This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National NewsPolitics News

ಭಾರತದಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ ಪ್ರಬಲವಾಗಿ ಬೆಳೆಯಲು ಯುವಕರ ಪಾತ್ರ ಬಹಳ ಮಹತ್ವ: ಪಿಎಂ ಮೋದಿ ಹೇಳಿಕೆ

ಭಾರತದಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ ಪ್ರಬಲವಾಗಿ ಬೆಳೆಯಲು ಯುವಕರ ಪಾತ್ರ ಬಹಳ ಮಹತ್ವ: ಪಿಎಂ ಮೋದಿ ಹೇಳಿಕೆ

ನವದೆಹಲಿ: ಭಾರತದಲ್ಲಿ ಸ್ಟಾರ್ಟಪ್ ಇಕೋಸಿಸ್ಟಂ ಪ್ರಬಲವಾಗಿ ಬೆಳೆಯಲು ಯುವಕರ ಪಾತ್ರ ಬಹಳ ಮಹತ್ವದ್ದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇಲ್ಲಿಯ ಭಾರತ್ ಮಂಟಪಂನಲ್ಲಿ ಮೊನ್ನೆಯಿಂದ (ಮಾ. 18) ನಡೆಯುತ್ತಿರುವ ಸ್ಟಾರ್ಟಪ್ ಮಹಾಕುಂಭ ಎಂಬ ಸ್ಟಾರ್ಟಪ್ ಮೇಳದಲ್ಲಿ ಪ್ರಧಾನಿಗಳು ಮಾತನಾಡುತ್ತಿದ್ದು, ‘ಭಾರತದಲ್ಲಿ ಸ್ಟಾರ್ಟಪ್ ಪರಿಸರ ಅದ್ವಿತೀಯ ವೇಗದಲ್ಲಿ ಬೆಳೆಯುತ್ತಿದೆ. ಯುವಕರು ಈ ಬೆಳವಣಿಗೆಯ ಹಿಂದಿನ ಮುಖ್ಯ ಶಕ್ತಿಯಾಗಿದ್ದಾರೆ. ಸ್ಟಾರ್ಟಪ್​ಗಳ ಬೆಳವಣಿಗೆ ಮೆಟ್ರೋ ನಗರಗಳಿಗೆ ಮಾತ್ರವೇ ಸೀಮಿತವಾಗಿಲ್ಲ ಎಂದರು.

ಅದೀಗ ಸಾಮಾಜಿಕ ಸಂಸ್ಕೃತಿಯಾಗಿದೆ’ ಎಂದು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯುವಕರ ಉದ್ಯಮಶೀಲತೆಯನ್ನು ಈ ಸಂದರ್ಭದಲ್ಲಿ ಶ್ಲಾಘಿಸಿದ ಪ್ರಧಾನಿಗಳು, ಯುವಕರ ಮಾನಸಿಕತೆ ಈಗ ಬದಲಾಗಿದೆ. ಉದ್ಯೋಗಾಕಾಂಕ್ಷಿಗಳಾಗಿದ್ದ ಯುವಕರು ಈಗ ಉದ್ಯೋಗ ಸೃಷ್ಟಿಕರ್ತರಾಗಲು ಬಯಸುತ್ತಿದ್ದಾರೆ ಎಂದಿದ್ದಾರೆ.

ಭಾರತ ಅಭಿವೃದ್ಧಿಶೀಲ ದೇಶವಾಗಲು ರೂಪುರೇಖೆ ಸಿದ್ಧಪಡಿಸಲಾಗುತ್ತಿದೆ. ಸರಿಯಾದ ಸಮಯದಲ್ಲಿ ಸರಿಯಾದ ನಿರ್ಧಾರಗಳನ್ನು ನಾವು ತೆಗೆದುಕೊಂಡಿದ್ದೇವೆ ಎಂದು ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ. 2047ರಷ್ಟರಲ್ಲಿ ಭಾರತ ಮುಂದುವರಿದ ದೇಶವಾಗಬೇಕು ಎನ್ನುವ ಗುರಿಯನ್ನು ಸರ್ಕಾರ ಇಟ್ಟಿದೆ. ಈ ವಿಷಯವನ್ನು ಸ್ಟಾರ್ಟಪ್ ಮಹಾಕುಂಭದಲ್ಲಿ ಪ್ರಧಾನಿಗಳು ಪ್ರಸ್ತಾಪಿಸಿದರು.

ಭಾರತದ ಸ್ಟಾರ್ಟಪ್ ಸಂಸ್ಕೃತಿಯಲ್ಲಿ ಮಹಿಳೆಯರು ಮುಂಚೂಣಿಯಲ್ಲಿರುವ ಸಂಗತಿಯನ್ನೂ ಪ್ರಧಾನಿ ಈ ಸಂದರ್ಭದಲ್ಲಿ ಗುರುತಿಸಿದ್ದು, ಭಾರತದ ಶೇ. 45ರಷ್ಟು ಸ್ಟಾರ್ಟಪ್​ಗಳನ್ನು ಮಹಿಳೆಯರೇ ಮುನ್ನಡೆಸುತ್ತಿದ್ದಾರೆ ಎಂದು ವಿವರಿಸಿದರು.

ದೇಶದಲ್ಲಿ ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಸ್ಟಾರ್ಟಪ್​ಗಳಿಗೆ ಉತ್ತೇಜಿಸಲು ಸರ್ಕಾರವೇ ಸ್ಟಾರ್ಟಪ್ ಮಹಾಕುಂಭವನ್ನು ಆಯೋಜಿಸಿದೆ. ಮಾರ್ಚ್ 18ರಂದು ಆರಂಭವಾದ ಈ ಸ್ಟಾರ್ಟಪ್ ಮೇಳ ಇವತ್ತು ಮುಗಿಯುತ್ತದೆ. ಸರ್ಕಾರದ ಜೊತೆಗೆ ಪ್ರಮುಖ ಉದ್ಯಮ ಸಂಘಟನೆಗಳು ಈ ಕಾರ್ಯಕ್ರಮದ ಆಯೋಜನೆಯಲ್ಲಿ ಕೈಜೋಡಿಸಿವೆ ಎಂದು ಸೂಚಿಸಿದರು.

";