ಬೆಂಗಳೂರು : ನಾಯಕತ್ವ ಬದಲಾವಣೆಗೆ ಸಂಬಂಧಿಸಿದಂತೆ ಕುರ್ಚಿ ಕಚ್ಚಾಟ ಕ್ಲೈಮ್ಯಾಕ್ಸ್ ಹಂತ ತಲುಪಿದಂತೆ ಕಾಣ್ತಿದೆ. ಸಿಎಂ ಸ್ಥಾನಕ್ಕಾಗಿ ಡಿಸಿಎಂ ಡಿಕೆ ಶಿವಕುಮಾರ್ ಪಟ್ಟು ಹಿಡಿದಿದ್ರೆ, ಕುರ್ಚಿ ಬಿಡೋದಿಲ್ಲ ಎನ್ನುವಂತೆ ಸಿದ್ದರಾಮಯ್ಯ ಪ್ರತಿಪಟ್ಟು ಹಿಡಿದಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಜೊತೆಯೇ ಮಾತುಕತೆಗೆ ಡಿಸಿಎಂ ಡಿಕೆ ಶಿವಕುಮಾರ್ ಮುಂದಾಗಿದ್ದು, ಇಂದೇ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುತ್ತಿದ್ದಾರೆ. ಕಾವೇರಿ ನಿವಾಸಲ್ಲಿ ನಡೆಯುವ ಸಿಎಂ-ಡಿಸಿಎಂ ಮಹತ್ವದ ಸಭೆಯತ್ತ ಎಲ್ಲರ ಚಿತ್ತನೆಟ್ಟಿದೆ.
ಇಂದು ಸಿಎಂ, ಡಿಸಿಎಂ ಬ್ರೇಕ್‌ಫಾಸ್ಟ್ ಮೀಟಿಂಗ್
ಇಂದು ಬೆಳಗ್ಗೆ 9 ಗಂಟೆಗೆ ಸಿಎಂ ಸಿದ್ದರಾಮಯ್ಯರ ಕಾವೇರಿ ನಿವಾಸದಲ್ಲಿ ಮಹತ್ವದ ಬ್ರೇಕ್‌ಫಾಸ್ಟ್ ಮೀಟಿಂಗ್ ನಡೆಯಲಿದೆ. ಬ್ರೇಕ್ ಫಾಸ್ಟ್‌ಗೆ ಬರುವಂತೆ ಸಿಎಂ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ಡಿಸಿಎಂ ಡಿಕೆಶಿ ಉಪಾಹಾರಕ್ಕೆ ಆಗಮಿಸಲಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವೆ ಮಹತ್ವದ ಮಾತುಕತೆ ನಡೆಯುವ ಸಾಧ್ಯತೆ ಇದೆ.
ಕುರ್ಚಿ ಕಾದಾಟಕ್ಕೆ ಬೀಳುತ್ತಾ ತೆರೆ?
ಶತಾಯಗತಯ ಸಿಎಂ ಸ್ಥಾನಕ್ಕೇರಲೇಬೇಕು ಎನ್ನುವ ಉದ್ದೇಶದಿಂದ ಸಂಪುಟ ಸಚಿವರು ಸೇರಿದಂತೆ ಹಲವು ಶಾಸಕರನ್ನ ಡಿಕೆ ಶಿವಕುಮಾರ್ ಭೇಟಿಯಾಗಿ ಬೆಂಬಲ ಪಡೆಯುವ ಯತ್ನದಲ್ಲಿದ್ದಾರೆ. ಇದರ ನಡುವೆ ಸಿದ್ದರಾಮಯ್ಯ ಆಪ್ತ ಬಣದವರ ಮೂಲಕವೂ ಸಿಎಂ ಮನವೊಲಿಕೆಗೆ ಯತ್ನಿಸಿದ್ರು. ಆದ್ರೆ ಯಾವುದೂ ಸಾಧ್ಯವಾಗದ ಹಿನ್ನೆಲೆ ಇದೀಗ ಖುದ್ದು ಸಿಎಂ ಜೊತೆ ನೇರ ನೇರ ಮಾತುಕತೆಗೆ ಡಿಸಿಎಂ ಮುಂದಾಗಿದ್ದಾರೆ. ಈ ಮೂಲಕ ಕುರ್ಚಿ ಕಾದಾಟ, ಗೊಂದಲಕ್ಕೆ ತೆರೆ ಬೀಳುವ ಸಾಧ್ಯತೆ ಇದೆ.