ಆರ್ಟಿಕಲ್ 370 ಅನ್ನು ತೆಗೆದುಹಾಕಿದ ನಂತರ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 20 ರಂದು ಜಮ್ಮು ಮತ್ತು ಕಾಶ್ಮೀರ(ಕ್ಕೆ ಭೇಟಿ ನೀಡಲಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಪ್ರಧಾನಿ ಮೋದಿ ಅವರು 3,161 ಕೋಟಿ ರೂಪಾಯಿ ಮೌಲ್ಯದ 209 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮೋದಿಯವರ ಕಾಶ್ಮೀರ ಪ್ರವಾಸ ಈಗ ಪಾಕಿಸ್ತಾನದಲ್ಲೂ ಚರ್ಚೆಯಾಗುತ್ತಿದೆ. ಚುನಾವಣಾ ನೀತಿ ಸಂಹಿತೆ ಪ್ರಾರಂಭವಾಗುವ ಮೊದಲು ಪ್ರಧಾನಿಯವರು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬೇಕೆಂದು ನಾವು ಬಯಸಿದ್ದೇವೆ ಎಂದು ಸಚಿವ ಜಿತೇಂದ್ರ ಸಿಂಗ್ ಹೇಳಿದ್ದರು.
ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಸಾಂಬಾದ ವಿಜಯಪುರದಲ್ಲಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಎಐಐಎಂಎಸ್), ರಿಯಾಸಿ ಜಿಲ್ಲೆಯ ಚೆನಾಬ್ ಮೇಲಿನ ಅತಿ ಎತ್ತರದ ರೈಲ್ವೆ ಸೇತುವೆ, ಉಧಂಪುರದಲ್ಲಿ ದೇವಿಕಾ ಯೋಜನೆ, ಐಐಎಂ ಜಮ್ಮು ಮತ್ತು ಶಹಪುರ್-ಕಂಡಿ ಅಣೆಕಟ್ಟು ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
1.3 ಕಿಮೀ ಉದ್ದದ ಚೆನಾಬ್ ರೈಲು ಸೇತುವೆ, ನದಿಯ ತಳದಿಂದ 359 ಮೀಟರ್‌ಗಳಷ್ಟು ಎತ್ತರದಲ್ಲಿದೆ, ಇದು ಪ್ಯಾರಿಸ್‌ನ ಐಕಾನಿಕ್ ಐಫೆಲ್ ಟವರ್‌ಗಿಂತ 35 ಮೀಟರ್ ಎತ್ತರದಲ್ಲಿದೆ, ಇದು ಕತ್ರಾದಿಂದ ಬನಿಹಾಲ್‌ಗೆ 111 ಕಿಮೀ ದೂರದಲ್ಲಿ ಪ್ರಮುಖ ಸಂಪರ್ಕವನ್ನು ರೂಪಿಸುತ್ತದೆ. ಇದು ಉಧಂಪುರ ಶ್ರೀನಗರ-ಬಾರಾಮುಲ್ಲಾ ರೈಲ್ವೆ ಸಂಪರ್ಕ ಯೋಜನೆಯ ಭಾಗವಾಗಿದೆ.