು.
ಸರಕಾರದ ಹಣ ಎಲ್ಲಿ ಹೋಗುತ್ತಿದೆ?
ಗ್ಯಾರಂಟಿ ಕೊಟ್ಟಿದ್ದಾಗಿ ಹೇಳುತ್ತಾರೆ; ಆರು ತಿಂಗಳಿಗೊಮ್ಮೆ, ಮೂರು ತಿಂಗಳಿಗೆ ಒಮ್ಮೆ ಕೊಡುತ್ತಾರೆ. ಜನರು ಕಾಯುತ್ತಲೇ ಇರುವಂತಾಗಿದೆ. ಹಾಗಿದ್ದರೆ ಹಣ ಎಲ್ಲಿ ಹೋಗುತ್ತಿದೆ? ಇದು ಲೆಕ್ಕಕ್ಕೆ ಸಿಗದ ಪರಿಸ್ಥಿತಿ ರಾಜ್ಯದ್ದು ಎಂದು ಛಲವಾದಿ ನಾರಾಯಣಸ್ವಾಮಿ ಅವರು ಆಕ್ಷೇಪಿಸಿದರು.
ತಿಂಗಳುಗಟ್ಟಲೆ ವೇತನ ಬಾರದೇ ಗ್ರಂಥಪಾಲಕರು ಹೋರಾಟಕ್ಕೆ ಇಳಿದಿದ್ದಾರೆ. ಆತ್ಮಹತ್ಯೆ ಕೂಡ ಮಾಡಿಕೊಂಡದ್ದು ನಮ್ಮ ಕಣ್ಣ ಮುಂದಿದೆ. ಚಾಮರಾಜನಗರದಲ್ಲಿ ತನಗೆ 24 ತಿಂಗಳ ಸಂಬಳ ಬಂದಿಲ್ಲ ಅಂತ ತಿಳಿಸಿ ನಗರಸಭೆ ನೌಕರ ನಗರಸಭೆ ಮುಂದೆಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಗಮನ ಸೆಳೆದರು. ಅನೇಕ ಕಡೆ ವೇತನವನ್ನೇ ಕೊಡುತ್ತಿಲ್ಲ ಎಂದು ಆರೋಪಿಸಿದರು.
ನಾವು ಇದನ್ನು ಅವರ ಗಮನಕ್ಕೆ ತಂದರೆ, ಬಿಜೆಪಿಯವರು ಏನಾದರೂ ಹೇಳಿಕೊಳ್ಳಲಿ; ನಾವು ಹೀಗೆಯೇ ನಡೆದುಕೊಳ್ಳುವುದು ಎಂಬಂತೆ ತಿಳಿಸುತ್ತಾರೆ. ಇದು ಸಾಂವಿಧಾನಿಕ ಕ್ರಮವೇ ಎಂದು ಪ್ರಶ್ನಿಸಿದರು. ಈ ರೀತಿ ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆ ಎಂದರು.
ಬೆಳಗಾವಿ ಭಾಗದಲ್ಲಿ ಪ್ರತ್ಯೇಕ ರಾಜ್ಯದ ಧ್ವನಿ..
ಪ್ರತಿ ಜಿಲ್ಲೆಯಲ್ಲೂ ಅಭಿವೃದ್ಧಿ ಆಗಬೇಕು. ಕೇವಲ ಬೆಂಗಳೂರು ಅಭಿವೃದ್ಧಿ ಎಂದರೆ ಕರ್ನಾಟಕದ ಅಭಿವೃದ್ಧಿಯಲ್ಲ; ಇದನ್ನು ಮೊದಲಿನಿಂದಲೂ ಹೇಳಿದ್ದೇನೆ. 371 ಜೆ ಬರುವ ವರೆಗೆ, ಕೆಕೆಆರ್‍ಡಿಬಿಗೆ ವಿಶೇಷ ಅನುದಾನ ಕೊಡುವವರೆಗೆ ನಮಗೆ ಪ್ರತ್ಯೇಕ ರಾಜ್ಯ ಬೇಕೆಂಬ ಒಂದು ಧ್ವನಿ ಗುಲ್ಬರ್ಗದಿಂದ ಬರುತ್ತಿತ್ತು. ಈಗ ಬೆಳಗಾವಿ ಭಾಗದಲ್ಲಿ ಅಂಥ ಮಾತುಗಳು ಬರುತ್ತಿದೆ. ಕಾಂಗ್ರೆಸ್ಸಿನವರೇ ಅವರ ಸರಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಗಮನ ಸೆಳೆದರು.
ಇಡೀ ರಾಜ್ಯವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡುವಲ್ಲಿ ಈ ಸರಕಾರ ವಿಫಲವಾಗಿದೆ. ತಾರತಮ್ಯ ಇದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ವಿಶ್ಲೇಷಿಸಿದರು. ಬೆಂಗಳೂರಿನ ಒಂದು ಎಕರೆ 10 ಕೋಟಿ 15 ಕೋಟಿ ಬೆಲೆಬಾಳುತ್ತದೆ. ರೈತರ ಜಮೀನು ಕಬಳಿಸಿ ಬಿಡಿಎ, ಕೆಐಎಡಿಬಿ ಹೆಸರಿನಲ್ಲಿ ಲೇಔಟ್ ಮಾಡಿ, ರಿಯಲ್ ಎಸ್ಟೇಟ್ ದಂಧೆ ಮಾಡುತ್ತಿದ್ದಾರೆ ಎಂದು ಆರೋಪ ವ್ಯಕ್ತಪಡಿಸಿದರು. ಇವರಿಗೆ ಬೆಂಗಳೂರು ಸುತ್ತ ಗಮನ ಇದೆಯೇ ಹೊರತು ಬಾಗಲಕೋಟೆಯಲ್ಲಿ ಕೈಗಾರಿಕೆ ಆಗಬೇಕು; ಅಭಿವೃದ್ಧಿ ಆಗಬೇಕು. ಬೆಳಗಾವಿ, ಗುಲ್ಬರ್ಗ, ಧಾರವಾಡದಲ್ಲಿ ಅಭಿವೃದ್ಧಿ ಆಗಬೇಕೆಂಬ ಭಾವನೆ ಇಲ್ಲ ಎಂದು ಆಕ್ಷೇಪಿಸಿದರು.
ಈ ಪತ್ರಿಕಾಗೋಷ್ಠಿಗೂ ಮೊದಲು ಇಲ್ಲಿ ಪಕ್ಷದ ಮತ್ತು ಸರಕಾರದ ವತಿಯಿಂದ ಐಕ್ಯತಾ ನಡಿಗೆಯಲ್ಲಿ ಭಾಗವಹಿಸಿದ್ದಾಗಿ ತಿಳಿಸಿದರು. ವಲ್ಲಭಭಾಯಿ ಪಟೇಲ್ ಅವರ 150ನೇ ಜನ್ಮದಿನದ ಅಂಗವಾಗಿ ಇದು ನಡೆದಿದೆ. ಪಟೇಲ್ ಅವರು ಈ ದೇಶದ ಬಗ್ಗೆ ಹೊಂದಿದ್ದ ಬಗ್ಗೆ ಕಾಳಜಿ, ಗಟ್ಟಿತನ, ದೇಶದ ಐಕ್ಯತೆಗಾಗಿ ಅವರು ಮಾಡಿದ ಕಾರ್ಯಗಳನ್ನು ಶ್ಲಾಘಿಸಲು ಮತ್ತು ಅವರನ್ನು ಗೌರವಿಸಲು ಮಾನ್ಯ ಮೋದಿಜೀ ಅವರ ನೇತೃತ್ವದ ಎನ್‍ಡಿಎ ಸರಕಾರ ಮಾಡಿದೆ ಎಂದು ಕೃತಜ್ಞತೆ ಸಲ್ಲಿಸಿದರ