ನವದೆಹಲಿ: ನಿರ್ಮಲಾ ಸೀತಾರಾಮನ್ 2019ರಿಂದ ಬಜೆಟ್ ಮಂಡಿಸುತ್ತಿದ್ದು, ಪ್ರತೀ ವರ್ಷ ಅವರು ಯಾವ್ಯಾವುದಕ್ಕೆ ಎಷ್ಟೆಷ್ಟು ಅನುದಾನ ಕೊಡುತ್ತಾರೆ ಎನ್ನುವ ಕುತೂಹಲದ ಜೊತೆಗೆ ಅವರು ಯಾವ ರೂಢಿ ಅಥವಾ ಸಂಪ್ರದಾಯಕ್ಕೆ ತಿಲಾಂಜಲಿ ಹಾಡುತ್ತಾರೆ ಎಂಬುದೂ ಕುತೂಹಲ ಮೂಡಿಸುತ್ತದೆ. ಜೊತೆಗೆ ಅವರು ಯಾವ ಬಣ್ಣದ ಸೀರೆ ತೊಡುತ್ತಾರೆ ಎಂಬ ಕುತೂಹಲವೂ ಹಲವರಲ್ಲಿ ಇದೆ.
ಪ್ರತೀ ಬಜೆಟ್ನಲ್ಲಿ ಬೇರೆ ಬೇರೆ ಬಣ್ಣದ ಸೀರೆ ತೊಟ್ಟಿದ್ದು, ಕಳೆದ ವರ್ಷದ ಬಜೆಟ್ನಲ್ಲಿ (2023ರದ್ದು) ಅವರು ಕೆಂಪು ಬಣ್ಣದ ಇಳಕಲ್ ಸೀರೆ ತೊಟ್ಟು ಮಿಂಚಿದ್ದರು. ಈ ಬಾರಿಯ ಮಧ್ಯಂತರ ಬಜೆಟ್ನಲ್ಲಿ ಅವರು ನೀಲಿ ಮತ್ತು ಕ್ರೀಮ್ ಬಣ್ಣದ ಛಾಯೆ ಇರುವ ಸೀರೆ ತೊಟ್ಟಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ನಿರ್ಮಲಾ ಸೀತಾರಾಮನ್ ಈ ಬಾರಿ ತೊಟ್ಟಿರುವ ನೀಲಿ ಬಣ್ಣದ ಸೀತೆ ತುಸ್ಸಾರ್ ರೇಷ್ಮೆಯದ್ದು. ಪಶ್ಚಿಮ ಬಂಗಾಳ, ಬಿಹಾರ, ಝಾರ್ಖಂಡ್, ಒಡಿಶಾ ಪ್ರದೇಶಗಳಲ್ಲಿ ಸಿಗುವ ರೇಷ್ಮೆಯಿಂದ ಈ ಸೀರೆ ನೇಯಲಾಗುತ್ತದೆ.
ಕಳೆದ ವರ್ಷ ನಿರ್ಮಲಾ ಸೀತಾರಾಮನ್ ತೊಟ್ಟಿದ್ದ ಇಳಕಲ್ ಸೀರೆ ಉತ್ತರ ಕರ್ನಾಟಕದಲ್ಲಿ ಬಹಳ ಪ್ರಸಿದ್ಧವಾಗಿರುವ ಸೀರೆ. ಕೆಂಪು ಬಣ್ಣದ ಇಳಕಲ್ ಸೀರೆಯಲ್ಲಿ ಸಾಕಷ್ಟು ಕಸೂತಿ ಕಲೆ ಮೇಳೈಸಿತ್ತು. ಪ್ರಹ್ಲಾದ್ ಜೋಷಿ ಈ ಸೀರೆಯನ್ನು ನಿರ್ಮಲಾ ಸೀತಾರಾಮನ್ ಅವರಿಗೆ ಉಡುಗೊರೆಯಾಗಿ ನೀಡಿದ್ದರು. ಅದನ್ನೇ ಬಜೆಟ್ ಮಂಡನೆ ದಿನ ಹಣಕಾಸು ಸಚಿವರು ತೊಟ್ಟು ಹೋಗಿದ್ದರು.
ಕರ್ನಾಟಕದಿಂದಲೇ ರಾಜ್ಯಸಭೆಗೆ ಆರಿಸಿಹೋಗಿರುವ ಅವರು ರಾಜ್ಯದ ಸೀರೆ ತೊಟ್ಟು ಅಭಿಮಾನ ತೋರ್ಪಡಿಸಿದ್ದರು. ಧಾರವಾಡದ ಆರತಿ ಕ್ರಾಫ್ಟ್ಸ್ ಎಂಬ ಸಂಸ್ಥೆ ಈ ಸೀರೆ ಮತ್ತು ಕಸೂತಿಯನ್ನು ಸಿದ್ಧಪಡಿಸಿತ್ತು.2022ರ ಬಜೆಟ್ನಲ್ಲಿ ಕೆಂಪು ಮತ್ತು ಕಂದು ಮಿಶ್ರಿತ ಬಣ್ಣದ ಸೀರೆ ತಟ್ಟಿದ್ದರು.
.2021ರಲ್ಲಿ ಅವರು ಕೆಂಪು ಮತ್ತು ಬಿಳಿ ಮಿಶ್ರಿತ ಸೀರೆ ತೊಟ್ಟಿದ್ದರು.
2020ರಲ್ಲಿ ಅವರು ಹಳದಿ ಬಣ್ಣ ಸೀರೆ ತೊಟ್ಟಿದ್ದರೆ 2019ರಲ್ಲಿ ಗುಲಾಬಿ ಬಣ್ಣದ ಮಂಗಳಗಿರಿ ಸೀರೆ ಹಾಕಿದ್ದರು.