This is the title of the web page
This is the title of the web page

Live Stream

July 2024
S M T W T F S
 123456
78910111213
14151617181920
21222324252627
28293031  

| Latest Version 9.4.1 |

Entertainment News

‘ಪ್ರಭಾಸ್ ನಟನೆಯ ಕಲ್ಕಿ’ ಚಿತ್ರದಲ್ಲಿ ಬಳಕೆಯಾದ ಕಾರಿಗಿದೆ ಆಳೆತ್ತರದ ಟೈಯರ್

‘ಪ್ರಭಾಸ್ ನಟನೆಯ ಕಲ್ಕಿ’ ಚಿತ್ರದಲ್ಲಿ ಬಳಕೆಯಾದ ಕಾರಿಗಿದೆ ಆಳೆತ್ತರದ ಟೈಯರ್

ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಾಣಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ. ಈ ಸಿನಿಮಾದ ಬಜೆಟ್ 600 ಕೋಟಿ ರೂಪಾಯಿ ಎನ್ನಲಾಗಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಪ್ರಭಾಸ್ ಅವರು ‘ಬುಜ್ಜಿ’ನ ಪರಿಚಯಿಸಿದ್ದರು. ಬುಜ್ಜಿ ಎಂದರೆ ಕಾರು. ಈ ಸಿನಿಮಾದಲ್ಲಿ ಬುಜ್ಜಿ ಪ್ರಭಾಸ್​ನ ಗೆಳೆಯನಂತೆ ಇರಲಿದೆ. ಈ ಕಾರು ಹಲವು ವಿಶೇಷತೆಗಳನ್ನು ಹೊಂದಿದೆ. ಈ ಕಾರನ್ನು ಭಾರತದ ಸಂಸ್ಥೆ ಮಹಿಂದ್ರಾ ಹಾಗೂ ಜಯೇಮ್ ಆಟೋಮೇಟಿವ್ ಕೊಯಿಮತ್ತೂರಿನಲ್ಲಿ ಸಿದ್ಧಪಡಿಸಿದೆ. ಇದು ಫ್ಯೂಚರ್ ಕಾರು ಎನ್ನುವ ಕಾನ್ಸೆಪ್ಟ್​ನಲ್ಲಿ ಸಿದ್ಧಪಡಿಸಲಾಗಿದೆ. ಸಾಮಾನ್ಯ ವ್ಯಕ್ತಿಯ ಭುಜಕ್ಕೆ ಈ ಕಾರಿನ ಟೈಯರ್ ಬರುತ್ತದೆ. ಈ ಕಾರಿನ ಉದ್ದ 6070 ಮಿಲಿ ಮೀಟರ್​, ಅಗಲ 3380 ಮಿಲಿ ಮೀಟರ್ ಹಾಗೂ ಎತ್ತರ 2186 ಮಿಲಿ ಮೀಟರ್​ ಇದೆ.

ಕಾರಿನ ವೀಲ್ಸ್ ಸಾಕಷ್ಟು ಗಮನ ಸೆಳೆದಿದೆ. ಇದನ್ನು CEAT ಟೈಯರ್ಸ್​ನವರು ವಿಶೇಷವಾಗಿ ಸಿದ್ಧಪಡಿಸಿದ್ದಾರೆ. ಈ ಕಾರಿನ ತೂಕ 6 ಟನ್ ಇದೆ. ‘ಕಲ್ಕಿ 2898 ಎಡಿ’ ಚಿತ್ರ ಭವಿಷ್ಯದ ಕಥೆಯನ್ನು ಹೊಂದಿದೆ. ಹೀಗಾಗಿ, ಇದು ಭವಿಷ್ಯದ ಕಾರು ಎನ್ನುವ ರೀತಿಯಲ್ಲಿ ಇದನ್ನು ಸಿದ್ಧಪಡಿಸಲಾಗಿದೆ. ಸಿನಿಮಾದಲ್ಲಿ ಪ್ರಭಾಸ್ ಅವರೇ ತಮ್ಮ ಕೈಯ್ಯಾರೆ ಈ ಕಾರನ್ನು ಸಿದ್ಧಪಡಿಸೋ ರೀತಿಯಲ್ಲಿ ತೋರಿಸಲಾಗಿದೆಯಂತೆ. ಈ ಕಾರಿನ ಟೈಯರ್​ಗಳು ಎಲ್ಲಾ ದಿಕ್ಕಿನಲ್ಲೂ ತಿರುಗುತ್ತವೆ.

ಹಣ ಖರ್ಚಾಗಿದ್ದು ಏಕೆ ಎನ್ನುವ ಪ್ರಶ್ನೆ ಮೂಡೋದು ಸಹಜ. ಇದಕ್ಕೆ ಉತ್ತರ ಹುಡುಕುತ್ತಾ ಹೋದರೆ ದೊಡ್ಡ ಪಟ್ಟಿಯೇ ಸಿಗುತ್ತದೆ. ಈ ಪಟ್ಟಿಯಲ್ಲಿ ಈ ಚಿತ್ರದಲ್ಲಿ ಬಳಕೆಯಾದ ಕಾರು ಕೂಡ ಸೇರಿದೆ. ವಿಶೇಷವಾಗಿ ತಯಾರಿಸಿದ ಈ ಕಾರು ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಕಾರಿನ ವಿಡಿಯೋ ವೈರಲ್ ಆಗಿದೆ.