This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಸಿದ್ದಶ್ರೀ-2021 ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಶ್ರದ್ಧೆ, ಪ್ರಾಮಾಣಿಕತೆಯೇ ಜೀವನದ ಯಶಸ್ಸಿಗೆ ಕಾರಣ:ಗುರುಪಾದಮ್

ನಿಮ್ಮ ಸುದ್ದಿ ಬಾಗಲಕೋಟೆ

ಜೀವನದಲ್ಲಿ ಶ್ರದ್ಧೆ, ಪ್ರಾಮಾಣಿಕತೆಯೊಂದಿಗೆ ಮುನ್ನಡೆದರೆ ಯಶಸ್ಸು ನಿಮ್ಮನ್ನು ಹಿಂಬಾಲಿಸುತ್ತದೆ ಎಂದು ಭಾರತೀಯ ಚಿತ್ರರಂಗದ ಬಹುಭಾಷಾ ಚಿತ್ರ ನಿರ್ಮಾಪಕ ಗುರುಪಾದಮ್ ತಿಳಿಸಿದರು.

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಸುಕ್ಷೇತ್ರ ಸುಕ್ಷೇತ್ರ ಸಿದ್ದನಕೊಳ್ಳದಲ್ಲಿ ಪಿ.ದಿಕ್ಷಿತ್ ಪೌಂಡೇಶನ್ ಸೂಳೇಬಾವಿ, ಎಸ್ಸೆಸ್ಸೆಕೆ ಸಮಾಜ ಗಜೇಂದ್ರಗಡ, ಸಿದ್ದಶ್ರೀ ಗ್ರಾಮೀಣಾಭಿವೃದ್ಧಿ ಮತ್ತು ಸಮಾಜ ಸೇವಾಶ್ರಮ ಮಾರನಬಸರಿ ಇವರ ಸಹಯೋಗದಲ್ಲಿ ಹಮ್ಮಿಕೊಂಡ 2021ನೇ ಸಾಲಿನ ಸಿದ್ಧಶ್ರೀ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿದ್ದಶ್ರೀ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

ಜೀವನದಲ್ಲಿ ಮನುಷ್ಯ ಏನಾದರೂ ಸಾಧನೆ ಮಾಡಲೇಬೇಕು. ಅದಕ್ಕೆ ಶ್ರದ್ಧೆ, ಪ್ರಾಮಾಣಿಕತೆ ಅವಶ್ಯ. ಕನ್ನಡವೂ ಸೇರಿದಂತೆ ನಾನಾ ಭಾಷೆಗಳಲ್ಲಿ ಚಿತ್ರ ನಿರ್ಮಿಸಿದ್ದೇನೆ. ಹಿಂದಿನ ಸಚಿವರಾದ ಜಯಮಾಲಾ ಹಾಗೂ ಉಮಾಶ್ರೀ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗಾಗಿ ಸಾಕಷ್ಟು ಬಾರಿ ಅರ್ಜಿ ಹಾಕಿದರೂ ನನ್ನನ್ನು ಗುರುತಿಸಲಿಲ್ಲ. ರಾಜ್ಯ ಸರಕಾರ ನನ್ನ ಸಾಧನೆ ಗುರುತಿಸದಿದ್ದರೂ ಭಕ್ತರ ಮಠವಾದ ಸಿದ್ದನಕೊಳ್ಳ ಮಠ ನನ್ನ ಗುರ್ತಿಸಿದೆ. ಅದಕ್ಕೆ ಜೀವನವಿಡಿ ಚಿರಋಣಿ ಆಗಿದ್ದೇನೆ ಎಂದು ಭಾವುಕರಾದರು.

ಶಾಸಕ ಅಮರೇಗೌಡ ಬಯ್ಯಾಪೂರ, ಸದೃಢ ಸಮಾಜ ಕಟ್ಟಲು ಯುವಕರು ಮುಂದಾಗಬೇಕು. ಆದರೆ ಅಂತಹ ಯುವಕರು ಇಂದು ದುಶ್ಚಟದ ದಾಸರಾಗುತ್ತಿರುವುದು ವಿಪರ್ಯಾಸ. ಸಿದ್ದನಕೊಳ್ಳದಂತಹ ಪವಿತ್ರ ಕ್ಷೇತ್ರದಲ್ಲಿ ದುಶ್ಚಟ ತೊರೆದು ಕಾಯಕ ಯೋಗಿ ಹಾಗೂ ಶಿಕ್ಷಣವಂತರಾಗಿ. ಅದರಿಂದ ಉತ್ತಮ ಸಂಸ್ಕಾರ, ಸಂಸ್ಕೃತಿ ಬೆಳೆಸಿಕೊಳ್ಳಿ ಎಂದು ಹೇಳಿದರು.

ಮಾಜಿ ಶಾಸಕ ನಾಗರಾಜ ಶೆಟ್ಟಿ ಮಾತನಾಡಿ, ದೇಶದಲ್ಲಿ ಕೃಷಿ ಮತ್ತು ಋಷಿಗೆ ಆದ್ಯತೆ ದೊರೆತಾಗ ಮಾತ್ರ ತೃಪ್ತಿಯ ಜೀವನ ಸಾಧ್ಯ. ಭಾರತ ಪುಣ್ಯ ಭೂಮಿ, ಜಗತ್ತಿಗೆ ವಿಶ್ವಗುರು ಆಗುವ ದೇಶ. ಜಗತ್ತಿಗೆ ಒಳ್ಳೆಯದನ್ನು ಬಯಸುವ ದೇಶವೆಂದರೆ ಅದು ಹಿಂದು ದೇಶ ಎಂದು ಭಾರತದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ರಾಜ್ಯ ಸುತ್ತಿದ್ದು ಎಲ್ಲ ಸ್ವಾಮೀಜಿಗಳನ್ನು ನೋಡಿದ್ದೇನೆ, ಅವರಲ್ಲಿ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ಭಿನ್ನರಾಗಿ ಕಾಣುತ್ತಾರೆ. ಭಕ್ತರೇ ಮಠದ ಆಸ್ತಿಯಾಗಿದ್ದಾರೆ. ತಮಗೆ ಬಂದ ಯಾವುದೇ ವಸ್ತುವನ್ನು ಮತ್ತೊಬ್ಬ ಭಕ್ತನಿಗೆ ನೀಡಿ ಅವರ ಶ್ರೇಯಸ್ಸಲ್ಲೆ ದೇವರನ್ನು ಕಾಣುತ್ತಿದ್ದಾರೆ. ಶಿವಕುಮಾರ ಸ್ವಾಮೀಜಿಗಳೇ ನಮಗೆಲ್ಲ ನಡೆದಾಡುವ ದೇವರಾಗಿದ್ದಾರೆ. ಮಠದ ಯಾವುದೇ ಸೇವೆಗೆ ನಾವೂ ಸಿದ್ಧರಿದ್ದೇವೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಕೊರೊನಾ ಮಹಾಮಾರಿಯಿಂದ ಜನ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಅವರಿಗೆಲ್ಲ ಸಿದ್ದಪ್ಪಜ್ಜನ ಆಶೀರ್ವಾದವಿರಲಿ, ರೈತರ ಬದುಕು ಹಸನಾಗಲಿ ಎಂದು ಹೇಳಿದರು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಮಾಜಿ ಸಂಸದ ಐ.ಜಿ.ಸನದಿ, ಕಾಂಗ್ರೆಸ್ ಮುಖಂಡ ಮಹೇಶ ಹೊಸಗೌಡರ, ಉಡುಪಿ ಸಾಯಿ ಟ್ರಸ್ಟ್ನ ಧರ್ಮದರ್ಶಿ ದಿವಾಕರಶೆಟ್ಟಿ, ಬಾದಾಮಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಕಾಚೆಟ್ಟಿ ಮಾತನಾಡಿದರು.

ಕ್ಷೇತ್ರದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ, ಕಮತಗಿ ಹಿರೇಮಠದ ಶಿವಕುಮಾರ ಶಿವಾಚಾರ್ಯರು, ಗುಳೇದಗುಡ್ಡ ಮರಡಿ ಮಠದ ಕಾಡಸಿದ್ದೇಶ್ವರ ಶಿವಾಚಾರ್ಯರು, ಸಂಗಣ್ಣ ಗದ್ದಿ, ಸಂಗಮೇಶ ಹುದ್ದಾರ, ನಬಿ ನದಾಫ್, ಪ್ರವೀಣ ಪತ್ರಿ, ರಾಜಕುಮಾರ ಬಾದವಾಡಗಿ, ಸೋಮು ವೈಜಾಪುರ, ಮಲ್ಲು ವೀರಾಪುರ, ಸುರೇಶ ಹಳಪೇಟೆ, ಮನಿಷ ತಿವಾರಿ ಇತರರು ಇದ್ದರು.

Nimma Suddi
";