This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics News

ಶಾಂತಿಯುತವಾಗಿ ನಡೆದ ಮೊದಲ ಹಂತದ ಗ್ರಾ.ಪಂ ಚುನಾವಣೆ

ನಿಮ್ಮ ಸುದ್ದಿ ಬಾಗಲಕೋಟೆ

ಜಿಲ್ಲೆಯ ಜಮಖಂಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮೊದಲ ಹಂತರದ ೮೮ ಗ್ರಾಮ ಪಂಚಾಯತಿಗಳ ೧೩೯೭ ಸ್ಥಾನಗಳಿಗೆ ಶಾಂತಿಯುತವಾಗಿ ನಡೆದಿದ್ದು, ಯಾವುದೇ ಅಹಿತಕರ ಘಟನೆ ನಡೆದಿರುವ ಬಗ್ಗೆ ವರದಿಯಾಗಿರುವದಿಲ್ಲ.

ಮೊದಲ ಹಂತದ ಚುನಾವಣೆಗೆ ಮತದಾನ ಬೆಳಿಗ್ಗೆ ೭ ರಿಂದ ಪ್ರಾರಂಭವಾಗಿದ್ದು, ಪ್ರಾರಂಭದಲ್ಲಿ ಮತದಾನ ಮಂದಗತಿಯಲ್ಲಿ ನಡೆದರು ನಂತರದಲ್ಲಿ ಚುರುಕಾಗಿ ನಡೆಯಿತು. ೯ ಗಂಟೆ ಸುಮಾರಿಗೆ ಶೇ.೮.೧ ರಷ್ಟು ಮತದಾನವಾದರೆ, ೧೧ ಗಂಟೆಗೆ ಶೇ.೨೫.೧೫ ರಷ್ಟು, ಮಧ್ಯಾಹ್ನ ೧ಕ್ಕೆ ೪೬.೦೮ ರಷ್ಟು ಹಾಗೂ ೩ ಗಂಟೆಗೆ ಶೇ.೬೬.೦೫ ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.

ಉತ್ಸಾಹ ತೋರಿದ ಮತದಾರರು
ವಿವಿಧ ಗ್ರಾಮದ ಮತಗಟ್ಟೆಗಳಲ್ಲಿ ಮಾಧ್ಯಮ ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಮತದಾರರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಉತ್ಸಾಹದಿಂದ ಮತದಾನ ಮಾಡಿದ್ದು, ಕಂಡುಬAದಿತು. ಪುರುಷರಿಗಿಂತ ಮಹಿಳಾ ಮತದಾರರು ಮತಗಟ್ಟೆಯ ಮುಂದೆ ಸರತಿ ಸಾಲಿನಲ್ಲಿ ಹೆಚ್ಚಾಗಿ ನಿಂತಿದ್ದರು. ಬೆಳಿಗ್ಗೆ ೧೧ ಗಂಟೆಗೆ ಬೀಳಗಿ ತಾಲೂಕಿನ ಸುನಗ ಗ್ರಾಮದ ಮತಗಟ್ಟೆ ನಂ.೮೨ ರಲ್ಲಿ ಒಟ್ಟು ೯೩೧ ಮತದಾರರ ಪೈಕಿ ೨೨೮ ಮತದಾನವಾಗಿತ್ತು. ಅದರಲ್ಲಿ ೯೭ ಪುರುಷರು, ೧೩೩ ಮಹಿಳೆಯರು ಮತದಾನ ಮಾಡಿದ್ದರು.

ಕುಂದರಗಿ ಎಲ್‌ಟಿ ೧ ಮತ್ತು ೨ರ ಮತಗಟ್ಟೆ ೧೩೫ರಲ್ಲಿ ೧೦೪೬ ಒಟ್ಟು ಮತದಾರರ ಪೈಕಿ ೨೦೫, ಅರಕೇರಿ ಗ್ರಾಮಕ್ಕೆ ತೆರಳಿದಾಗ ಮತಗಟ್ಟೆ ಸಂ.೭ರಲ್ಲಿ ೮೨೯ ಮತದಾರರ ಪೈಕಿ ೨೪೦, ಮತಗಟ್ಟೆ ೯ರಲ್ಲಿ ೮೧೫ ಮತದಾರರ ಪೈಕಿ ೨೨೦, ಮತಗಟ್ಟೆ ೧೦ರಲ್ಲಿ ೯೦೭ ಮತದಾರರ ಪೈಕಿ ೩೭೩ ಜನ ಮತ ಚಲಾಯಿಸಿದ್ದರು. ನಂತರ ಕಾತರಕಿಯ ೬೭ನೇ ಮತಗಟ್ಟೆಯಲ್ಲಿ ೭೧೬ ಪೈಕಿ ೨೬೭ ಮತದಾರರು ಮತ ಚಲಾಯಿಸಿದರೆ, ೬೬ನೇ ಮತಗಟ್ಟೆಯಲ್ಲಿ ೯೪೬ಕ್ಕೆ ೩೩೯, ೬೮ನೇ ಮತಗಟ್ಟೆಯಲ್ಲಿ ೭೪೩ಕ್ಕೆ ೨೪೦ ಮತದಾರರು ಮತ ಚಲಾಯಿಸಿದ್ದು ಕಂಡುಬAದಿತು.

ಮಧ್ಯಾಹ್ನ ಮುಧೋಳನ ವಜ್ರಮಟ್ಟಿ ಗ್ರಾಮಕ್ಕೆ ತೆರಳಿದಾಗ ಮತಗಟ್ಟೆ ೬೭ ರಲ್ಲಿ ೯೪೦ಕ್ಕೆ ೪೩೧, ಮತಗಟ್ಟೆ ೬೮ ರಲ್ಲಿ ೧೦೫೦ಕ್ಕೆ ೨೦೬ ಮತ್ತು ಮತಗಟ್ಟೆ ೬೯ರಲ್ಲಿ ೬೭೬ಕ್ಕೆ ೧೫೯ ರಷ್ಟು ಮತದಾರರು ಮತ ಚಲಾಯಿಸಿದ್ದರು. ಮತಗಟ್ಟೆಗೆ ಆಗಮಿಸುವ ಮತದಾರರನ್ನು ಥರ್ಮಲ್ ಸ್ಕಾö್ಯನಿಂಗ್ ಪರೀಕ್ಷೆ ಮತ್ತು ಕೈಗಳಿಗೆ ಸ್ಯಾನಿಟರ್ ನೀಡಲಾಗುತ್ತಿತ್ತು. ಪೊಲೀಸ್ ಸಿಬ್ಬಂದಿಗಳು ಮತದಾರರನ್ನು ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತದಾರರನ್ನು ಸರತಿ ಸಾಲಿನಲ್ಲಿ ನಿಲ್ಲಿಸುವಲ್ಲಿ ನಿರತರಾಗಿದ್ದರು. ವೃದ್ದರಿಗೆ ಅಂಗವಿಕಲರಿಗೆ ವ್ಹೀಲ್ ಚೇರ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಮತಗಟ್ಟೆಗಳಿಗೆ ಅಧಿಕಾರಿಗಳ ಭೇಟಿ
ಜಿಲ್ಲಾ ಪಂಚಾಯತ ಸಿಇಓ ಟಿ.ಭೂಬಾಲನ್ ಬೀಳಗಿ ತಾಲೂಕಿನ ಸುನಗ ಮತ್ತು ಅನಗವಾಡಿ ಗ್ರಾಮಗಳಲ್ಲಿ ಮತದಾನ ನಡೆಯುತ್ತಿರುವ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ನಡೆದ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಅವರು ಎರಡನೇ ಹಂತದ ಚುನಾವಣೆಗೆ ಸಿದ್ದತೆ ಬಗ್ಗೆ ಹುನಗುಂದ ಮತ್ತು ಇಲಕಲ್ಲ ತಾಲೂಕಿನ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ತರಬೇತಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಶಾಂತಿಯುತ ಮತದಾನಕ್ಕೆ ಸೂಕ್ತ ಪೊಲೀಸ್ ಬಂದೋಬಸ್ತ ವ್ಯವಸ್ಥೆ ಸಹ ಕಲ್ಪಿಸಲಾಗಿತ್ತು. ಅಲ್ಲದೇ ಚುನಾವಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

Nimma Suddi
";