ಚಿಕ್ಕೋಡಿಯಲ್ಲಿ ಮಗಳ ಗೆಲುವಿಗೆ ಗ್ಯಾರಂಟಿ ಕೈ ಹಿಡಿದಿದೆ ಎಂದು ಮಾದ್ಯಮಕ್ಕೆ ಸಚಿವ ಸತೀಶ್ ಜಾರಕಿಹೊಳಿ ಸಂತಸ ವ್ಯಕ್ತಪಡಿಸಿದ್ದಾರೆ.
ಮೊದಲಿನಿಂದಲೂ ಪುತ್ರಿ ಗೆಲ್ತಾರೆ ಅನ್ನೋ ನೀರಿಕ್ಷೆ ಇತ್ತು. ಇನ್ನೇನು ಘೋಷಣೆಯೊಂದೆ ಬಾಕಿ ಇದೆ. ಪುತ್ರಿ ಗೆಲುವಿಗೆ ಗ್ಯಾರಂಟಿಗಳು ಕಾರಣವಾಗಿದೆ ಎಂದು ವಿವರಿಸಿದರು.
ಬೆಳಗಾವಿಯಲ್ಲಿ ಮತದಾರ ಬಿಜೆಪಿ ಪರ ಇದಾರೆ, ಜನರ ತೀರ್ಪು ಒಪ್ಪ ಬೇಕು. ಎಕ್ಸಿಟ್ ಪೋಲ್ ಕೂಡಾ ಸುಳ್ಳಾಗಿವೆ ಎಂದರು.