ನಿಮ್ಮ ಸುದ್ದಿ ಬಾಗಲಕೋಟೆ
ಬ್ಯಾಂಕ್ ಆರಂಭ ಹಾಗೂ ಅದರ ಪ್ರಗತಿಗೆ ಶೇರ್‌ದಾರರೇ ಜೀವಾಳವಾಗಿದ್ದು ಅವರ ಸೇವೆಯಲ್ಲೇ ತೃಪ್ತಿ ಕಾಣುತ್ತೇವೆ ಎಂದು ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಅಮೀನಗಡದ ಆರೂಢ ಜ್ಯೋತಿ ಪತ್ತಿನ ಸಹಕಾರಿ ಸಂಘದ ಮುಖ್ಯ ಕಾರ್ಯ ನಿರ್ವಾಹಕ ಪ್ರಸಾದ ಶಿರೋಳ ತಿಳಿಸಿದರು.
ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಸಹಕಾರಿ ಸಂಘದ ಬಡ ಶೇರ್‌ದಾರರಿಗೆ ದಿನಸಿ ಕಿಟ್ ವಿತರಿಸಿ ಅವರು ಮಾತನಾಡಿದರು. ಕೊರೊನಾ ೨ನೇ ಅಲೆಯಿಂದಾಗಿ ಬಹುತೇಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ. ಅದರಲ್ಲೂ ಪತ್ತಿನ ಸಹಕಾರಿ ಸಂಘಗಳ ಬೆಳವಣಿಗೆಗೆ ಶೇರ್‌ದಾರರ ಕೊಡುಗೆ ಮುಖ್ಯವಾಗಿರುತ್ತದೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರಿಗೆ ನೆರವಾಗಲೆಂದು ಸಂಘದಿಂದ ಅಳಿಲು ಸೇವೆಗೆ ಮುಂದಾಗಿದ್ದೇವೆ ಎಂದರು.
ಸಂಘದ ಅಧ್ಯಕ್ಷ ಶಂಕ್ರಪ್ಪ ಕತ್ತಿ, ಉಪಾಧ್ಯಕ್ಷ ಮಹಾಂತೇಶ ಚಳ್ಳಗಿಡದ, ರಮೇಶ ದಡ್ಡೇನವರ, ಪುಂಡಲೀಕ ರಕ್ಕಸಗಿ, ಶಿವಾನಂದ ಚಳ್ಳಗಿಡದ, ಈರಪ್ಪ ಚಳ್ಳಗಿಡದ, ರವಿ ರಾಠೋಡ, ಸಿ.ಎಂ.ಅನವಾಲ. ಪಪಂ ಸದಸ್ಯ ಗುರುನಾಥ ಚಳ್ಳಮರದ, ರಾಘವೇಂದ್ರ ಗೌಡರ ಹಾಗೂ ಸಿಬ್ಬಂದಿ ಇದ್ದರು.