ಸೂಳೇಬಾವಿಯಲ್ಲಿ ವಾಗ್ವಾದ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಭಾನುವಾರ ನಡೆದ ಮತದಾನ ಬಿರುಸಿನಿಂದ ಸಾಗಿದೆ.
ಬೆಳಗ್ಗೆ 7 ಕ್ಕೆ ಮತದಾನಕ್ಕೆ ಸರಿಯಾರಿ ಮತದಾರರು ಸಹ ಅಷ್ಟೇ ಉತ್ಸಾಹದಿಂದ ಮತಗಟ್ಟೆಯತ್ತ ಧಾವಿಸಿದರು.
ಜಿಲ್ಲೆಯ ಹುನಗುಂದ ತಾಲೂಕಿನ ಸೂಳೇಭಾವಿ ಗ್ರಾಮದ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಚುನಾವಣೆ ಕಣದಲ್ಲಿದ್ದ ಅಭ್ಯರ್ಥಿಗಳ ಮಧ್ಯೆ ವಾಗ್ವಾದ ನಡೆಯಿತು. ಮತದಾನಕ್ಕೆ ಆಗಮಿಸುವ ಮತದಾರರ ಓಲೈಕೆ ಹಿನ್ನೆಲೆಯಲ್ಲಿ ಇಬ್ಬರ ಮಧ್ಯೆ ಜಗಳವೇ ಆರಂಭವಾಯಿತು. ಒಂದು ಹಂತದಲ್ಲಿ ಕೈ ಕೈ ಮಿಲಾಯಿಸುವ ಸಂದರ್ಭವೂ ಬಂದಿತು. ಕೂಡಲೆ ಸ್ಥಳಕ್ಕೆ ಆಗಮಿಸಿದ ಅಮೀನಗಡ ಪೊಲೀಸ್ ಸಬ್ ಇನ್ಸಪೆಕ್ಟರ್ ಎಂ.ಜಿ.ಕುಲಕರ್ಣಿ ಪರಿಸ್ಥಿತಿ ತಿಳಿಗೊಳಿಸಿದರು.
ಅನವಶ್ಯಕವಾಗಿ ಮತಗಟ್ಟೆ ಆವರಣದಲ್ಲಿ ತಿರುಗಾಡುತ್ತಿರುವವರನ್ನು ಹೊರಹಾಕಿದರು.
ವಯೋವೃದ್ದರೂ ಸಹ ಉತ್ಸಾಹದಿಂದ ಮತ ಚಲಾಯಿಸಿದರು. 83 ವರ್ಷದ ರೆಹಮನಬಿ ನಧಾಪ್ ವ್ಹೀಲ್ ಚೇರ್ ನಲ್ಲಿ ಆಗಮಿಸಿದ್ದರು. ಸಿದ್ದನಕೊಳ್ಳದಲ್ಲೂ ಭರ್ಜರಿಯಾಗಿ ಮತದಾನ ನಡೆದಿತ್ತು.