This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

National News

ರೈತರನ್ನು ಪ್ರತಿನಿಧಿಸಲು ಅಧಿಕಾರ ನೀಡಿದವರು ಯಾರು ಎಂದು ಪಂಜಾಬ್​​ನವರು ಚಿಂತಿಸುತ್ತಿದ್ದಾರೆ: ಸುನೀಲ್ ಜಾಖರ್

ರೈತರನ್ನು ಪ್ರತಿನಿಧಿಸಲು ಅಧಿಕಾರ ನೀಡಿದವರು ಯಾರು ಎಂದು ಪಂಜಾಬ್​​ನವರು ಚಿಂತಿಸುತ್ತಿದ್ದಾರೆ: ಸುನೀಲ್ ಜಾಖರ್

ಚಂಡೀಗಢ : ರೈತರು ಮತ್ತು ಕೇಂದ್ರ ಸರ್ಕಾರದ ನಡುವಿನ ಮಾತುಕತೆ ವಿಫಲವಾಗಿರುವುದಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕಾರಣ ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥ ಸುನೀಲ್ ಜಾಖರ್ ಮಂಗಳವಾರ ತಿಳಿಸಿದರು.

“ಭಗವಂತ್ ಮಾನ್ ರೈತರ ಪರವಾಗಿರುವ ಎಲ್ಲಾ ಜನರೊಂದಿಗಿನ ಈ ಮಾತುಕತೆಗಳು ವಿಫಲಗೊಳ್ಳಲು ಉದ್ದೇಶಿಸಿದ್ದರು. ಏಕೆಂದರೆ ಈ ಮಾತುಕತೆ ವಿಫಲವಾದರೆ ಸಿಎಂ ಮಾನ್ ಅವರು ಎಲ್ಲವನ್ನೂ ಪಡೆಯುತ್ತಾರೆ” ಎಂದು ಜಾಖರ್ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಬರೆದಿದ್ದಾರೆ ಎಂದರು.

ಹೀಗೆ ಮಾಡಿದಾಗ ಅವರಿಗೆ (ಮಾನ್ ) ಕೇಂದ್ರ ಸರ್ಕಾರವನ್ನು ಕೆಟ್ಟದಾಗಿ ತೋರಿಸಲು ಸಾಧ್ಯವಾಗುತ್ತದೆ. ಈ ಮೂಲಕ ಆರಂಭದಲ್ಲಿ ಚಂಡೀಗಢಕ್ಕೆ ಮೆರವಣಿಗೆ ಮಾಡಲು ಬಯಸಿದ್ದ ರೈತರನ್ನು ದೆಹಲಿಗೆ ಮರುನಿರ್ದೇಶಿಸಬಹುದು. ಪರಿಹಾರ ಕಂಡುಹಿಡಿಯಲು ರೈತರು ಮತ್ತು ಕೇಂದ್ರ ಸಚಿವರ ತಂಡದ ಪ್ರಾಮಾಣಿಕ ಪ್ರಯತ್ನಗಳಿಗೆ ಧಕ್ಕೆ ತರುವ ಮೂಲಕ ಮಾನ್ ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ ಎಂದು ದೂಷಿಸಿದರು.

ಅಂತಹ ವ್ಯಕ್ತಿಗೆ ರೈತರನ್ನು ಪ್ರತಿನಿಧಿಸಲು ಅಧಿಕಾರ ನೀಡಿದವರು ಯಾರು ಎಂದು ಪಂಜಾಬ್​​ನವರು ಚಿಂತಿಸುತ್ತಿದ್ದು, ಅವರು ತಮ್ಮ ಸರ್ಕಾರ ರಚನೆಯಾದ ಐದು ನಿಮಿಷಗಳಲ್ಲಿ ಎಂಎಸ್‌ಪಿ (ಕನಿಷ್ಠ ಬೆಂಬಲ ಬೆಲೆ) ನೀಡುವ ಭರವಸೆಯಿಂದ ಹಿಂದೆ ಸರಿದು ಮೋಸ ಮಾಡಿದ್ದು, ಅದೇ ರೀತಿ ಪ್ರವಾಹದಿಂದಾದ ಹಾನಿಗೆ ಪರಿಹಾರ ನೀಡದೆ ಪಂಜಾಬ್ ರೈತರನ್ನು ವಂಚಿಸಿದರು ಎಂದು ಸೂಚಿಸಿದರು.

";