This is the title of the web page
This is the title of the web page

Live Stream

May 2025
S M T W T F S
 123
45678910
11121314151617
18192021222324
25262728293031

| Latest Version 9.4.1 |

National News

ಸುಪ್ರೀಂ ಕೋರ್ಟ್​ : ಸಂಸದರು, ಶಾಸಕರು ಲಂಚ ಪಡೆದರೆ ಯಾವುದೇ ರಕ್ಷಣೆ ಇಲ್ಲ

ಸುಪ್ರೀಂ ಕೋರ್ಟ್​ : ಸಂಸದರು, ಶಾಸಕರು ಲಂಚ ಪಡೆದರೆ ಯಾವುದೇ ರಕ್ಷಣೆ ಇಲ್ಲ

ದೆಹಲಿ: ಇಂದು ಸುಪ್ರೀಂ ಕೋರ್ಟ್​ ಮಹತ್ವ ತೀರ್ಪುವೊಂದನ್ನು ನೀಡಿದ್ದು, ಸಂಸದರು ಮತ್ತು ಶಾಸಕರು ಸೇರಿದಂತೆ ತಮ್ಮ ಮತಗಳಿಗೆ ಮತ್ತು ಸಂಸತ್ತಿನಲ್ಲಿ ಭಾಷಣಕ್ಕಾಗಿ ಹಣದ ಲಾಭವನ್ನು ಪಡೆದರೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸುಪ್ರೀಂ ಕೋರ್ಟ್‌ನ ಏಳು ನ್ಯಾಯಾಧೀಶರ ಪೀಠ ಹೇಳಿದೆ ಎಂದು ಮಾಹಿತಿ ತಿಳಿದು ಬಂದಿದೆ.

ಪಿವಿ ನರಸಿಂಹರಾವ್ ಪ್ರಕರಣಕ್ಕೆ ಸಂಬಂಧಿಸಿದಂತೆ 1998ರ ತೀರ್ಪನ್ನು ತೆಗೆದು ಹಾಕಿದ್ದು, ಸದನದಲ್ಲಿ ಮತ ಅಥವಾ ಭಾಷಣಕ್ಕೆ ಲಂಚ ಪಡೆದ ಆರೋಪದ ಮೇಲೆ ಸಂಸದರು/ಶಾಸಕರನ್ನು ಕಾನೂನು ಕ್ರಮದಿಂದ ವಿನಾಯಿತಿ ಪಡೆಯಲು ಸಾಧ್ಯವಿಲ್ಲ. ಶಾಸಕಾಂಗದ ಸದಸ್ಯರಿಂದ ಭ್ರಷ್ಟಾಚಾರ ನಡೆದರೆ ಅದು ಸಾರ್ವಜನಿಕರ ಮೇಲೆ ಪರಿಣಾಮವನ್ನು ಉಂಟು ಮಾಡುತ್ತದೆ. ಅದು ಸಾರ್ವಜನಿಕ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತದೆ ಎಂದು ಏಳು ಪೀಠಗಳು ಸೂಚಿಸಿದೆ.

ಸಂಸತ್ ಅಥವಾ ಶಾಸಕಾಂಗದ ಕಾರ್ಯಚಟುವಟಿಕೆಗೆ ಸಂಬಂಧಿಸದ ಯಾವುದೇ ಸವಲತ್ತನ್ನು ನೀಡಿದರೆ, ಅದು ಕಾನೂನಿನ ಚೌಕಟ್ಟಿನ ಒಳಗೆ ಬರದೆವಿರುವ ವಿನಾಯಿತಿಗಳನ್ನು ಅನುಭವಿಸುವ ವರ್ಗವನ್ನು ಸೃಷ್ಟಿಸಲು ಕಾರಣವಾಗುತ್ತದೆ ಎಂದು ಹೇಳಿದ್ದು, ಸಂಸತ್ತಿನ ಸವಲತ್ತುಗಳು ಮೂಲಭೂತವಾಗಿ ಸದನದ ಎಲ್ಲರಿಗೂ ಸಂಬಂಧಿಸಿರುವುದು ಎಂದು ಹೇಳಲಾಗಿದೆ. ರಾಜ್ಯಸಭೆಗೆ ಅಥವಾ ರಾಷ್ಟ್ರಪತಿ/ಉಪರಾಷ್ಟ್ರಪತಿ ಕಚೇರಿಗೆ ನಡೆಯುವ ಚುನಾವಣೆಗಳು ಸಂಸದೀಯ ಸವಲತ್ತುಗಳಿಗೆ ಅನ್ವಯವಾಗುವ ಸಾಂವಿಧಾನಿಕ ನಿಬಂಧನೆಗಳ ವ್ಯಾಪ್ತಿಯಲ್ಲಿ ಬರುತ್ತವೆ ಎಂದು ಸುಪ್ರೀಂ ಕೋರ್ಟ್​​ ವಿವರಿಸಿದೆ.

Nimma Suddi
";