ಶಿಮ್ಲಾ: ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಬುಧವಾರ ಕೆಲವು ಬಂಡಾಯ ಶಾಸಕರ ಮೂಲಕ ಸರ್ಕಾರಕ್ಕೆ ಸನ್ನಿಹಿತ ಬೆದರಿಕೆಯ ಬಗ್ಗೆ ಹೇಳಿಕೊಂಡಿದ್ದು ಸರ್ಕಾರವನ್ನು ಉರುಳಿಸಲು ಬಿಜೆಪಿಯ ಪಿತೂರಿ ವಿಫಲವಾಗಿದೆ ಎಂದು ಹೇಳಿದರು.
ಅದೇ ವೇಳೆ ದಿವಂಗತ ವೀರಭದ್ರ ಸಿಂಗ್ ಅವರ ಪುತ್ರ ಹಿಮಾಚಲ ಪ್ರದೇಶದ ಸಚಿವ ವಿಕ್ರಮಾದಿತ್ಯ ಸಿಂಗ್ ಅವರ ರಾಜೀನಾಮೆಯನ್ನು ಅಂಗೀಕರಿಸುವ ಪ್ರಶ್ನೆಯೇ ಇಲ್ಲ ಎಂದು ಸುಖು ಹೇಳಿದರು. ವಿಕ್ರಮಾದಿತ್ಯ ಸಿಂಗ್ ನನ್ನ ಕಿರಿಯ ಸಹೋದರನಿದ್ದಂತೆ. ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಸುಖು ತಿಳಿಸಿದರು.
ಸದನ ಕಲಾಪವನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡುವ ಮುನ್ನ ಹಿಮಾಚಲ ಪ್ರದೇಶ ವಿಧಾನ ಸಭೆಯು 2024-25ರ ಬಜೆಟ್ ಮತ್ತು ಸಂಬಂಧಿತ ವಿನಿಯೋಗ ಮಸೂದೆಯನ್ನು ಅಂಗೀಕರಿಸಿತು.
ಮಂಗಳವಾರ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅಭಿಷೇಕ್ ಮನು ಸಿಂಘ್ವಿ ಅವರ ಸೋಲು ಮತ್ತು ಸುಖು ಸಂಪುಟದಿಂದ ಲೋಕೋಪಯೋಗಿ ಸಚಿವ ವಿಕ್ರಮಾದಿತ್ಯ ಸಿಂಗ್ ರಾಜೀನಾಮೆ ಘೋಷಿಸಿದ ನಂತರ ರಾಜಕೀಯ ಸನ್ನಿವೇಶವು ನಾಟಕೀಯವಾಗಿ ಬದಲಾದ ಕಾರಣ ವಿಧಾನಸಭೆಯನ್ನು ನಿಗದಿತ ದಿನಕ್ಕಿಂತ ಒಂದು ದಿನ ಮುಂಚಿತವಾಗಿ ಮುಂದೂಡಲಾಯಿತು.