ದೆಹಲಿ: ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು 75 ನೇ ಗಣರಾಜ್ಯೋತ್ಸವದಮುನ್ನಾದಿನವಾದ ಇಂದು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಸಂಜೆ 7 ರಿಂದ ಆಕಾಶವಾಣಿಯಲ್ಲಿ ಮತ್ತುಮತ್ತು ದೂರದರ್ಶನ ವಾಹಿನಿಗಳಲ್ಲಿ ಈ ಭಾಷಣ ಪ್ರಸಾರವಾಗುತ್ತಿದ್ದು, ದೂರದರ್ಶನದಲ್ಲಿ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಭಾಷಣದ ಪ್ರಸಾರವನ್ನು ಡಿಡಿಯ ಪ್ರಾದೇಶಿಕ ಚಾನೆಲ್‌ಗಳು ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡುತ್ತವೆ ಎಂದು ಸರ್ಕಾರದ ಹೇಳಿಕೆ ತಿಳಿಸಿದೆ.
ಆಲ್ ಇಂಡಿಯಾ ರೇಡಿಯೋ ತನ್ನ ಪ್ರಾದೇಶಿಕ ನೆಟ್‌ವರ್ಕ್‌ಗಳಲ್ಲಿ ರಾತ್ರಿ 9.30 ರಿಂದ ಪ್ರಾದೇಶಿಕ ಭಾಷಾ ಆವೃತ್ತಿಗಳನ್ನು ಪ್ರಸಾರ ಮಾಡುತ್ತಿದ್ದು, ಗಣರಾಜ್ಯೋತ್ಸವದ ಮುನ್ನಾದಿನದಂದು ರಾಷ್ಟ್ರಪತಿಗಳು ಭಾಷಣ ಮಾಡುವ ಸಂಪ್ರದಾಯವು ದೇಶದ ಪ್ರಜಾಪ್ರಭುತ್ವದ ರಚನೆಯಲ್ಲಿ ಮಹತ್ತರವಾದ ಮಹತ್ವವನ್ನು ಹೊಂದಿದೆ ಎಂದು ಮಾಹಿತಿ ಕಂಡು ಬಂದಿದೆ.