ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಶುಕ್ರವಾರ)ವಾರಣಾಸಿಯಲ್ಲಿ ಸಂತ ರವಿದಾಸ್ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಸಂತ ಗುರು ರವಿದಾಸ್ ಜನ್ಮಸ್ಥಳಕ್ಕೂ ಭೇಟಿ ನೀಡಿದರು ಎಂದು ಮಾಹಿತಿ ತಿಳಿದು ಬಂದಿದೆ.
ಮೋದಿ ಜತೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕೂಡ ಜೊತೆಗಿದ್ದರು. ಪ್ರತಿಮೆ ಅನಾವರಣಗೊಳಿಸಿದ ನಂತರ ಮೋದಿ ಮತ್ತು ಯುಪಿ ಸಿಎಂ ಸಂತ ಗುರು ರವಿದಾಸ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು. ಸಂತ ಗುರು ರವಿದಾಸ್ ಅವರ 647ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ರವಿದಾಸ್ ಜಿ ನನ್ನನ್ನು ಮತ್ತೆ ಮತ್ತೆ ಅವರ ಜನ್ಮಭೂಮಿಗೆ ಕರೆಯುತ್ತಾರೆ.
ಸಂಕಲ್ಪಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಅವಕಾಶ ಮತ್ತು ಅವರ ಲಕ್ಷಾಂತರ ಅನುಯಾಯಿಗಳ ಸೇವೆ ಮಾಡುವ ಅವಕಾಶವನ್ನು ನಾನು ಸ್ವೀಕರಿಸುತ್ತೇನೆ. ಗುರುಗಳ ಜನ್ಮತೀರ್ಥದಲ್ಲಿ, ಅವರ ಎಲ್ಲಾ ಅನುಯಾಯಿಗಳಿಗೆ ಸೇವೆ ಸಲ್ಲಿಸುತ್ತಿದ್ದೇನೆ. ನನ್ನ ಪಾಲಿಗೆ ಭಾಗ್ಯವಿದು.
ವಾರಣಾಸಿಯ ಸಂಸದನಾಗಿ, ವಾರಣಾಸಿಯ ಸಾರ್ವಜನಿಕ ಪ್ರತಿನಿಧಿಯಾಗಿ, ನಿಮ್ಮೆಲ್ಲರನ್ನು ವಾರಣಾಸಿಗೆ ಸ್ವಾಗತಿಸುವುದು ಮತ್ತು ನಿಮ್ಮ ಸೌಲಭ್ಯಗಳ ಬಗ್ಗೆ ವಿಶೇಷ ಕಾಳಜಿ ವಹಿಸುವುದು ನನ್ನ ವಿಶೇಷ ಜವಾಬ್ದಾರಿ. ಇದು ನನ್ನ ಕರ್ತವ್ಯ, ಈ ಪವಿತ್ರ ದಿನದಂದು ನನ್ನ ಕರ್ತವ್ಯವನ್ನು ಪೂರೈಸುವ ಅವಕಾಶ ಸಿಕ್ಕಿರುವುದಕ್ಕೆ ಸಂತೋಷವಾಗಿದೆ.