This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

National NewsSports News

ಗವಾಸ್ಕರ್ ಬಿಟ್ಟರೆ ಸೆಹ್ವಾಗ್ ಭಾರತದ ಶ್ರೇಷ್ಠ ಓಪನರ್ ಎಂದ ರವಿ ಶಾಸ್ತ್ರಿ

ಗವಾಸ್ಕರ್ ಬಿಟ್ಟರೆ ಸೆಹ್ವಾಗ್ ಭಾರತದ ಶ್ರೇಷ್ಠ ಓಪನರ್ ಎಂದ ರವಿ ಶಾಸ್ತ್ರಿ

ಭಾರತದ ಶ್ರೇಷ್ಠ ಆರಂಭಿಕರಲ್ಲಿ ಸುನಿಲ್ ಗವಾಸ್ಕರ್ ಸಹ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು ಟೆಸ್ಟ್​​ ಕ್ರಿಕೆಟ್​​ನಲ್ಲಿ 10,000 ರನ್​ಗಳ ಗಡಿ ದಾಟಿದ ಇತಿಹಾಸದಲ್ಲಿ ಮೊದಲ ಬ್ಯಾಟರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಅದೇ ರೀತಿ 2 ತ್ರಿಶತಕ ಸಿಡಿಸಿದ ಮತ್ತು ಟೆಸ್ಟ್ ಕ್ರಿಕೆಟ್​ ಅನ್ನು ಏಕದಿನ, ಟಿ20 ಕ್ರಿಕೆಟ್​ನಂತೆ ಆಡುತ್ತಿದ್ದ ವೀರೇಂದ್ರ ಸೆಹ್ವಾಗ್ ಅವರನ್ನೂ ಅತ್ಯುತ್ತಮ ಆರಂಭಿಕ ಆಟಗಾರ ಎಂದು ಪರಿಗಣಿಸುತ್ತಾರೆ.

ಅದರಂತೆ ಆಧುನಿಕ ಕ್ರಿಕೆಟ್​​ನಲ್ಲಿ ರೋಹಿತ್​ ಶರ್ಮಾ ಕೂಡ ಶ್ರೇಷ್ಠ ಆರಂಭಿಕ ಆಟಗಾರ ಎನಿಸಿಕೊಂಡಿದ್ದಾರೆ. ಆದರೆ ಮಾಜಿ ಹೆಡ್​ಕೋಚ್ ರವಿ ಶಾಸ್ತ್ರಿ ಅವರ ಪ್ರಕಾರ ಸೆಹ್ವಾಗ್​-ರೋಹಿತ್​ ಶ್ರೇಷ್ಠರು ಅಲ್ಲವೇ ಅಲ್ಲ. ಶಾಸ್ತ್ರಿ ಅವರು ದಂತಕಥೆ ಗವಾಸ್ಕರ್ ನಂತರ ಮುರಳಿ ವಿಜಯ್​ರನ್ನು ಭಾರತದ ಶ್ರೇಷ್ಠ ಟೆಸ್ಟ್ ಓಪನರ್ ಎಂದು ಹೆಸರಿಸಿದ್ದಾರೆ. ಇದು ಸೆಹ್ವಾಗ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ.

ಕ್ರಿಕೆಟ್​ ಡಾಟ್ ಕಾಮ್​ನಲ್ಲಿ ಭಾರತದ ಮಾಜಿ ಬೌಲಿಂಗ್ ಕೋಚ್ ಭರತ್ ಅರುಣ್ ಜತೆಗಿನ ಸಂವಾದದಲ್ಲಿ ಶಾಸ್ತ್ರಿ ಇದನ್ನು ಬಹಿರಂಗಪಡಿಸಿದ್ದಾರೆ. ಸುನಿಲ್ ಗವಾಸ್ಕರ್ ಅವರ ನಂತರ ಮುರಳಿ ವಿಜಯ್ ಅವರು ಭಾರತದ ಅತ್ಯುತ್ತಮ ಟೆಸ್ಟ್ ಓಪನರ್‌ ಎಂದು ಹೇಳಿದ್ದಾರೆ. ಇದೇ ವೇಳೆ ಭರತ್ ಅರುಣ್ ಮಾತನಾಡಿ, ಚಿಕ್ಕಂದಿನಿಂದಲೂ ಪರಿಚಯವಿದ್ದ ವಿಜಯ್​ನನ್ನು ಕಾಲೇಜಿನಲ್ಲಿದ್ದಾಗಲೇ ಅವರನ್ನು ಶಾಸ್ತ್ರಿ ಅವರು ಪ್ರಥಮ-ವಿಭಾಗದ ತಂಡಕ್ಕೆ ಶಿಫಾರಸು ಮಾಡಿದ್ದರು ಎಂದು ಹೇಳಿದರು.

ಸುನಿಲ್ ಗವಾಸ್ಕರ್ ನಂತರ ಭಾರತ ಕಂಡ ಅತ್ಯುತ್ತಮ ಟೆಸ್ಟ್ ಓಪನರ್ ಮುರಳಿ ವಿಜಯ್. ಹಾಗಾಗಿ ನಾನು ಅವರೊಂದಿಗೆ [ವಿಜಯ್] ಅವರೊಂದಿಗಿನ ನನ್ನ ಸಂವಹನವು ಅತ್ಯುತ್ತಮವಾಗಿದೆ. ಅವರು ನನ್ನ ನೆಚ್ಚಿನ ಆಟಗಾರರಲ್ಲಿ ಒಬ್ಬರು ಎಂದು ನಾನು ಹೇಳಬಲ್ಲೆ ಎಂದು ಮಾಜಿ ಭಾರತ ಬೌಲಿಂಗ್ ಕೋಚ್ Cricket.com ಗೆ ತಿಳಿಸಿದ್ದಾರೆ. ಮುರಳಿ ಯಾವ ಸಾಧನೆ ಮಾಡಿದ್ದಾರೆಂದು ಅವರನ್ನು ಅತ್ಯುತ್ತಮ ಟೆಸ್ಟ್ ಓಪನರ್​ ಎಂದು ಹೇಳುತ್ತೀರಿ ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ.

ವೀರೇಂದ್ರ ಸೆಹ್ವಾಗ್ vs ಮುರಳಿ ವಿಜಯ್
ವಿಜಯ್ ಅವರು 2008 ಮತ್ತು 2018 ರ ನಡುವೆ ಭಾರತದ ಪರ 61 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. 100 ಬಾರಿ ಇನ್ನಿಂಗ್ಸ್​​ಗಳಲ್ಲಿ ಆರಂಭಿಕರಾಗಿ ಬ್ಯಾಟ್ ಬೀಸಿದ್ದು, 3880 ರನ್​ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ 12 ಶತಕ ಮತ್ತು 15 ಅರ್ಧಶತಕಗಳು ಸೇರಿವೆ. ವಿಜಯ್ ಒಟ್ಟು ನಾಲ್ಕು ಬಾರಿ 150+ ಸ್ಕೋರ್ ಬಾರಿಸಿದ್ದಾರೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಿದ್ದಾರೆ. ಈಗಲೂ ಸಹ ಅವರ ಇನ್ನಿಂಗ್ಸ್​​ಗಳು ಕ್ರಿಕೆಟ್ ಪ್ರೇಮಿಗಳ ಮನದಲ್ಲಿ ಅಚ್ಚಳಿಯದೇ ಉಳಿದಿವೆ.

ಸೆಹ್ವಾಗ್​ ವಿಷಯಕ್ಕೆ ಬರುವುದಾದರೆ, ಉತ್ತಮ ಪ್ರದರ್ಶನ ನೀಡಿದ ಪ್ರಮುಖ ಬ್ಯಾಟರ್​​ಗಳಲ್ಲಿ ಒಬ್ಬರು. 2002 ರಿಂದ 2013 ರವರೆಗೆ ಟೆಸ್ಟ್ ಕ್ರಿಕೆಟ್ ಆಡಿದ್ದಾರೆ. ಎರಡು ತ್ರಿಶತಕ ಜೊತೆಗೆ ಶ್ರೀಲಂಕಾ ವಿರುದ್ಧ 293 ರನ್ ಗಳಿಸಿದ್ದು ಸೆಹ್ವಾಗ್ ಪಾಲಿಗೆ ಅವಿಸ್ಮರಣೀಯ. ಟೆಸ್ಟ್‌ನಲ್ಲಿ ಆರು ದ್ವಿಶತಕ ಸಿಡಿಸಿದ್ದಾರೆ. ಸೆಹ್ವಾಗ್ ಮತ್ತು ರಾಹುಲ್ ದ್ರಾವಿಡ್ ಅವರು ಟೆಸ್ಟ್‌ನಲ್ಲಿ ಭಾರತದ 2ನೇ ಅತ್ಯಧಿಕ ಜೊತೆಯಾಟದ ಹಿರಿಮೆಯನ್ನು ಹೊಂದಿದ್ದಾರೆ. ಈ ಜೋಡಿ 410 ರನ್​​ಗಳ ಜೊತೆಯಾಟವಾಡಿತ್ತು.

ಪಾಕಿಸ್ತಾನದ ವಿರುದ್ಧ ಲಾಹೋರ್‌ನಲ್ಲಿ 410 ವಿನೂ ಮಂಕಡ್ ಮತ್ತು ಪಂಕಜ್ ರಾಯ್ ಅವರ 413 ರನ್‌ಗಳ ದಾಖಲೆ ಮುರಿಯಲು ಕೇವಲ ಮೂರು ರನ್‌ಗಳಿಂದ ದ್ರಾವಿಡ್-ಸೆಹ್ವಾಗ್ ತಪ್ಪಿಸಿಕೊಂಡರು. ಸೆಹ್ವಾಗ್ ಒಟ್ಟಾರೆ ಟೆಸ್ಟ್​ನಲ್ಲಿ 104 ಟೆಸ್ಟ್​​ಗಳ 180 ಇನ್ನಿಂಗ್ಸ್​​ಗಳಲ್ಲಿ 49.34ರ ಸರಾಸರಿಯಲ್ಲಿ 23 ಶತಕ, 32 ಅರ್ಧಶತಕಗಳ ಸಹಿತ 8586 ರನ್ ಕಲೆ ಹಾಕಿದ್ದಾರೆ.

Nimma Suddi
";