This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Education NewsLocal NewsNational NewsState News

ಜ್ಞಾನದ ಕೌಶಲ್ಯವನ್ನು ಸಮಾಜ ಸೇವೆಗೆ ಬಳಸಿ:ಡಾ.ಪವನಕುಮಾರ ಸಿಂಗ್

ಜ್ಞಾನದ ಕೌಶಲ್ಯವನ್ನು ಸಮಾಜ ಸೇವೆಗೆ ಬಳಸಿ:ಡಾ.ಪವನಕುಮಾರ ಸಿಂಗ್

ಬ.ವಿ.ವ ಸಂಘದ
ಹಾನಗಲ್ಲ ಶ್ರೀಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಪದವಿ ಪ್ರದಾನ ಸಮಾರಂಭ

ಬಾಗಲಕೋಟೆ:

ಪದವಿ ಪಡೆದ ವಿದ್ಯಾರ್ಥಿಗಳು ತಮ್ಮ ಔಷಧ ವಿಜ್ಞಾನ ಸಂಶೋಧನಾ ಕೌಶಲ್ಯವನ್ನು ಸಮಾಜಸೇವೆಗೆ ಬಳಸಿರಿ ಎಂದು ಪುಣೆಯ ಬಿವಿಜಿ ಲೈಪ್ ಸೈನ್ಸಸ್ ಲಿಮೀಟೇಡ್ ನಿದೇಶಕರಾದ ಡಾ.ಪವನಕುಮಾರ ಸಿಂಗ್ ಹೇಳಿದರು.

ಅವರು ಹೋಸ ಸಭಾಂಗಣದಲ್ಲಿ ಮಂಗಳವಾರ ನಡೆದ ಬಾಗಲಕೋಟೆಯ ಪ್ರತಿಷ್ಠಿತ ಬ.ವಿ.ವ. ಸಂಘದ ಹಾನಗಲ್ಲ ಶ್ರೀಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯ ಬಿ.ಪಾರ್ಮ, ಎಂ.ಪಾರ್ಮ,ಹಾಗೂ ಫಾರ್ಮ ಡಿ ಮತ್ತು ಪಿಎಚ್ ಡಿ ಪದವಿ ಪ್ರಧಾನ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಿ ಮಾತನಾಡಿದರು.

ವಿದ್ಯಾರ್ಥಿಗಳು ಅಧ್ಯಯನವನ್ನು ನಿರಂತರವಾಗಿಸಿ ಬರುವ ಸೋಲುಗಳನ್ನು ಗೆಲುವಿನ ಮೆಟ್ಟಿಲಾಗಿಸಿಕೊಂಡು ಗಟ್ಟಿಯಾದ ಪರಿಶ್ರಮದಿಂದ ದೊಡ್ಡಗುರಿ ಸಾಧಿಸುವಲ್ಲಿ ಸಾಗಬೇಕು ಆಗ ಸಾಧನೆ ಸರಳವಾಗುತ್ತದೆ, ಇಂದು ಜಗತ್ತಿನ ತುಂಬಾ ಭಾರತೀಯ ವಿಜ್ಞಾನಿಗಳು, ಸಂಶೋಧಕರು, ವೈಧ್ಯರು ಇದ್ದಾರೆ, ಕಲಿತ ಶಿಕ್ಷಣವನ್ನು ಅಭಿವೃದ್ಧಿಗೊಳಿಸಿಕೊಂಡು ಉತ್ತಮ ಕಾರ್ಯಕ್ಷಮತೆಯೊಂದಿಗೆ ಸಾಗಿರಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಘದ ಗೌರವ ಕಾರ್ಯದರ್ಶಿಗಳಾದ ಮಹೇಶ.ಎನ್. ಅಥಣಿ ಭಾರತದಲ್ಲಿ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂನಿಯಲ್ಲಿ ಸಾಗುತ್ತಿದ್ದು ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದು ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸಲಿ ಎಂದರು.

ಪ್ರಸ್ತಾವಿಕವಾಗಿ ವಾರ್ಷಿಕ ವರದಿಯನ್ನು ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ: ಚಂದ್ರಶೇಖರ ವಿ.ಎಮ್ ಮಹಾವಿದ್ಯಾಲಯ ನಡೆದು ಬಂದ ಬಗ್ಗೆ ಮಾಹಿತಿ ನೀಡಿದರು.

ವೇದಿಕೆ ಮೇಲೆ ಹಾನಗಲ್ಲ ಶ್ರೀಕುಮಾರೇಶ್ವರ ಔಷಧ ವಿಜ್ಞಾನ ಮಹಾವಿದ್ಯಾಲಯದ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ .ಎಸ್. ಸಾಸನೂರ ಇವರು ಉಪಸ್ಥಿತರಿದ್ದರು,

ಸಮಾರಂಭದಲ್ಲಿ ಮಹಾವಿದ್ಯಾಲಯದಿಂದ ಪದವಿ ಪಡೆದ ಸುಮಾರು ೧೧೨ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು, ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿಯನ್ನು ಡಾ.ಎಸ್.ಆರ್.ದೇಶಪಾಂಡೆ ಬೋಧಿಸಿದರು, ಪ್ರಾಚಾರ್ಯ ವಾಯ್,ಶ್ರೀನಿವಾಸ ಸ್ವಾಗತಿಸಿದರು, ಡಾ.ಜಯದೇವ ಹಿರೇಮಠ ವಂದಿಸಿದರು. ಡಾ.ಸೌಮ್ಯಶ್ರೀ ಮೊರಬ,ಭೂಮಿಕಾ ಕಿತ್ತೂರ ಕಾರ್ಯಕ್ರಮ ನೀರೂಪಿಸಿದರು.

ಕಾರ್ಯಕ್ರಮದಲ್ಲಿ ಎಸ್. ನಿಜಲಿಂಗಪ್ಪ ವೈದ್ಯಕೀಯ ಮಹಾವಿದ್ಯಾಲಯ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ಔಷದ ವಿಜ್ಞಾನ ಮಹಾವಿದ್ಯಾಲಯದ ಸದಸ್ಯರುಗಳು, ಸಂಘದ ಪದಾಧೀಕಾರಿಗಳು, ವಿದ್ಯಾರ್ಥಿಗಳು,ಫಾಲಕರು ಭಾಗವಹಿಸಿದ್ದರು.