This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics News

ಚುನಾವಣೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಕಲ ಸಜ್ಜು : ಸುನೀಲ್‍ಕುಮಾರ

ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023

ಚುನಾವಣೆ ಪ್ರಕ್ರಿಯೆಗೆ ಜಿಲ್ಲಾಡಳಿತ ಸಕಲ ಸಜ್ಜು : ಸುನೀಲ್‍ಕುಮಾರ

ಬಾಗಲಕೋಟೆ

ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ಗೆ ಘೋಷಣೆಯಾದ ಹಿನ್ನಲೆಯಲ್ಲಿ ಚುನಾವಣೆಗೆ ಬಾಗಲಕೋಟೆ ಜಿಲ್ಲಾಡಳಿತ ಸಕಲ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಆಗಿರುವ ಜಿಲ್ಲಾ ಚುನಾವಣಾಧಿಕಾರಿ ಪಿ.ಸುನೀಲ್‍ಕುಮಾರ ತಿಳಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಈ ಚುನಾವಣೆ ಹಿನ್ನಲೆಯಲ್ಲಿ ಏಪ್ರೀಲ್ 13 ರಂದು ಅಧಿಸೂಚನೆ ಹೊರಡಿಸಲಾಗುತ್ತಿದೆ. ಅಭ್ಯರ್ಥಿಗಳಿಗೆ ನಾಮಪತ್ರ ಸಲ್ಲಿಸಲು ಏಪ್ರೀಲ್ 20 ಕೊನೆಯ ದಿನವಾಗಿದೆ. ಏಪ್ರೀಲ್ 21 ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನಾಮಪತ್ರ ಹಿಂಪಡೆಯಲು ಏಪ್ರೀಲ್ 24 ಕೊನೆಯ ದಿನವಾಗಿದೆ. ಮೇ 10 ರಂದು ಮತದಾನಾ ನಡೆಯಲಿದ್ದು, ಮತ ಏಣಿಕೆ ಮೇ 13 ರಂದು ನಡೆಯಲಿದೆ ಎಂದು ತಿಳಿಸಿದರು.

*ಜಿಲ್ಲೆಯಲ್ಲಿ 15.42 ಲಕ್ಷ ಮತದಾರರು*
——————————-
ಜಿಲ್ಲೆಯಲ್ಲಿ 7 ವಿಧಾನ ಸಭಾ ಕ್ಷೇತ್ರಗಳಿದ್ದು, ಪ್ರತಿ ಮತಕ್ಷೇತ್ರಕ್ಕೆ ಈಗಾಗಲೇ ಚುನಾವಣಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಜಿಲ್ಲೆಯಲ್ಲಿ ಒಟ್ಟು 1721 ಮತಗಟ್ಟೆಗಳಿದ್ದು, ಅದರಲ್ಲಿ ಎರಡು ಹೆಚ್ಚುವರಿ ಮತಗಟ್ಟೆಗಳಿವೆ. ಮಾರ್ಚ 29ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು 1542095 ಮತದಾರರಿದ್ದು, ಅದರಲ್ಲಿ 769068 ಪುರುಷ, 772946 ಮಹಿಳಾ ಮತದಾರರು ಹಾಗೂ 81 ಇತರೆ ಮತದಾರರಿದ್ದಾರೆ. ಯುವ ಮತದಾರರು ಒಟ್ಟು 33077 ಇದ್ದಾರೆ. ಸೇವಾ ಮತದಾರರು ಒಟ್ಟು 3278 ಇದ್ದಾರೆ ಎಂದರು.

*ನೀತಿ ಸಂಹಿತೆಗೆ ತಂಡಗಳ ರಚನೆ*
—————————
ಜಿಲ್ಲೆಯಲ್ಲಿ ಜಿ.ಪಂ ಸಿಇಓ ಮಾದರಿ ನೀತಿ ಸಂಹಿತೆಯ ನೋಡಲ್ ಅಧಿಕಾರಿಯಾಗಿದ್ದು, 7 ಮತಕ್ಷೇತ್ರ ಸೇರಿ ಒಟ್ಟು 13 ಸೆಕ್ಟರ್ ಅಧಿಕಾರಿಗಳು, 54 ಪ್ಲಾಯಿಂಗ್ ಸ್ಕ್ವಾಡ್, 24 ಚೆಕ್‍ಪೋಸ್ಟ, 72 ಸ್ಟಾಟಿಕ್ ಸರ್ವೆಲೆನ್ಸ್ ತಂಡ, 22 ವಿಡಿಯೋ ಸರ್ವೇಲೆನ್ಸ್ ತಂಡಗಳನ್ನು ರಚಿಸಲಾಗಿದೆ. ಜಿಲ್ಲೆಗೆ ಈಗಾಗಲೇ 3299 ಸಿಯು, 2317 ಸಿಯು ಹಾಗೂ 2505 ವಿವಿಪ್ಯಾಟ್ ಮಸೀನ್‍ಗಳು ಬಂದು ಪ್ರಥಮ ಹಂತದ ತಪಾಸಣೆ ಮಾಡಲಾಗಿದೆ. ವಿದ್ಯುನ್ಮಾನ ಯಂತ್ರ ಹಾಗೂ ವಿವಿಪ್ಯಾಟ್‍ಗಳನ್ನು ಬಳಸಿ ಮತದಾನ ಮಾಡುವ ಕುರಿತು ಮತದಾರರಲ್ಲಿ ಜಾಗೃತಿ ಕಾರ್ಯಕ್ರಮ ಮಾಡಲಾಗುತ್ತಿದೆ. ಅದಕ್ಕಾಗಿ 140 ಮಸೀನ್‍ಗಳನ್ನು ಬಳಕೆ ಮಾಡಲಾಗುತ್ತಿದೆ ಎಂದರು.

*ದೂರು ನಿರ್ವಹಣಾ ಕೇಂದ್ರ*
———————–
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ದೂರು ನಿರ್ವಹಣಾ ಕೇಂದ್ರ ಸ್ಥಾಪಿಸಲಾಗಿದ್ದು, ಮತದಾರರು ಹಾಗೂ ಸಾರ್ವಜನಿಕರು ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿರುವ ಬಗ್ಗೆ ಕಂಡುಬಂದಲ್ಲಿ ದೂರು ನಿರ್ವಹಣಾ ಕೇಂದ್ರದ ದೂರವಾಣಿ ಸಂಖ್ಯೆ 1950ಕ್ಕೆ ಕರೆ ಮಾಡಿ ದೂರು ದಾಖಲಿಸಬಹುದಾಗಿದೆ. ಅದೇ ರೀತಿಯ ಜಿಲ್ಲೆಯ ಪ್ರತಿಯೊಂದು ಮತಕ್ಷೇತ್ರಗಳಲ್ಲಿಯೂ ಸಹ ದೂರು ನಿರ್ವಹಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿಯೂ ಸಹ ದೂರು ಸಲ್ಲಿಸಬಹುದಾಗಿದೆ ಎಂದರು. ಮುಧೋಳ ಮತಕ್ಷೇತ್ರಕ್ಕೆ (08350-283034), ತೇರದಾಳ ಮತಕ್ಷೇತ್ರಕ್ಕೆ (08353-230555), ಜಮಖಂಡಿ ಮತಕ್ಷೇತ್ರ (08353-220023), ಬೀಳಗಿ ಮತಕ್ಷೇತ್ರ (08425-275227), ಬಾದಾಮಿ ಮತಕ್ಷೇತ್ರ (08357-200228), ಬಾಗಲಕೋಟೆ ಮತಕ್ಷೇತ್ರ (08354-796784), ಹುನಗುಂದ ಮತಕ್ಷೇತ್ರ (08351-200098)ಗೆ ಕರೆ ಮಾಡಬಹುದಾಗಿದೆ ಎಂದರು.

*ಹಣ, ಸಾಮಗ್ರಿ, ಡ್ರಗ್ಸ್, ಸಾರಾಯಿ ಜಪ್ತಿ*
——————————–
ಸಾರ್ವತ್ರಿಕ ಚುನಾವಣೆ ಘೋಷಣೆ ಪೂರ್ವದಲ್ಲಿ ಹಣ, ಸಾಮಗ್ರಿ ಹಾಗೂ ಅಬಕಾರಿ ಇಲಾಖೆಗೆ ಸಂಬಂಧಿಸಿದ ಡ್ರಗ್ಸ್ ಸಾರಾಯಿ ಸೇರಿದಂತೆ ಒಟ್ಟು 10821926 ರೂ.ಗಳಷ್ಟು ಜಪ್ತ ಮಾಡಲಾಗಿದೆ. ಅದರಲ್ಲಿ 29.81 ಲಕ್ಷ ಹಣ, 91.36 ಲಕ್ಷ ರೂ.ಗಳ ಮೌಲ್ಯದ 3283 ಲೀಟರ್ ಲಿಕ್ಕರ್, 67 ಸಾವಿರ ರೂ.ಗಳ ಮೌಲ್ಯದ 2178 ಗ್ರಾಂ. ಡ್ರಗ್ಸ್ ಹಾಗೂ 6768 ಇಸ್ತ್ರೀ ಪೆಟ್ಟಿಗೆ, 156 ಸೀರೆ, 2 ಸಾವಿರ ಕನ್ನಡಿ, 1590 ಲೀಟರ್ ಪಾಮ್ ಐಲ್, ಒಂದು ಲೋಡ್ ಬೆಡ್‍ಸೀಟ್‍ಗಳು ಒಳಗೊಂಡಿವೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಸೇರಿದಂತೆ ಇತರರು ಉಪಸ್ಥಿತರಿದ್ದರು.

*ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿಗಳ ವಿವರ*
————————————————-
ಮುಧೋಳ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿಯಾಗಿ ಯುಕೆಪಿಯ ವಿಶೇಷ ಜಿಲ್ಲಾಧಿಕಾರಿ ಸೋಮಲಿಂಗ ಗೆನ್ನೂರ, ಸಹಾಯಕ ಚುನಾವಣಾಧಿಕಾರಿ ಮುಧೋಳ ತಹಶೀಲ್ದಾರ ವಿನೋದ ಹತ್ತಳ್ಳಿ, ತೇರದಾಳ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿ ಪಶು ಇಲಾಖೆಯ ಉಪನಿರ್ದೇಶಕ ಶಶಿಧರ ನಾಡಗೌಡ, ಸಹಾಯಕ ಚುನಾವಣಾಧಿಕಾರಿ ರಬಕವಿ-ಬನಹಟ್ಟಿ ತಹಶೀಲ್ದಾರ ದೊಡ್ಡಪ್ಪ ಹೂಗಾರ, ಜಮಖಂಡಿ ತಹಶೀಲ್ದಾರ ಸದಾಶಿವ ಮಕ್ಕೋಜಿ, ತೇರದಾಳ ತಹಶೀಲ್ದಾರ ಕಿರಣ ಬೆಳವಿ, ಜಮಖಂಡಿ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿ ಉಪವಿಭಾಗಾಧಿಕಾರಿ ಸಂತೋಶ ಕಮಗೌಡರ, ಸಹಾಯಕ ಚುನಾವಣಾಧಿಕಾರಿ ಜಮಖಂಡಿ ತಹಶೀಲ್ದಾರ ಸದಾಸಿವ ಮಕ್ಕೋಜಿ, ಬೀಳಗಿ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿ ಜಮಖಂಡಿ ಯುಕೆಪಿ ವಿಶೇಷ ಜಿಲ್ಲಾಧಿಕಾರಿ ಸಜೀದ್ ಮುಲ್ಲಾ, ಸಹಾಯಕ ಚುನಾವಣಾಧಿಕಾರಿ ಬೀಳಗಿ ತಹಶೀಲ್ದಾರ ವಿನಯ ಕುಲಕರ್ಣಿ, ಬಾಗಲಕೋಟೆ ತಹಶೀಲ್ದಾರ ಅಮರೇಶ ಪಮ್ಮಾರ, ಬಾದಾಮಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ಬಾದಾಮಿ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿ ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಸಹಾಯಕ ಚುನಾವಣಾಧಿಕಾರಿ ಬಾದಾಮಿ ತಹಶೀಲ್ದಾರ ಜೆ.ಬಿ.ಮಜ್ಜಗಿ, ಗುಳೇದಗುಡ್ಡ ತಹಶೀಲ್ದಾರ ಎಚ್.ಬಿ.ಪೀರಜಾದೆ, ಬಾಗಲಕೋಟೆ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ಸಹಾಯಕ ಚುನಾವಣಾಧಿಕಾರಿ ಹುನಗುಂದ ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ, ಬಾಗಲಕೋಟೆ ತಹಶೀಲ್ದಾರ ಅಮರೇಶ ಪಮ್ಮಾರ, ಹುನಗುಂದ ಮತಕ್ಷೇತ್ರಕ್ಕೆ ಚುನಾವಣಾಧಿಕಾರಿ ಜಿ.ಪಂ ಉಪ ಕಾರ್ಯದರ್ಶಿ ಪುನಿತ ಬಿ.ಆರ್, ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ ಬಸಲಿಂಗಪ್ಪ ನಾಯ್ಕೋಡಿ, ಇಲಕಲ್ಲ ತಹಶೀಲ್ದಾರ ಬಸವರಾಜ ಮೆಳವಣಕಿ ನೇಮಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

";