ಉಮಾಶ್ರೀ ಮನೆಯಲ್ಲಿ ಕಳ್ಳತನ
ನಿಮ್ಮ ಸುದ್ದಿ ಬಾಗಲಕೋಟೆ
ಜಿಲ್ಲೆಯ ರಬಕವಿಯ ಹೆಸ್ಕಾಂ ಕಚೇರಿ ರಸ್ತೆಯಲ್ಲಿನ ವಿದ್ಯಾನಗರದಲ್ಲಿರುವ ಮಾಜಿ ಸಚಿವೆ ಉಮಾಶ್ರೀ ಅವರ ಬಾಡಿಗೆ ಮನೆಯಲ್ಲಿ ಕಳ್ಳತನವಾಗಿದೆ.
ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು ಮನೆಯ ಬಾಗಿಲು ಮುರಿದ ಕರ್ಳಳರು ಅಪಾರ ಪ್ರಮಾಣದ ವಸ್ತು ಮತ್ತು ಹಣ ದೋಚಿದ್ದಾರೆ ಎನ್ನಲಾಗಿದೆ.
ಸದ್ಯ ಉಮಾಶ್ರೀ ಅವರು ಬೆಂಗಳೂರಲ್ಲಿ ವಾಸ ಮಾಡುತ್ತಿದ್ದು ರಬಕವಿಯ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. ಬೆಂಗಳೂರಿನಿAದ ಉಮಾಶ್ರೀ ಅವರು ಬಂದ ನಂತರ ಎಷ್ಟು ಕಳ್ಳತನ ನಡೆದಿದೆ ಎಂಬ ನಿಖರ ಮಾಹಿತಿ ದೊರೆಯಲಿದೆ.
ಈಗಾಗಲೆ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಕರುಣೇಶಗೌಡ ಮತ್ತು ಎಸ್ಐ ವಿಜಯಕುಮಾರ ಕಾಂಬಳೆ ಪರಿಶೀಲನೆ ನಡೆಸಿ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ತೇರದಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Nimma Suddi > Politics News > ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ
ಮಾಜಿ ಸಚಿವೆ ಉಮಾಶ್ರೀ ಮನೆಯಲ್ಲಿ ಕಳ್ಳತನ
Nimma Suddi Desk.02/11/2020
posted on
Leave a reply