ನಿಮ್ಮ ಸುದ್ದಿ ಬಾಗಲಕೋಟೆ
ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಕೇವಲ ಕುರ್ಚಿ ಕನಸು ಕಾಣುತ್ತಿದ್ದು ಹೇಗಾದರೂ ಮಾಡಿ ಆ ಕುರ್ಚಿಗೆ ಹಾರಬೇಕು ಎಂದು ನೋಡುತ್ತಿದ್ದಾರೆ. ಆದರೆ ಇದು ಸಾಧ್ಯವಾಗದ ಮಾತು ಎಂದು ಸಚಿವ ಬಿ.ಶ್ರೀರಾಮುಲು ವ್ಯಂಗವಾಡಿದರು.
ಜಿಲ್ಲೆಯ ಬಾದಾಮಿ ತಾಲೂಕಿನ ಮುಷ್ಠಿಗೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರ ಬಳಿ ದುಡ್ಡಿಲ್ಲ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಕುರ್ಚಿ ಕನಸು ಕಾಣುತ್ತಿದ್ದಾರೆ. ಆದರೆ ಬಿಜೆಪಿ ಸರಕಾರದ ಉದ್ದೇಶ ಜನರ ಹಿತಕ್ಕಾಗಿ ಕೆಲಸ ನಿರ್ವಹಿಸುತ್ತಿದೆ. ಬಡವರು, ರೈತರ ಹಿತದೃಷ್ಠಿಯಿಂದ ಕೆಲಸ ಮಾಡುತ್ತಿದ್ದೇವೆ. ಒಂದು ಉಪಚುನಾವಣೆಯಲ್ಲಿ ಗೆದ್ದರೆ ಸಾಕು ಮುಖ್ಯಮಂತ್ರಿ ಆಗುವ ಕನಸನ್ನು ಸಿದ್ದು ಕಾಣುತ್ತಿದ್ದಾರೆ. ಆದರೆ ಎಲ್ಲ ಉಪಚುನಾವಣೆಯಲ್ಲಿ ಬಿಜೆಪಿಯವರೇ ಗೆಲ್ಲುತ್ತಿದ್ದೇವೆ. ಮುಂದಿನ ಉಪಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಚಾಮುಂಡಿ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡ ಸಿದ್ದರಾಮಯ್ಯ ಅವರು ಬಾದಾಮಿಗೆ ಬಂದಿದ್ದಾರೆ. ಸೋಲಿನ ಹತಾಶೆಯಿಂದ, ಭಯಭೀತಿಯಿಂದ ಬಂದಿದ್ದಾರೆ. ಕೆಲವು ಅಂತರದಿAದ ನನ್ನ ವಿರುದ್ದ ಗೆದ್ದಿದ್ದಾರೆ. ಕ್ಷೇತ್ರಕ್ಕೆ ಎಷ್ಟು ಅನುದಾನ ಕೊಟ್ಟಿದೆ ಅಂತ ನೋಡಿಕೊಳ್ಳಲಿ ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಇಲ್ಲ. ಸಿಎಂ ಬದಲಾವಣೆಗೆ ಕೆಲ ಶಾಸಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಮುಲು ಅಂತ ಯಾವುದೇ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರೇ ಮುಂದುವರೆಯುತ್ತಾರೆ. ಯಡಿಯೂರಪ್ಪ ಅವರು ಸಿಎಂ ಆದ ನಂತರ ನೆರೆ, ಅತಿವೃಷ್ಟಿ, ಕೋವಿಡ್ ಪರಿಸ್ಥಿತಿಯಲ್ಲೂ ಯಾವುದೇ ವಿಘ್ನ ಇಲ್ಲದೇ ಸರ್ಕಾರವನ್ನು ಮುನ್ನೆಡೆಸಿಕೊಂಡು ಹೋಗ್ತಿದ್ದಾರೆ. ಸರಕಾರದ ಎಲ್ಲ ಇಲಾಖೆಯಲ್ಲೂ ಸರಿಯಾಗಿ ಕೆಲಸಗಳು ನಡೆಯುತ್ತಿವೆ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಪ್ರಶ್ನೆಯೇ ಉದ್ಘವಿಸುವುದಿಲ್ಲ ಎಂದು ಸ್ಪಷ್ಟತೆ ವ್ಯಕ್ತಪಡಿಸಿದರು.
ಚಂಡಿನಂತೆ ಪುಟಿದು ಮೇಲೆ ಬರುವ ಶಕ್ತಿ ಶ್ರೀರಾಮುಲುಗೆ ಇದೆ. ಬಳ್ಳಾರಿ ಜಿಲ್ಲೆ ವಿಭಜನೆಯಿಂದ ಸಚಿವ ಆನಂದಸಿಂಗ್ ಮೇಲುಗೈ ಸಾಧಿಸಿರುವ ವಿಚಾರದ ಕುರಿತು, ಬಳ್ಳಾರಿ ವಿಭಜನೆಯಿಂದ ರಾಮುಲು ಮಂಕು ಆಗಿಲ್ಲ. ರಾಮುಲು ಹಿಂದೆ ಸರಿದಿದ್ದಾರೆ ಅಂತನೂ ಅಲ್ಲ. ಕಾಂಗ್ರೆಸ್ ಭದ್ರಕೋಟೆ ಆಗಿದ್ದ ಬಳ್ಳಾರಿ ಜಿಲ್ಲೆಯಲ್ಲಿ ಇವತ್ತು ಆ ಪಕ್ಷವನ್ನ ಒಬ್ಬ ಶ್ರೀರಾಮುಲು ಎನ್ನುವ ವ್ಯಕ್ತಿ ನೆಲಸಮ ಮಾಡಿದ್ದಾನೆಂದರೆ ಅದು ಬಿಜೆಪಿ ಶಕ್ತಿ.
ರಾಮುಲು ಅವರನ್ನು ಯಾರೂ ಸಹ ಕುಗ್ಗಿಸಲು ಆಗುವುದಿಲ್ಲ. ರಾಮುಲು ಒಂದು ತಾಲೂಕು, ಜಿಲ್ಲೆಯ ಲೀಡರ್ ಅಲ್ಲ, ರಾಜ್ಯಮಟ್ಟದ ಲೀಡರ್ ಆಗಿದ್ದಾನೆ. ಚಂಡು ನೆಲಕ್ಕೆ ಒಗೆದಾಗ ಹೇಗೆ ಪುಟಿಯುತ್ತದೆಯೋ ಹಾಗೆ ಶ್ರೀರಾಮುಲು ಚಂಡಿನAತೆ ವೇಗವಾಗಿ ಜಿಗಿಯುವ ಶಕ್ತಿಯನ್ನು ದೇವರು ಕೊಟ್ಟಿದ್ದಾನೆ. ನೆಲಕ್ಕೆ ಬಿದ್ರು ಕೂಡ ಮೇಲೆ ಎದ್ದು ಬರುವ ಶಕ್ತಿಯನ್ನು ದೇವರು ಮತ್ತು ನಾಡಿನ ಜನರು ಕೊಟ್ಟಿದ್ದಾರೆ ಎಂದು ಅಭಿಮಾನ ವ್ಯಕ್ತಪಡಿಸಿದರು.