ನನ್ನ ಒಬ್ಬ ಮಿತ್ರರ ಮಗ ಈಗ ತಾನೇ ಡಿಗ್ರಿ ಮುಗಿಸಿ ಕೃಷಿ ವೃತ್ತಿ ಮಾಡ್ತಾ ಇದ್ದಾನೆ.
ನೋಡಲು ಸುಂದರನೂ ಹೌದು.
ಸುಮಾರು ಮೂರ್ನಾಲ್ಕು ವರ್ಷ ಕೃಷಿ ಮಾಡುತ್ತಿದ್ದಂತೆ ಮನೆಯಲ್ಲಿ ಅವನ ಮದುವೆ ವಿಚಾರ ಶುರು ಮಾಡಿದರು.
ಸರಿ,
ತಂದೆ ತಾಯಿಯರ ಇಚ್ಛೆಯಂತೆ ಒಂದು ಕನ್ಯಾ ನೋಡಲು ಹೋದರು, ಹುಡುಗಿಯೂ ನೋಡಲು ಚೆಲುವೆ,
ಒಳ್ಳೆಯ ಮನೆತನ,
ನಮ್ಮ ಹುಡುಗ ಹುಡುಗಿಯನ್ನು ಒಪ್ಪಿಕೊಂಡ. ಅವಳೂ ಒಪ್ಪಿದಳು, ಇನ್ನೇನು ನಿಶ್ಚಿತಾರ್ಥ ಕಾರ್ಯಕ್ರಮ ಆಗುವುದರಲ್ಲಿ ಇತ್ತು.
ಹುಡುಗಿಯ ತಾಯಿ ಒಂದು ಕರಾರು ಮಾಡಿದಳು..
ಅದೇನು ಅಂತೀರಾ..?
ಹುಡುಗನ ಆದಾಯ ಎಷ್ಟು ಎಂದು ಅದರ ದೃಢೀಕರಣ ಬೇಕು ಎಂದು ಕೇಳಿದಳು.
ಏಕೆಂದರೆ ಕೃಷಿ ವೃತ್ತಿಯಲ್ಲಿ ಏರು ಪೇರು ಸಹಜ….
ಅದಕ್ಕೆ ಕೃಷಿಕ ಹುಡುಗ ಒಪ್ಪಲಿಲ್ಲ, ಅವನು ಹೇಳಿದ..
ನನ್ನ ಜಮೀನು ಚೆನ್ನಾಗಿದೆ ಅದರಲ್ಲೂ ಕೃಷಿ ಬಗ್ಗೆ ಜ್ಞಾನವಿದೆ , ಇರಲು ಸ್ವಂತ ಮನೆ ಇದೆ, ಉಳಿಮೆಗೆ ಟ್ಯಾಕ್ಟರ್ ಇದೆ.
ತಂದೆಗೆ ಒಬ್ಬನೇ ಮಗ..
ಆದರೂ ಹುಡುಗಿಯ ತಾಯಿ ತಮ್ಮ ಹಠವನ್ನು ಬಿಡಲಿಲ್ಲ….
ಹೀಗಾಗಿ ಮದುವೆ ಮುರಿದು ಬಿತ್ತು.
ಮುಂದೆ ಕೆಲವು ತಿಂಗಳ ನಂತರ ಹುಡುಗಿಯ ಪಾಲಕರು ಹುಡುಗಿಯ ಮದುವೆ ಇನ್ನೊಂದು ಕಡೆ ಫಿಕ್ಸ್ ಮಾಡಿದರು, ಮದುವೆಯೂ ನಡೆಯಿತು.
ಆದರೆ ಆ ಮದುವೆಗೆ
ಈ ಕೃಷಿಕ ಹುಡುಗನು ಹೋಗಿದ್ದ.
ಮದುವೆ ಸಮಾರಂಭದಲ್ಲಿ ಹುಡುಗಿಯ ಪಾಲಕರು ಇವನನ್ನು ನೋಡಿ ಸ್ವಲ್ಪ ಗಲಿಬಿಲಿ ಗೊಂಡರು.
ಇವನೇಕೆ ಇಲ್ಲಿ ಬಂದ..?
ಯಾರು ಆಮಂತ್ರಣ ಕೊಟ್ಟಿದ್ದರು…?
ಆದರೆ ಹೇಗೆ ಕೇಳುವುದು..
ಆದರೂ ಹುಡುಗಿಯ ತಾಯಿಯ ಒತ್ತಡದ ಮೇಲೆ ಹುಡುಗಿಯ ತಂದೆ
ಬಂದು ಯಾಕ್ರಿ ನೀವು ಇಲ್ಲಿ ..? ಎಂದು ಕೇಳಿಯೇ ಬಿಟ್ಟರು..
ಅದಕ್ಕೆ ಕೃಷಿಕ ಹುಡುಗ ಉತ್ತರಿಸಿದ..
ನಾನು ವರ ನ ಕಡೆಯವನು
ಈ ಹುಡುಗ ನನ್ನ ಫಾರ್ಮ್ ಹೌಸ್ ನಲ್ಲಿ ರೇಷ್ಮೆ ಬೆಳೆ ಬೆಳೆಸುವ ಡೆಮೋಸ್ಟೇಟರ್.
ಇವನಿಗೆ ನಾನು ತಿಂಗಳಿಗೆ
₹ 15000 ಕೊಟ್ಟು ಕೆಲಸಕ್ಕೆ ಇಟ್ಟಿದ್ದೇನೆ ಎಂದು ನಗುತ್ತಾ ಹೇಳಿದ.
ಹುಡುಗಿಯ ಪಾಲಕರ ಅವಸ್ಥೆ
ಏನಾಗಿರಬೇಕು.?
ಈಗೀಗ ಇದು ನಮ್ಮ ಸಮಾಜದಲ್ಲೂ ನಡೆಯುತ್ತಿದೆ.
ಇದಕ್ಕೆ ಹೊಣೆ
ವರನ ಪಾಲಕರೋ..?
ಹುಡುಗಿಯ ಪಾಲಕರೋ..?
ಅದರಲ್ಲೂ ಹುಡುಗಿಯ ತಾಯಿಯ ಕಾರಬಾರೋ..?
ಇವರಿಗೆ ಒಳ್ಳೆಯ ಸುಸಂಸ್ಕೃತ ಸಂಬಂಧಗಳು ಬೇಕಿಲ್ಲ,
ಹುಡುಗನ ಚರಿತ್ರೆಗಿಂತ ಅವನ ವರಮಾನ ಮೇಲೆ ಹೆಚ್ಚು ನಂಬಿಕೆ.
ಅಲ್ಲವೇ..?
ಇದಕ್ಕೆ ಉತ್ತರವೇನು..?
*ಕಾಲಾಯ ತಸ್ಮೈ ನಮಃ..*