ಹುಬ್ಬಳ್ಳಿ,: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನಲೆ ರಾಮನ ಫೊಟೋಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಫೋಟೋ ಮಾರಾಟ ಮಳಿಗೆಗಳಲ್ಲಿ ರಾಮನ ಫೋಟೋಗೆ ಡಿಮ್ಯಾಂಡ್ ಹೆಚ್ಚಿದೆ. ರಾಮನ ಪೂಜೆ ಮಾಡಲು ಫೋಟೋ ಖರೀದಿಗೆ ಜನ ಮುಗಿಬಿದ್ದಿದ್ದು, ಕೆಲ ಅಂಗಡಿಗಳಲ್ಲಿ ಫೋಟೋಗಳೇ ಸಿಗ್ತಿಲ್ಲ. ಕಳೆದ ನಾಲ್ಕೈದು ದಿನಗಳಲ್ಲಿ 300ಕ್ಕೂ ಹೆಚ್ಚು ಫೋಟೋ ಮಾರಾಟ ಮಾಡಿದ್ದೇವೆ ಎಂದು ಹುಬ್ಬಳ್ಳಿಯ ಅಂಗಡಿ ಮಾಲೀಕರೊಬ್ಬರು ಮಾಹಿತಿ ನೀಡಿದ್ದಾರೆ.
ಫೋಟೋಗಳ ಖರೀದಿ ಮಾಡಲು ಅಂಗಡಿ ಮುಂದೆ ಜನ ಜಮಾಯಿಸಿದ್ದು, ಹುಬ್ಬಳ್ಳಿಯ ಪಾನ್ ಬಜಾರ್ ಬಳಿ ಇರುವ ಫೋಟೋ ಅಂಗಡಿ ಮುಂದೆ ಜನ ಸೇರಿದ್ದಾರೆ.ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ರಾಯಚೂರಿನಲ್ಲಿ ದಾಖಲೆಯ ಪ್ರಮಾಣದಲ್ಲಿ ಕೇಸರಿ ಬಾವುಟಗಳು ಮಾರಾಟವಾಗುತ್ತಿದ್ದು, ಜೈ ಶ್ರೀರಾಮ್ ಹಾಗೂ ಆಂಜನೇಯನ ಧ್ವಜ, ಬಾವುಟಗಳು ಹೆಚ್ಚು ಸೇಲ್ ಆಗುತ್ತಿವೆ. ಜಿಲ್ಲೆಯ ಜನ ಸೇರಿದಂತೆ ಆಂಧ್ರ, ತೆಲಂಗಾಣದ ಗಡಿ ಭಾಗದ ರಾಮ ಭಕ್ತರು ಧ್ವಜ ಖರೀದಿಯಲ್ಲಿ ಮುಳುಗಿದ್ದಾರೆ. ಕಳೆದ ಒಂದು ವಾರದಿಂದ ಸುಮಾರು ಲಕ್ಷಕ್ಕೂ ಅಧಿಕ ಬಾವುಟ, ಧ್ವಜಗಳು ಮಾರಾಟವಾಗಿವೆ.
ಒಂದೊಂದು ತಂಡದಿಂದ ನೂರು, ಇನ್ನೂರು, ಸಾವಿರ, ಎರಡು ಸಾವಿರ ಬಾವುಟಗಳ ಬಂಡಲ್ ಖರೀದಿಯಾಗುತ್ತಿವೆ. ಮನೆ ಮೇಲೆ ಕಟ್ಟಲು ಗೃಹಸ್ಥರು, ಕಾರ್ಯಕ್ರಮಗಳಿಗೆ ಬಳಸಲು ಸಂಘ, ಸಂಸ್ಥೆಗಳಿಂದ ಧ್ವಜ, ಬಾವುಟ ಖರೀದಿಯಾಗುತ್ತಿದ್ದು, ಧ್ವಜ ತಯಾರಿಕಾ ಕಾರ್ಖಾನೆಗಳಲ್ಲೇ ಧ್ವಜಗಳ ಸ್ಟಾಕ್ ಇಲ್ಲದ ಸ್ಥಿತಿ ರಾಯಚೂರಿನಲ್ಲಿ ಎದುರಾಗಿದೆ. ಮುಂಬಾಯಿ, ಆಂಧ್ರ, ಸೋಲಾಪುರದಿಂದ ಬಾವುಟ, ಧ್ವಜಗಳನ್ನ ವ್ಯಾಪಾರಸ್ಥರು ತರಿಸಿಕೊಳ್ಳುತ್ತಿದ್ದಾರೆ. ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ದಾಖಲೆ ಪ್ರಮಾಣದಲ್ಲಿ ಧ್ವಜಗಳ ಮಾರಾಟ ಆಗುತ್ತಿದೆ ಎಂದು ವ್ಯಾಪಾರಸ್ಥರು ಸಂಸತ ವ್ಯಕ್ತಪಡಿಸಿದ್ದಾರೆ.